ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ
1 min readಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ
ವಾಹನ ಸವಾರರಿಗೆ ರಸ್ತೆ ಸಂಚಾರ ನಿಯಮಗಳ ಜಾಗೃತಿ
ದ್ವಿ ಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಎಸ್‌ಐ ವೇಣುಗೋಪಾಲ್ ಮನವಿ ಮಾಡಿದರು. ಶಿಡ್ಲಘಟ್ಟ ನಗರ ಠಾಣೆ ಪೊಲೀಸರಿಂದ ನಗರದ ಸಾರಿಗೆ ಬಸ್ ನಿಲ್ದಾಣದ ಬಳಿ ಅಪರಾಧ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
ದ್ವಿ ಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಎಸ್‌ಐ ವೇಣುಗೋಪಾಲ್ ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿಡ್ಲಘಟ್ಟ ನಗರ ಠಾಣೆ ಎಸ್‌ಐ ವೇಣುಗೋಪಾಲ್,ದ್ವಿ ಚಕ್ರ ವಾಹನ ಅಥವಾ ಯಾವುದೆ ವಾಹನಗಳನ್ನು ಚಾಲನೆ ಮಾಡುವಾಗ ಕಡ್ಡಾಯವಾಗಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು, ಇದರಿಂದ ನಿಮಗೂ ಒಳ್ಳೆಯದು, ನಿಮ್ಮನ್ನು ನಂಬಿಕೊ0ಡ ನಿಮ್ಮ ಕುಟುಂಬದವರ ಹಿತ ದೃಷ್ಟಿಯಿಂದಲೂ ಒಳ್ಳೆಯದು ಎಂದರು.
ಪಾನ ಮತ್ತರಾಗಿ ವಾಹನ ಚಲಾಯಿಸುವುದು, ನಿಗಧಿತ ಸಂಖ್ಯೆಗಿ0ತಲೂ ಹೆಚ್ಚು ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲನೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಕೋರಿದರು. ಅಪ್ರಾಪ್ತರು ಬೈಕ್ ಚಾಲನೆ ಮಾಡಬಾರದು, ಒಂದು ವೇಳೆ ಬೈಕ್ ಚಾಲನೆ ಮಾಡಿದಲ್ಲಿ ಅಪ್ರಾಪ್ತರು ಮತ್ತು ಅವರಿಗೆ ಬೈಕ್ ಕೊಟ್ಟ ಅವರ ಪೋಷಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾರ್ಯಕ್ರಮದ ನಂತರ ಶಾರದಾ ಶಾಲಾ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಾಹನ ಚಾಲನೆ ವೇಳೆ ಅನುಸರಿಸಬೇಕಾದ ಸಂಚಾರಿ ನಿಯಮಗಳನ್ನು ಪಾಲಿಸಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಕುಡಿದು ವಾಹನ ಓಡಿಸಬೇಡಿ ಎಂದು ಘೋಷಣೆಗಳನ್ನು ಕೂಗಿ ಅರಿವು ಮೂಡಿಸಿದರು.