ಚಿಂತಾಮಣಿಯಲ್ಲಿ ಮುಂದುವರಿದ ತೆರುವು ಕಾರ್ಯಾಚರಣೆ
1 min readಚಿಂತಾಮಣಿಯಲ್ಲಿ ಮುಂದುವರಿದ ತೆರುವು ಕಾರ್ಯಾಚರಣೆ
ಫುಟ್‌ಪಾತ್, ರಸ್ತೆ ಒತ್ತುವರಿ ತೆರುವು ಮಾಡುತ್ತಿರುವ ಪೌರಾಯುಕ್ತರು
ರಸ್ತೆಯಲ್ಲಿಯೇ ನೀರಿನ ಸಂಪು, ಬೇಕರಿ, ಹೋಟೆಲ್ ನಿರ್ಮಸಿ
ವ್ಯಾಪಾರ
ಎಲ್ಲವನ್ನೂ ತೆರುವುಗೊಳಿಸಿದ ನಗರಸಭೆ ಪೌರಾಯುಕ್ತ ಚಲಪತಿ
ಚಿಂತಾಮಣಿಯಲ್ಲಿ ರಸ್ತೆ ಒತ್ತುವರಿ ತೆರುವು ಕಾರ್ಯಾಚರಣೆ ಮುಂದುವರಿದಿದೆ. ನೆನ್ನೆ ಬೆಂಗಳೂರು ರಸ್ತೆಯಲ್ಲಿ ಒತ್ತುವರಿ ತೆರುವು ಆರಂಭವಾಗಿದ್ದು, ಇಂದೂ ಬೆಂಗಳೂರು ರಸ್ತೆಯಲ್ಲಿ ತೆರುವು ಕಾರ್ಯಾಚರಣೆ ಮುಂದುವರಿದಿದೆ. ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನೀರಿನ ಸಂಪು, ಬೇಕರಿ, ಹೋಟೆಲ್ ನಿರ್ಮಿಸಿಕೊಂಡಿದ್ದವರಿಗೆ ಪೌರಾಯುಕ್ತರು ಚಳಿ ಬಿಡಿಸಿದರು.
ಚಿಂತಾಮಣಿ ನಗರದಲ್ಲಿ ಸುವಿಶಾಲ ರಸ್ತೆಗಳನ್ನು ಈ ಹಿಂದೆಯೇ ನಿರ್ಮಿಸಿದ್ದರೂ ಅವುಗಳನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ರಸ್ತೆಗಳು ಕಿರಿದಾಗಿ, ಫುಟ್‌ಪಾತ್ ಇಲ್ಲವಾಗಿ, ಪಾದಚಾರಿಗಳು ರಸ್ತೆಯಲ್ಲಿಯೇ ಸಂಚರಿಸುವತಾಗಿತ್ತು. ಸಾಲಜದೆಂಬ0ತೆ ರಸ್ತೆಗಳು ಕಿರಿದಾದ ಕಾರಣ ವಾಹನ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿತ್ತು. ಈ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಇದ್ದರೂ ಇವನ್ನು ತೆರುವುಗೊಳಿಸಲು ಮಾತ್ರ ಯಾವುದೇ ಅಧಿಕಾರಿ, ಜನಪ್ರತನಿಧಿಗಳು ಮುಂದಾಗಿರಲಿಲ್ಲ.
ಆದರೆ ಇದೀಗ ಚಿಂತಾಮಣಿ ನಗರಸಬೆ ಪೌರಾಯುಕ್ತರಾಗಿರುವ ಚಲಪತಿಯವರು ದೃಢ ನಿರ್ಧಾರ ಕೈಗೊಂಡಿದ್ದು, ಕಳೆದ ಎರಡು ದಿನಗಳಿಂದ ರಸ್ತೆ ಮತ್ತು ಫುಟ್‌ಪಾತ್ ಒತ್ತುವರಿ ತೆರುವು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಇದೇ ರೀತಿಯಲ್ಲಿ ನಗರದಲ್ಲಿ ಒತ್ತುವರಿಯಾಗಿರುವ ಎಲ್ಲ ರಸ್ತೆಗಳನ್ನೂ ತೆರುವು ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಚಿಂತಾಮಣಿ ನಗರದ ಬೆಂಗಳೂರು ರಸ್ತೆಯಲ್ಲಿ ಎರಡನೇ ದಿನವೂ ಒತ್ತುವರಿ ರಸ್ತೆ ತೆರವು ಕಾರ್ಯಾಚರಣೆ ಮುಂದುವರಿದಿದೆ. ಇಂದು ಬೆಳಗ್ಗೆ ನಗರಸಭೆ ಅಧ್ಯಕ್ಷ ಆರ್. ಜಗನ್ನಾಥ್, ಉಪಾಧ್ಯಕ್ಷ ರಾಣಿಯಮ್ಮ, ಪೌರಾಯುಕ್ತ ಚಲಪತಿ ಸೇರಿದಂತೆ ನಗರಸಭೆಯ ಎಲ್ಲ ಸದಸ್ಯರು ಮತ್ತು ಅಧಿಕಾರಿಗಳು ಜೆಸಿಬಿ, ಟ್ಯಾಕ್ಟರ್‌ಗಳನ್ನು ತಂದು ಬೆಂಗಳೂರು ರಸ್ತೆಯ ಸಾರಿಗೆ ಘಟಕದ ಮುಂಭಾಗದ ರಸ್ತೆ ಮಧ್ಯ ಇದ್ದ ಗಣೇಶ ದೇವಸ್ಥಾನ ತೆರವುಗೊಳಿಸಿದರು.
ಇನ್ನು ಲಕ್ಷಾಂತರ ರುಪಾಯಿ ವ್ಯಾಪಾರ ನಡೆಸುತ್ತಿದ್ದ ಹೋಟೆಲ್, ಬೇಕರಿ, ಅಂಗಡಿಗಳವರು ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿಕೊಂಡು ನೀರಿನ ಸಂಪು ನಿರ್ಮಿಸಿಕೊಂಡಿರುವುದನ್ನು ಕಂಡು ಪೌರಾಯುಕ್ತರು ಮತ್ತು ನಗರಸಭೆ ಅಧ್ಯಕ್ಷ ಬಿಚ್ಚಿ ಬಿದ್ದರು.
ಬೆಂಗಳೂರು ರಸ್ತೆಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಕಟ್ಟಡ ನಿರ್ಮಿಸಿಕೊಂಡಿರುವ ಬಲಾಢ್ಯರು ತೆ ರವುಗೊಳಿಸುತ್ತಿರುವುದನ್ನು ಕಂಡು, ಸ್ಥಳಕ್ಕೆ ಆಗಮಿಸಿ ಕಟ್ಟಡ ಮುಂಭಾಗದಲ್ಲಿಯೇ ತೆರವು ಗೊಳಿಸಿದಂತೆ ಪೌರಾಯುಕ್ತರನ್ನು ಆಗ್ರಹಿಸಿದ ಘಟನೆಯೂ ನಡೆಯಿತು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಚಲಪತಿ, ರಸ್ತೆಯಿಂದ 40 ಅಡಿ ಬಿಟ್ಟು ನಿಮ್ಮ ನಿವೇಶನದ ಜಾಗದಲ್ಲಿ ಕಟ್ಟಡ ನಿರ್ಮಿಸಿಕೊಂಡಿರಬೇಕು. ಪ್ರಸ್ತುತ ಪಾದ ಚಾರಿ ರಸ್ತೆ ಮಾತ್ರ ತೆರವುಗೊಳಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನೂ ನೆಲಸಮ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಸ್ತೆ ಒತ್ತುವರಿ ಮಾಡಿಕೊಂಡು ದಾರಿಯಲ್ಲಿ ಹೋಗುವರಿಗೆ ಕಿರಿಕಿರಿ ಮಾಡುವ ಜೊತೆಗೆ ಅಪಘಾತಗಳು ಸಂಧಾವಿಸಿ ಪ್ರಾಣ ಹಾನಿಯಾಗುತ್ತಿರುವುದು ಗಮನದಲ್ಲಿಟ್ಟಿಕೊಂಡು ತೆರುವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೌರಾಯುಕ್ತರು ಹೇಳಿದರು.
ಚಿಂತಾಮಣಿ ನಾಗರಿಕರಿಗೆ ಒಳ್ಳೆಯದನ್ನು ಮಾಡುತ್ತಿದ್ದೇನೆ, ಅದಕ್ಕೆ ಕಲ್ಲು ಹಾಕದಂತೆ ಪ್ರಶ್ನೆ ಮಡಾಇದವರಿಗೆ ಪೌರಾಯುಕ್ತರು ಎಚ್ಚರಿಕೆ ನೀಡಿದರು. ಕಳೆದ ಹಲವು ದಶಕಗಳಿಂದ ಒತ್ತುವರಿ ಮಾಡಿಕೊಂಡಿರುವ ರಸ್ತೆ ಮತ್ತು ಫುಟ್‌ಪಾತ್ ತೆರವುಗೊಳಿಸುತ್ತಿರುವುದು ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ. ಅಲ್ಲದೆ ಪಕ್ಷಾತೀತವಾಗಿ ರಸ್ತೆ ಒತ್ತುವರಿ ತೆರವುಗೊಳಿಸಲಾಗುತ್ತಿದ್ದು, ಈ ಕುರಿತು ಚಿಂತಾಮಣಿ ನಾಗರಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ಡಾ.ಎಂ.ಸಿ ಸುಧಾಕರ್ ಅವರು ಸೋತ ಪರಿಣಾಮ ಚಿಂತಾಮಣಿ ನಗರ ಅಭಿವೃದ್ಧಿಯಲ್ಲಿ ಹಿಂದಕ್ಕೆ ಸಾಗಿತ್ತು. ಈಗಲಾದರೂ ಸುಧಾಕರ್ ಅವರ ಗೆಲುವಿನಿಂದ ಚಿಂತಾಮಣಿ ಅಭಿವೃದ್ಧಿಯ ಉತ್ತುಂಗದತ್ತ ಸಾಗಿತ್ತಿರುವುದು ಪ್ರಶಂ್ಸನೀಯ ಎಂದು ಪ್ರವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.