ಜನನಿಬಿಡ ಸ್ಥಳಗಳಲ್ಲಿ ಪಿಕ್ ಪ್ಯಾಕೆಟ್ ಮಾಡಿದವರ ಬಂಧನ
1 min readಜನನಿಬಿಡ ಸ್ಥಳಗಳಲ್ಲಿ ಪಿಕ್ ಪ್ಯಾಕೆಟ್ ಮಾಡಿದವರ ಬಂಧನ
ಹಣ, ಒಡವೆ ಕಳವು ಮಾಡುತ್ತಿದ್ದ ಕಳ್ಳಿಯರ ವಶ, ಮಾಲು ಜಫ್ತಿ
ರಾಜ್ಯದ ವಿವಿಧ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ಹೊಂಚು ಹಾಕಿ, ಪ್ರಯಾಣಿಕರ ಬಳಿರುವ ನಗರದು, ಒಡವೆಗಳನ್ನು ಕಳವು ಮಾಡುತ್ತಿದ್ದ ಮಹಿಳೆಯರ ಹೆಡೆಮುರಿ ಕಟ್ಟುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಶ್ವಿಯಾಗಿದ್ದಾರೆ. ಮೂವರನ್ನು ಬಂಧಿಸಿರುವ ಪೊಲೀಸರು, ಅಪಾರ ಪ್ರಮಾಣದ ನಗ, ನಗದು ವಶಕ್ಕೆ ಪಡೆಯಲಾಗಿದೆ.
ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಒಡವೆ ಮತ್ತು ಹಣ ಕಳುವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಒಡವೆ ಮತ್ತು ನಗದು ವಶಪಡಿಸಿಕೊಳ್ಳುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣದಲ್ಲಿಯೇ ಮಹಿಳೆಯರ ಸರಗಳವು ನಡೆಯುವುದು, ಪಿಕ್ ಪಾಕೆಟ್ ಆಗುವ ಪ್ರಕರಣಗಳು ಹೆಚ್ಚಾದ ಪರಿಣಾಮ ಜಿಲ್ಲಾ ಪೊಲೀಸ್ ಇಲಾಖೆ ಕಳ್ಳರ ಬಂಧನಕ್ಕಾಗಿಯೇ ವಿಶೇಷ ತಂಡ ರಚಿಸಿತ್ತು.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಗೌರಿಬಿದನೂರು ಸಿಪಿಐ ಮತ್ತು ಗೌರಿಬಿದನೂರು ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಒಳಗೊಂಡ0ತೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಗೌರೀಬಿದನೂರು ನಗರದ ಕೆಎಸ್‌ಆರ್‌ಟಿ.ಸಿ ಬಸ್ಸ್ ನಿಲ್ದಾಣದ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳಿಯರ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಈ ಹಿಂದೆ ಸರಗಳವು ಮಾಡಿ ಪರಾರಿಯಾಗಿದ್ದ ಕಳ್ಳಿಯರ ತಂಡ ಮತ್ತೆ ಡಿಸೆಂಬರ್ 23ರಂದು ಗೌರಿಬಿದನೂರಿಗೆ ಆಗಮಿಸಿತ್ತು.
ಈ ವಿಚಾರದ ತಿಳಿದ ವಿಶೇಷ ತಂಡ ಗೌರೀಬಿದನೂರು ನಗರ ಠಾಣೆಯ ಅಪರಾಧ ಸಿಬ್ಬಂದಿ ಮಹಿಳೆಯರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಗುಲ್ಬರ್ಗಾ ಜಿಲ್ಲೆಯ ಲಂಬಾಡಾ ತಾಂಡಾದ ರೇಖಾ ಬಾಯಿ, ಗುಲ್ಬರ್ಗ ನಗರದ ರೋಜಾ, ಬಾಪು ನಗರದ ಕರೀನಾ ಎಂಬುವರನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತುಮಕೂರು, ಹೊಳೆನರಸೀಪುರ, ಹಲಸೂರು, ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದು ಬಹಿರಂಗವಾಗಿದೆ.
ಆರೋಪಿಗಳು ಬೆಳಿಗ್ಗೆ ಮತ್ತು ಸಂಜೆ ವೇಳೆ ಸಾರ್ವಜನಿಕರು ಕೆಲಸಕ್ಕೆ ಹೋಗುವ ಸಮಯ ಮತ್ತು ಕೆಲಸ ಮುಗಿಸಿ ವಾಪಸ್ ಬರುವ ವೇಳೆ ನೂಕುನುಗ್ಗಲು ಜಾಗದಲ್ಲಿ ಜನರಿಗೆ ಗೊತ್ತಾಗದ ರೀತಿಯಲ್ಲಿ ಕೈ ಚಳಕ ತೋರಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಬ್ಯಾಗ್‌ನಲ್ಲಿರುವ ಒಡವೆ ಮತ್ತು ಹಣ ಕಳುವು ಮಾಡಿ ಪರಾರಿಯಾಗುತ್ತಿರುವ ದೃಶ್ಯಗಳು ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದ್ದರಿಂದ ಹಲವು ಪ್ರಕರಣಗಳು ಪತ್ತೆಯಾಗಿವೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಸೆ, ಅಪರ ಪೊಲೀಸ್ ಅಧೀಕ್ಷಕ ರಾಜಾ ಇಮಾಮ್ ಖಾಸಿಂ, ಡಿವೈಎಸ್‌ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಗೌರಿಬಿದನೂರು ಸಿಪಿಐ ಕೆ.ಪಿ. ಸತ್ಯನಾರಾಯಣ್, ಗೌರಿಬಿದನೂರು ನಗರ ಠಾಣೆ ಪಿಎಸ್‌ಐ ಚಂದ್ರಕಲಾ ಮತ್ತು ಸಿಬ್ಬಂದಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಗೌರಬಿದನೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳುವು ಮಾಡಿದ್ದ ಒಡವೆ ಮತ್ತು ಹಣ ಜಫ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.