ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ
1 min readರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ
ಅಪಾಯದಲ್ಲಿ ಸಿಲುಕುತ್ತಿರುವ ವಾಹನಗಳು
ಹೆದ್ದಾರಿಯಲ್ಲಿ ಪ್ರಯಾಣಿಸಲು ಪ್ರಯಾಣಿಕರ ಪರದಾಟ
ವಾಹನಗಳ ಸುಗಮ ಸಂಚಾರಕ್ಕಾಗಿ ಅಭಿವೃದ್ದಿಪಡಿಸಿದ ರಾಜ್ಯ ಹೆದ್ದಾರಿಗಳು ರಾಗಿ, ಹುರಳಿ ಒಕ್ಕಣೆ ಕೇಂದ್ರಗಳಾಗಿ ಮಾರ್ಪಟ್ಟಿವೆ. ಒಕ್ಕಣೆಗಾಗಿ ಸುರಿದ ರಾಗಿ ಹುರಳಿ ಜಾಲಕ್ಕೆ ಸಿಲುಕಿದ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಪ್ರಯಾಣಿಕರಂತೂ ನಿಗದಿತ ಸಮಯಕ್ಕೆ ಗುರಿ ಮುಟ್ಟಲು ಸಾಧ್ಯವಾಗದೆ ಬವಣೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕ ರಸ್ತೆಗಳಲ್ಲಿ ಒಕ್ಕಣೆ ಮಾಡಬಾರದೆಂಬ ನಿಯಮ ಇದ್ದರೂ ಕ್ಯಾರೆ ಎನ್ನದ ರೈತರು ರಾಶಿ ರಾಶಿಯಾಗಿ ಸುರಿದು ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆ ಹೆಚ್.ಡಿ.ಕೋಟೆ ಮಾರ್ಗವಾಗಿ ಹೆಡಿಯಾಲ ಗ್ರಾಮದಿಂದ ಬೇಗೂರು ಮೂಲಕ ಊಟಿಗೆ ತೆರಳುತ್ತಿದ್ದ ಸಂಶೋಧನಾ ವಿಧ್ಯಾರ್ಥಿಗಳ ಟ್ರಾವೆಲ್ಸ್ ವಾಹನ ಹುರುಳಿ ನಡುವೆ ಸಿಲುಕಿದೆ. ಸುಮಾರು ೫ ಗಂಟೆಗಳ ಕಾಲ ಶ್ರಮಿಸಿದ ವಾಹನ ಸಿಬ್ಬಂದಿ ಸೆತ್ತೆಗಳ ಹುರುಳಿನಿಂದ ಹೊರಬಂದು ತಮ್ಮ ದಾರಿ ಹಿಡಿದಿದ್ದಾರೆ.
ಹೆಡಿಯಾಲ ಬೇಗೂರು ಮಾರ್ಗವಾಗಿ ನಂಜನಗೂಡು ಗುಂಡ್ಲುಪೇಟೆಗೆ ತೆರಳುವ ರಾಜ್ಯ ಹೆದ್ದಾರಿ ಹಾಗೂ ಹೆಡಿಯಾಲ ಹುರ ಮಾರ್ಗವಾಗಿ ಹುಲ್ಲಹಳ್ಳಿ ನಂಜನಗೂಡು ಮತ್ತು ಮೈಸೂರಿಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಒಕ್ಕಣೆ ಮಾಡುವುದು ಸಾಮಾನ್ಯವಾಗಿದೆ. ಸಾಕಷ್ಟು ವಾಹನಗಳು ಸತ್ತೆಯ ಉರುಳಿಗೆ ಸಿಲುಕಿ ಗಂಟೆಗಳ ಕಾಲ ಪರದಾಡಿವೆ. ಆಂಬ್ಯುಲೆನ್ಸ್ ಸಿಲುಕಿದ ಉದಾಹರಣೆಗಳಿವೆ. ಒಕ್ಕಣೆ ಮಾಡುವ ಸೀಸನ್ ಶುರುವಾಗಿದೆ. ಹೆದ್ದಾರಿಗಳಲ್ಲೆ ರಾಜಾರೋಷವಾಗಿ ಒಕ್ಕಣೆ ಮಾಡಲು ಇವರಿಗೆ ಅನುಮತಿ ನೀಡಿದವರು ಯಾರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಏಕೆ, ಸ್ಥಳೀಯ ಆಡಳಿತ ಅಸಹಾಯಕತೆ ಪ್ರದರ್ಶಿಸುತ್ತಿರುವುದು ಏಕೆ, ಈ ಅಪಾಯಕ್ಕೆ ಎಡೆ ಮಾಡಿಕೊಟ್ಟಿರುವ ರೈತರನ್ನ ಪ್ರಶ್ನಿಸುವರೇ ಇಲ್ಲವೇ ಎಂಬ ಪ್ರಶ್ನೆಗಳಿಗೆ ಉಥ್ತರಿಸುವವರೇ ಇಲ್ಲವಾಗಿದ್ದಾರೆ.