ಅವರೇಕಾಯಿ ವ್ಯಾಪಾರ ಮಾಡದಂತೆ ರೈತರ ಮನವಿ
1 min readಅವರೇಕಾಯಿ ವ್ಯಾಪಾರ ಮಾಡದಂತೆ ರೈತರ ಮನವಿ
ಎಂಜಿ ರಸ್ತೆಯಲ್ಲಿ ವಹಿವಾಟಿನಿಂದ ಸಂಚಾರಕ್ಕೆ ತೊಂದರೆ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಚೇರಿ ಹಾಗೂ ಪುರಸಭೆ ಮುಂದೆ ಪ್ರತಿಭಟನೆ ನಡೆಸಿ, ತಾಲ್ಲೂಕು ದಂಡಾಧಿಕಾರಿಗಳಿಗೆ ಮತ್ತು ಪುರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಶ್ರೀನಿವಾಸಪುರದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ರೈತಸಂಘದಿ0ದ ಪ್ರತಿಭಟನೆ ನಡೆಸಲಾಯಿತು. ರೈತ ಮುಖಂಡ ಪ್ರಭಾಕರ ಗೌಡ ಮಾತನಾಡಿ, ಶ್ರೀನಿವಾಸಪುರದ ಎಂಜಿ ರಸ್ತೆಯಲ್ಲಿ ಅವರೇಕಾಯಿ ವ್ಯಾಪಾರದಿಂದಾಗಿ ತಾಲ್ಲೂಕು ಆಸ್ಪತ್ರೆಗೆ ಹೋಗಲು, ಪ್ರತಿನಿತ್ಯ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದ್ದು, ಸತತವಾಗಿ ಮೂರು ವರ್ಷಗಳಿಂದ ಪೊಲೀಸ್ ಇಲಾಖೆ, ಪುರಸಭೆಗೆ ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ ಎಂದು ಆರೋಪಿಸಿದರು.
ಅವರೇ ಕಾಯಿ ಮಾರುಕಟ್ಟೆ ಇದೀಗ ಮತ್ತೆ ಆರಂಭವಾಗಿದ್ದು, ಎಂ ಜಿ ರಸ್ತೆಯಲ್ಲಿಯೇ ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ, ಪುರಸಭೆ ಅಧಿಕಾರಿಗಳು , ತಾಲೂಕು ದಂಡಾಧಿಕಾರಿಗಳು ಹಾಗೂ ಎಪಿಎಂಸಿ ಅಧಿಕಾರಿಗಳು ಇತ್ತ ಗಮನಹರಿಸಿ ಎಪಿಎಂಸಿ ಮಾರುಕಟ್ಟೆಗೆ ಅವರೇಕಾಯಿ ವಹಿವಾಟು ವರ್ಗಾವಣೆ ಮಾಡದಿದ್ದರೆ ರಸ್ತೆ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.