ದೇವರಮಳ್ಳೂರು ಗ್ರಾಮದಲ್ಲಿ ಉಟ್ಲು ಉತ್ಸವ
1 min read
ದೇವರಮಳ್ಳೂರು ಗ್ರಾಮದಲ್ಲಿ ಉಟ್ಲು ಉತ್ಸವ
ಪ್ರತಿ ವರ್ಷ ಜಾತ್ರೆ ಮುಗಿದ ಮೇಲೆ ನಡೆಯುವ ಉಟ್ಲು ಉತ್ಸವ
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಶ್ರೀ ಮಳ್ಳೂರಾಂಬ ದೇವಾಲಯ ಬಳಿ ಇಂದು ಉಟ್ಲು ಉತ್ಸವ ನಡೆಯಿತು. ದೇವಸ್ಥಾನದ ಮುಂಭಾಗದಲ್ಲಿರುವ ಸುಮಾರು ೨೦ ಅಡಿ ಎತ್ತರದ ಕಂಬದ ಮೇಲೆ ವೃತ್ತಾಕಾರದ ಉಟ್ಲು ಮಂಟಪಕ್ಕೆ ವಸ್ತç ಮತ್ತು ಹೂಗಳಿಂದ ಅಲಂಕರಿಸಿ, ಉತ್ಸವ ನಡೆಸಲಾಯಿತು.
ದೇವರಮಳ್ಳೂರು ಕೂತಲು ಕೃಷ್ಣಪ್ಪ ಅವರ ಮಕ್ಕಳಿಂದ ಉಟ್ಲು ಉತ್ಸವ ನಡೆಯುತ್ತಿದ್ದು, ಹೋಮ ಪೂಜಾ ಕಾರ್ಯಗಳನ್ನು ಆಂಜಿನಪ್ಪ ನಡೆಸಿಕೊಟ್ಟರು. ಉಟ್ಟು ಮಂಟಪಕ್ಕೆ ವಸ್ತç ವಿನ್ಯಾಸ ಮಾಡಿ ೫ ಸಣ್ಣ ಗಾತ್ರದ ಗೋಣಿ ಚೀಲಗಳಲ್ಲಿ ೫ ದಿಕ್ಕಿಗೂ ತೆಂಗಿನಕಾಯಿಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಕಂಬದ ಮೇಲೆ ಉಟ್ಲುವಿನಲ್ಲಿ ಇಬ್ಬರು ಯುವಕರು ಕುಳಿತು ಜೋರಾಗಿ ಕಾಯಿಗಳನ್ನು ತಿರುಗಿಸಿದರು. ನಾಲ್ಕರಿಂದ ಐದು ಮಂದಿ ಯುವಕರು ತೆಂಗಿನಕಾಯಿಗಳನ್ನು ಉದ್ದನೆಯ ಕೋಲಿನಿಂದ ಒಡೆಯಲು ಪ್ರಯತ್ನಿಸಿ ಸುಸ್ತಾಗುತ್ತಿದ್ದ ಪರಿ ನೆರೆದಿದ್ದವರಿಗೆ ಮನರಂಜನೆ ನೀಡಿತು.
ದೇಗುಲದ ಮುಂಬಾಗದಲ್ಲಿ ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಬುರಗು, ಬತಾಸು, ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಕೃಷ್ಣಪ್ಪನವರ ಕುಟುಂಬದವರು, ಕೆ.ಎಸ್. ಕೆಂಪಣ್ಣ, ಮಳ್ಳೂ ರಂಬ ಸೇವಾ ಸಮಿತಿ ಅಧ್ಯಕ್ಷ ಮುನಿರಾಜು, ಸುಬ್ರಮಣ್ಯಪ್ಪ, ವೇಣುಗೋಪಾಲ್ ಇದ್ದರು,