ಹನುಮ ಜಯಂತಿಯ0ದೆ ಆಂಜನೇಯ ದೇಜಿಜ್ಞದ ಹುಂಡಿ ಕದ್ದ ಕಳ್ಳರು!
1 min readಹನುಮ ಜಯಂತಿಯ0ದೆ ಆಂಜನೇಯ ದೇಜಿಜ್ಞದ ಹುಂಡಿ ಕದ್ದ ಕಳ್ಳರು!
ಸಿಸಿ ಟಿವಿ ಡಿವಿಆರ್ ಸಮೇತ ನಾಪತ್ತೆಯಾದ ಕಳ್ಳರು
ದೊಡ್ಡಬಳ್ಳಾಪುರ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಯ ಶ್ರೀವೀರಾಂಜನೇಯ ದೇವಾಲಯದಲ್ಲಿ ಇಂದು ಮುಂಜಾನೆ ಕಳ್ಳತನವಾಗಿದ್ದು, ಕಳ್ಳರು ಆಂಜನೇಯ ದೇಗುಲದ ಬೀಗಗಳನ್ನು ಹರಿತವಾದ ಆಯುದದಿಂದ ಕತ್ತರಿಸಿ ಒಳನುಗ್ಗಿ, ಹುಂಡಿ ಒಡೆದು ಹುಂಡಿಯ ಹಣ ಮತ್ತು ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.
ನಿನ್ನೆ ದೇವಾಲಯದಲ್ಲಿ ಹನುಮಜಯಂತಿ ಪ್ರಯುಕ್ತ ವಿಶೇಷ ಪೂಜೆ ನಡೆದಿತ್ತು. ಇದರಿಂದ ರಾತ್ರಿ ಒಂದು ಗಂಟೆಯವರೆಗೂ ದೇವರ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ನಂತರ ದೇವಾಲಯಕ್ಕೆ ತಂದು ಪೂಜೆ ನೆರವೇರಿಸಿದ್ದ ಗ್ರಾಮಸ್ಥರು ರಾತ್ರಿ ಎರಡು ಗಂಟೆ ಸುಮಾರಿಗೆ ಬೀಗ ಹಾಕಿ ಮನೆಗಳಿಗೆ ತೆರಳಿದ್ದಾರೆ. ಎಂದಿನ0ತೆ ಅರ್ಚಕರು ಬೆಳಿಗ್ಗೆ ಐದು ಗಂಟೆಗೆ ಬಂದು ಬೀಗ ತೆರೆಯಲು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮು0ಜಾನೆ ಎರಡರಿಂದ ಐದು ಗಂಟೆ ನಡುವೆ ಈ ಕಳ್ಳತನ ನೆಡೆದಿರಬಹುದೆಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ದೇವಾಲಯದ ಹುಂಡಿಯನ್ನು ಸುಮಾರು ಒಂದೂವರೆ ವರ್ಷದಿಂದ ತೆರದಿರಲಿಲ್ಲ, ಹುಂಡಿಯಲ್ಲಿ ಲಕ್ಷಾಂತರ ಹಣ ಹಾಗೆಯೇ ಇತ್ತು. ಹುಂಡಿಯ ಹಣ ಕದ್ದ ಕಳ್ಳರು ದೇವರ ವಿಗ್ರಹದ ಮೇಲಿದ್ದ ಬೆಳ್ಳಿಯ ಒಡವೆಗಳನ್ನು ಬಿಟ್ಟು ಹುಂಡಿಯಲ್ಲಿನ ಹಣದ ಸಮೇತ ಸಿಸಿ ಕ್ಯಾಮರಾಗಳ ಡಿವಿಆರ್ ಹೊತ್ತೊಯ್ದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.