ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ
1 min readಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ
ಘಾಟಿ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು
ಶಸ್ತçಚಿಕಿತ್ಸೆಗೆಂದು ಅಮೆರಿಕಾಗೆ ತೆರಲಿರುವ ನಟ ಶಿವರಾಜ್ ಕುಮಾರ್ ಶೀಘ್ರ ಗುಣಮುಖರಾಗಿ ಭಾರತಕ್ಕೆ ಆಗಮಿಸಲಿ ಎಂದು ಸಂಕಲ್ಪಿಸಿ ತಾಲ್ಲೂಕು ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ಕೋರಿ ಘಾಟಿಯಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಕುರಿತು ಶಿವಣ್ಣ ಅಭಿಮಾನಿ ಚೌಡರಾಜ್ ಮಾತನಾಡಿ, ಘಾಟಿ ಸುಬ್ರಮಣ್ಯ ದೇವಾಲಯಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬ0ಧವಿದೆ, ದೊರೆ, ನಂಜು0ಡಿ, ನಮ್ಮೂರು ಹುಡ್ಗ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಭಾಗವಹಿಸಿದ್ದರು, ಅಭಿಮಾನಿಗಳ ಆರಾಧ್ಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಸಂಕಲ್ಪಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿರುವುದಾಗಿ ಹೇಳಿದರು.
ಹಳ್ಳಿ ರೈತ ಮಾತನಾಡಿ, ಕನ್ನಡ ಚಲನಚಿತ್ರದ ಪ್ರಮುಖ ನಟ ಡಾ. ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಸಂಕಲ್ಪಿಸಿದ್ದೇವೆ. ಘಾಟಿ ಸುಬ್ರಮಣ್ಯ ದೇವರ ಆಶೀರ್ವಾದದೊಂದಿಗೆ ಶೀಘ್ರವಾಗಿ ಭಾರತಕ್ಕೆ ಆರೋಗ್ಯವಂತರಾಗಿ ಬರಲಿ ಎಂದಿನ0ತೆ ಸಿನಿಮಾ ರಂಗದಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವಂತಾಗಲಿ ಎಂದರು. ರಾಜ್ಯದ ಹೆಮ್ಮೆಯ ಕೆಎಂಎಬಫ್ ಸಂಸ್ಥೆಗೆ ರಾಯಭಾರಿಯಾಗಿ, ಸದಾ ರೈತರ ಬೆನ್ನೆಲುಬಾಗಿ ನಿಂತಿರುವ ರಾಜ್ ಕುಮಾರ್ ಕುಟುಂಬಕ್ಕೆ ರಾಜ್ಯದ ಎಲ್ಲಾ ಹಳ್ಳಿ ರೈತರ ಶುಭಾ ಹಾರೈಕೆ ಸದಾ ಇರುತ್ತದೆ ಎಂದರು.
ಘಾಟಿ ಸುಬ್ರಮಣ್ಯ ದನಗಳ ಜಾತ್ರೆ ಅಂಗವಾಗಿ ಉಚಿತ ಮೇವು ವಿತರಣೆಗೆ ಬೆಂಬಲವಾಗಿ ಒಂದು ಲೋಡ್ ಮೇವು ನೀಡಿರುವ ರಾಜ್ ಕುಟುಂಬದ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಲಾಯಿತು.