ಒಳ ಮೀಸಲಾತಿಗೆ ಆಗ್ರಹಿಸಿ ತಮಟೆ ಚಳುವಳಿ
1 min readಒಳ ಮೀಸಲಾತಿಗೆ ಆಗ್ರಹಿಸಿ ತಮಟೆ ಚಳುವಳಿ
ಗೌರಿಬಿದನೂರು ಶಾಸಕರ ಗೃಹ ಕಚೇರಿ ಮುಂದೆ ಧರಣಿ
ದಲಿತ ಮುಖಂಡರ ನೇತೃತ್ವದಲ್ಲಿ ತಮಟೆ ಚಳುವಳಿ
ಪರಿಶಿಷ್ಥ ಜಾತಿಯ ಒಳ ಮೀಸಲಾತಿಗೆ ಆಗ್ರಹಿಸಿ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡರ ಕಚೇರಿ ಮುಂಭಾಗ ದಲಿತ ಮುಖಂಡರಿAದ ಇಂದು ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿತ್ತು.
ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡರ ಗೃಹ ಕಚೇರಿ ಮುಂದೆ ದಲಿತ ಸಮುದಾಯಗಳಿಂದ ಒಳ ಮೀಸಲಾತಿಗೆ ಆಗ್ರಹಿಸಿ ತಮಟೆ ಚಳವಳಿ ನಡೆಸಲಾಯಿತು. ದಲಿತ ಮುಖಂಡ ಸಿ,ಜಿ,ಗಂಗಪ್ಪ ಮಾತನಾಡಿ, ಉಚ್ಚನ್ಯಾಯಲಯ ಒಳಮೀಸಲಾತಿ ನೀಡಿ ಎಂದು ಅಯಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ನಾಲ್ಕು ತಿಂಗಳು ಕಳೆದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ವಿನಾಕಾರಣ ಕಾಲಹರಣ ಮಾಡಿ, ಒಳಮೀಸಲಾತಿ ನೀಡಲು ಮೀನ ಮೇಷ ಎಣಿಸುತ್ತಿದೆ,ಎಂದು ಆರೋಪಿಸಿದರು.
ಒಳ ಮೀಸಲಾತಿ ಮೊದಲು ಆಂಧ್ರ ಪ್ರದೇಶದಲ್ಲಿ ಪ್ರಾರಂಭವಾಗಿ ಮೂರು ದಶಕಗಳು ಕಳೆದಿವೆ, ಇದರ ಪ್ರತಿಭಟನೆ ದೇಶ ವ್ಯಾಪಿ ತೀವ್ರಗೊಂಡು ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ, ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಒಳ ಪಂಗಡಿಗಳಿಗೆ ಕೂಡಲೆ ಮೀಸಲಾತಿ ನೀಡಿ ಎಂದು ಆದೇಶ ನೀಡಿದೆ. ಆದರೆ ಅಯಾ ರಾಜ್ಯಗಳು ಒಳ ಮೀಸಲಾತಿ ಜಾರಿ ಮಾಡಲು ಮುಂದೆ ಬರುತ್ತಿಲ್ಲ. ಇದು ಹೀಗೆ ಮುಂದುವರಿದರೆ ಹೋರಾಟ ಉಗ್ರ ರೂಪಕ್ಕೆ ತೆರಳುತ್ತದೆ ಎಂದು ಎಚ್ಚರಿಕೆ ನೀಡಿದರು.
ವಕೀಲ ಬಿಕೆ ನರಸಿಂಹಮೂರ್ತಿ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತಿರುವ ವಿಧಾನ ಸಭೆ ಕಲಾಪದಲ್ಲಿ ಶಾಸಕ ಪುಟ್ಟಸ್ವಾಮಿ ಗೌಡರು ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಒತ್ತಾಯ ಮಾಡಿದರು. ಚೆನ್ನಪ್ಪ ಮಾತನಾಡಿ, ಒಳ ಮೀಸಲಾತಿ ನೀಡಿ ಎಂದು ಉಚ್ಚ ನ್ಯಾಯಾಲಯ ಆದೇಶ ನೀಡಿದೆ, ಆದರೆ ಕರ್ನಾಟಕ ಸರ್ಕಾರ ಮೀಸಲಾತಿ ನೀಡಲು ಮೀನ ಮೇಷ ಎಣಿಸುತ್ತಿರುವುದು ಖಂಡನೀಯ. ಮೀಸಲಾತಿ ನೀಡಲು ಪ್ರತ್ಯೇಕ ಸಮಿತಿ ಮಾಡಿ, ಮೀಸಲಾತಿ ನೀಡುವುದಾಗಿ ನಾಲ್ಕು ತಿಂಗಳ ಗಡುವು ತೆಗೆದು ಕೊಂಡಿದೆ. ಇನ್ನಾದರೂ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಮನವಿಯನ್ನು ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸಗೌಡರಿಗೆ ನೀಡಿದರು. ತಮಟೆ ಚಳುವಳಿಯಲ್ಲಿ ದಲಿತ ಮುಖಂಡರಾದ ಹುದುಗೂರು ಕೆ. ನಂಜುAಡಪ್ಪ, ಆದಿಶ್, ವಕೀಲ ನರಸಿಂಹಮೂರ್ತಿ, ಗೆದರೆ ವೆಂಕಟೇಶ್, ನಾಗಾರ್ಜುನ್, ಗಂಗಾರ್, ಸೋಮಯ್ಯ ಇದ್ದರು.