ಕೆಟಿಎ ಟೈಕೊಂಡೊ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಗೋಲ್ಡ್ ಮೆಡೆಲ್
1 min readಕೆಟಿಎ ಟೈಕೊಂಡೊ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಗೋಲ್ಡ್ ಮೆಡೆಲ್
ಕರಾಟೆಯಲ್ಲಿ ಉಥ್ತಮ ಸಾಧನೆ ಮಾಡಿದ ಬಾಗೇಪಲ್ಲಿ ಮಕ್ಕಳು
ಪೆರೇಸಂದ್ರ ಶಾಂತಾ ಶಾಲೆಯ ವಿದ್ಯಾರ್ಥಿಗೆ ಸಂಸದರ ಸನ್ಮಾನ
ಬಾಗೇಪಲ್ಲಿ ಪಟ್ಟಣದ ಟೈಕೊಂಡೊ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ನಡೆದ ರಾಜ್ಯಮಟ್ಟದ ಟೈಕೊಂಡೊ ಸ್ಪರ್ಧೆಯಲ್ಲಿ ನಾಲ್ಕು ಗೋಲ್ಡ್ ಮೆಡಲ್ ಮತ್ತು ಒಂದು ಸಿಲ್ವರ್ ಮೆಡಲ್ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬಾಗೇಪಲ್ಲಿ ಪಟ್ಟಣದ ವಿದ್ಯಾ ಶಿಲ್ಪಿ ಶಾಲಾವರಣದಲ್ಲಿ ನಿತ್ಯ ತರಬೇತುದಾರ ಲಕ್ಷಿನಾರಾಯಣ ಎಂಬುವರಿ0ದ ತರಬೇತಿ ಪಡೆಯುತ್ತಿರುವ ೨೫ ವಿದ್ಯಾರ್ಥಿಗಳು, ಹಲವಾರು ರಾಜ್ಯ, ರಾಷ್ಟç ಮಟ್ಟದಲ್ಲಿ ಪದಕ ಪಡೆದಿದ್ದಾರೆ. ರಾಜ್ಯಮಟ್ಟದ ಕೆಟಿಎ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸೂರ್ಯತೇಜ ಎಂ.ಎಸ್, ಚೇತನ್ ಎನ್. ಪ್ರೆತ್ಯೂಷ ಮತ್ತು ಶ್ರೀಕರಿ ಗೋಲ್ಡ್ ಮೆಡಲ್ ಪಡೆದಿದ್ದು, ಗಾನಶ್ರೀ ಸಿಲ್ವರ್ ಮೆಡಲ್ ಪಡೆದಿದ್ದಾರೆ.
ಇವರಲ್ಲಿ ಸೂರ್ಯತೇಜ ಎಂ.ಎಸ್ ಈವರೆಗೆ ತಾಲೂಕು,ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ೧೦ ಕ್ಕೂ ಹೆಚ್ಚು ಗೋಲ್ಡ್ ಮೆಡಲ್ ಪಡೆದಿದ್ದು, ಮೂರು ಸಿಲ್ವರ್ ಮೆಡಲ್ ಪಡೆದಿದ್ದಾರೆ. ಇವರು ಪೆರೇಸಂದ್ರ ಕ್ರಾಸ್ ನಲ್ಲಿರುವ ಶಾಂತ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರ ಸಾಧಾನೆಗೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ಮೆಚ್ಚುಗೆ ವ್ಯಕ್ತ ಪಡಿಸಿ, ಸನ್ಮಾನಿಸಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ತರಬೇತುದಾರ ಮತ್ತು ಪೋಷಕರು ಸಂಭ್ರಮಿಸಿದ್ದು, ಮುಂಬರುವ ರಾಷ್ಟç ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ಗೆಲುವು ಸಾಧಿಸಬೇಕೆಂದು ಹಾರೈಸಿದ್ದಾರೆ. ತರಬೇತಿದಾರ ಲಕ್ಷಿನಾರಾಯಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಟೈಕೊಂಡೋ ಬಗ್ಗೆ ಮತ್ತಷ್ಟು ಅರಿವು ಅಗತ್ಯ,ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅನುಕೂಲವಾಗಲಿದೆ. ರಾಜ್ಯ,ರಾಷ್ಟç ಮಟ್ಟದಲ್ಲಿ ಕೀರ್ತಿ ಪಡೆಯಬಹುದು. ಪೋಷಕರು ಟೈಕೊಂಡೋಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.