ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ
1 min readಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ
ಸಚಿವ ಸಂಪುಟದಿ0ದ ಕೈ ಬಿಡಲು ದಲಿತ ಸಂಘಟನೆಗಳ ಒತ್ತಾಯ
ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿAದ ವಜಾ ಗೊಳಿಸುವಂತೆ ಆಗ್ರಹಿಸಿ ನಂಜನಗೂಡು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ನಗರದ ಹುಲ್ಲಹಳ್ಳಿ ವೃತ್ತದ ಬಳಿ ಜಮಾಯಿಸಿದ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಮೈಸೂರು-ಊಟಿ ರಾಷ್ಟಿಯ ಹೆದ್ದಾರಿ ತಡೆದು, ಮಾನವ ಸರಪಳಿ ನಿರ್ಮಿಸಿ, ಅಮಿತ್ ಷಾ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ಅವರು ದೇಶದ ರಕ್ಷಣಾಮಂತ್ರಿಯಾಗಿ ಎಲ್ಲಾ ಜನರಿಗೂ ರಕ್ಷಣೆ ನೀಡುವ ಜವಾಬ್ದಾರಿ ಸ್ಥಾನದಲ್ಲಿದ್ದು ಅಂಬೇರ್ಡ್ಕ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಅವರು ಗೃಹ ಸಚಿವರಾಗಿದ್ದಾರೆ ಎಂಬುದನ್ನು ಮರೆತಿರುವಂತಿದೆ. ಅಂಬೇಡ್ಕರ್ ಅವರ ಚಿಂತನೆ ನಮಗೆ ದಾರಿದೀಪ, ದೇಶದ ಮಹಿಳೆಯರು, ಶೋಷಿತರು, ಅಸ್ಪಶ್ಯರನ್ನು ರಕ್ಷಣೆ ಮಾಡುತ್ತಿರುವ ಏಕೈಕ ಶಕ್ತಿ ಅಂಬೇಡ್ಕರ್ ಅವರ ಸಂವಿಧಾನ ಮಾತ್ರ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಬೊಕ್ಕಳ್ಳಿ ನಂಜು0ಡಸ್ವಾಮಿ, ಅಭಿನಾಗಭೂಷಣ್, ಚುಂಚನಹಳ್ಳಿ ಮಲ್ಲೆಶ್, ಮಲ್ಲಹಳ್ಳಿ ನಾರಾಯಣ್ ಇದ್ದರು.