ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ರಾಜಕೀಯಕ್ಕಾಗಿ ಪದಾರ್ಪಣೆ ಮಾಡಿದ ಹದಿನಾಲ್ಕು ವರ್ಷಗಳಿಂದಲೂ ಪ್ರತಿ ವರ್ಷ ತಪ್ಪದೇ ತಮ್ಮ ಜೆಡಿಎಸ್ ಪಕ್ಷದ ಗೃಹಕಛೇರಿಯಲ್ಲಿ ಆದ್ದೂರಿಯಾಗಿ ನಾಡಹಬ್ಬ ದಸರಾ ಹಬ್ಬವನ್ನು ಆಚರಣೆ ಮಾಡುತ್ತಾ ಬರುತ್ತಿದ್ದು, ಈ ಬಾರಿಯೂ ಕೂಡ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಚಿಂತಾಮಣಿ ನಗರದಲ್ಲಿನ ತಮ್ಮ ಗೃಹಕಛೇರಿಯಲ್ಲಿ ದುರ್ಗಾಮಾತೆಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ, ಪೂಜೆಗೆ ಬಂದಿದ್ದ ಸಾವಿರಾರು
ಅಭಿಮಾನಿಗಳಿಗೆ ಸಿಹಿ ಹಂಚಿಕೆ ಮಾಡಿ ಎಲ್ಲಾ ಜನರಿಗೂ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದರು. ಈ ವೇಳೆ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ದಿ ಮಾತನಾಡಿ ಸಮಾಜಕ್ಕೆ ಕೆಟ್ಟದ್ದನ್ನು ಬಯಸಿ, ಸಮಾಜದಲ್ಲಿ ಆಶಾಂತಿ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದ ದುಷ್ಟ ಶಕ್ತಿಗಳನ್ನು ದುರ್ಗಾಮಾತೆ ಸಂಹಾರ ಮಾಡಿರುವ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಣೆ ಮಾಡುವ ಸಲ್ಲುವಾಗಿ ದೇಶದಾದ್ಯಂತÀ ವಿಜಯದಶಮಿ ಹಬ್ಬವನ್ನು ಮಾಡುತ್ತಿದ್ದು, ದುರ್ಗಾಮಾತೆ ನಮ್ಮೆಲ್ಲರ ಮೇಲೆ ಕರುಣೆ ತೋರಿ ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಿ ಜನ ಜಾನುವಾರಗಳು ಸುಖಶಾಂತಿ ನೆಮ್ಮಂದಿಯಿAದ ಬಾಳಲ್ಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ಎಲ್ಲಾ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತಿತ್ತರರು ಉಪಸ್ಥಿತಿರಿದ್ದರು.