ಮೈಲಾರಲಿಂಗ ಸ್ವಾಮಿಯ ಹೊಚ್ಚ ಹೊಸ ಕಾರ್ಣೀಕ! ‘ಸರ್ವರೂ ಎಚ್ಚರದಿಂದ ಇರಬೇಕು’
1 min readಮೈಲಾರಲಿಂಗ ಸ್ವಾಮಿ ಕಾರ್ಣೀಕಗಳು ಕಾಲಾನುಕ್ರಮದಲ್ಲಿ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿರುವ ಮೈಲಾರಲಿಂಗ ಸ್ವಾಮಿ ದೇವಸ್ಥಾನಗಳಿಂದ ಹೊರಬೀಳುತ್ತಿವೆ. ಎರಡು ದಿನಗಳ ಹಿಂದಷ್ಟೇ ಹಾವೇರಿ ಜಿಲ್ಲೆಯ ದೇವರಗುಡ್ಡದ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿ ಕಾರ್ಣೀಕ ನುಡಿದಿತ್ತು. ಅದಾಗಿ ಎರಡು ದಿನಗಳಲ್ಲೇ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿರುವ ಮೈಲಾರಲಿಂಗ ಸ್ವಾಮಿಯ ಕಾರ್ಣೀಕ ಹೊರಬಿದ್ದಿದೆ. ಅ. 25ರ ಬೆಳಗಿನ ಜಾವ 4.42ರ ಸುಮಾರಿಗೆ ಕಾರ್ಣೀಕ ಹೊರಬಿದ್ದಿದೆ.
ರಾಜ್ಯದಲ್ಲಿ ನಾನಾ ಪ್ರಾಂತ್ಯಗಳಲ್ಲಿ ಮೈಲಾರಲಿಂಗ ದೇವಸ್ಥಾನಗಳಿದ್ದು, ಅಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ಕಾರ್ಣೀಕ (ಭವಿಷ್ಯ ವಾಣಿ) ನುಡಿಯಲಾಗುತ್ತದೆ. ಆ ಕಾರ್ಣೀಕವು ಕನ್ನಡದಲ್ಲೇ ಇರುತ್ತದೆ ಹಾಗೂ ಗಾದೆಯ ಮಾತಿನಂತೆ ಅಂತರಾರ್ಥವನ್ನು ಹೊಂದಿರುತ್ತದೆ.
ಎರಡು ದಿನಗಳ ಹಿಂದಷ್ಟೇ, ಹಾವೇರಿ ಜಿಲ್ಲೆಯ ದೇವರಬೆಟ್ಟದಲ್ಲಿರುವ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿ ಕಾರ್ಣೀಕ ನಡೆದಿತ್ತು. ಅ. 24ರ ರಾತ್ರಿ, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿರುವ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿ ಕಾರ್ಣೀಕ ನಡೆದಿದೆ. ಅ. 24ರ ರಾತ್ರಿ ಪೂರ್ತಿ ನಡೆದ ಉತ್ಸವದ ನಂತರ, ದೇವಸ್ಥಾನದ ಮೈದಾನದ ಮಧ್ಯಭಾಗದಲ್ಲಿ ನೆಡಲಾಗಿದ್ದ ಮರದ ಕಂಬವನ್ನೇರಿದ ಮೈಲಾರಲಿಂಗ ಸ್ವಾಮಿಯ ಪೂಜಾರಿಯವರಾದ ದಶರಥ ಪೂಜಾರ್ ಅವರು, ಮುುಂಜಾನೆ 4.42ರ ಹೊತ್ತಿಗೆ ಕಾರ್ಣೀಕ ನುಡಿದರು.