ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಹನುಮ ಭಕ್ತಿಯಲ್ಲಿ ಮಿಂದೆದ್ದ ಜಿಲ್ಲೆಯ ಜನತೆ

1 min read

ಹನುಮ ಭಕ್ತಿಯಲ್ಲಿ ಮಿಂದೆದ್ದ ಜಿಲ್ಲೆಯ ಜನತೆ

ದೇವಾಲಯಗಳಿಗೆ ತೆರಳಿ ಪೂಜೆಯಲ್ಲಿ ಭಾಗಿಯಾದ ಭಕ್ತರು

ಹೋಮ, ಹವನ, ಭಜನೆ ಮೂಲಕ ಅನ್ನಸಂತರ್ಪಣೆ

ಹನುಮ ಜಯಂತಿ ಅಂಗವಾಗಿ ಜಿಲ್ಲೆಯ ಆಂಜನೇಯಸ್ವಾಮಿ, ಶ್ರೀರಾಮರ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಭಕ್ತರು ಬೆಳಗ್ಗೆಯಿಂದಲೇ ಶ್ರದ್ಧಾಭಕ್ತಿಯಿಂದ ದೇವಾಲಯಗಳಿಗೆ ತೆರಳಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ಹನುಮ ಜಯಂತಿ ಅಂಗವಾಗಿ ದೇವಾಲಯಗಳಿಗೆ ಸುಣ್ಣ ಬಣ್ಣ ಬಳಿದು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂ, ಬೆಳ್ಳಿ ಬಂಗಾರದ ಆಭರಣಗಳಿಂದ ಅಲಂಕಾರ ಮಾಡಿದ್ದರು, ಕೆಲ ದೇವಾಲಯಗಳಲ್ಲಿ ಬೆಣ್ಣೆಅಲಂಕಾರ, ಬೆಳ್ಳಿ ಅಲಂಕಾರ ಮಾಡಿದ್ದು ದೇವಾಲಯಗಳನ್ನು ವಿದ್ಯುತ್ ದೀಪಾಲಂಕಾರಗಳಿ0ದ ಅಲಂಕರಿಸಲಾಗಿತ್ತು.

ಬೆಳಿಗ್ಗೆಯಿ0ದಲೇ ದೇವರ ಮೂರ್ತಿಗೆ ವಿಶೇಷ ಅಭಿಷೇಕ ಸಹಿತ ಬಗೆಬಗೆಯ ಹಣ್ಣು ಹಂಪಲುಗಳಿ0ದ ಅಲಂಕಾರ ಮಾಡಲಾಗಿತ್ತು. ಭಕ್ತಾಧಿಗಳು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯಲ್ಲಿರುವ ಶ್ರೀ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಆದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮಿಜಿ ನೇತೃತ್ವದಲ್ಲಿ ಹೋಮಹವನ ಸಹಿತ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ ಹೊರಾವರಣವನ್ನು ಮುತ್ತುರತ್ನಗಳಿಂದ, ಡ್ರಾಗನ್ ಫ್ರೂಟ್‌ಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಹೊರ ಆವರಣದಲ್ಲಿ ಭಜನಾ ತಂಡಗಳಿ0ದ ದೇವರ ನಾಮಗಳನ್ನು ಹಾಡಲಾಯಿತು.

ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಪೂಜೆಯಲ್ಲಿ ಭಾಗಿಯಾಗಿದ್ದ ಉಷಾ ಆಂಜನೇಯರೆಡ್ಡಿ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಭಾಗಿಯಾಗುವುದು ಅತ್ಯಂತ ಸಂತಸ ತಂದಿದೆ. ಬೆಳಗ್ಗೆ 5 ಗಂಟೆಯಿ0ದಲೇ ಅಭಿಷೇಕ, ಹೋಮ ಏರ್ಪಡಿಸಿದ್ದ ಸ್ವಾಮೀಜಿಗಳೇ ಮುಂದೆ ನಿಂತು ಹೋಮ ನಡೆಸಿಕೊಟ್ಟರು. ಒಂದು ವಾರದ ಕಾಲ ನಡೆಯುವ ಸಂಕೀರ್ತನೆಯನ್ನು ನಡೆಸಿ ಕೊನೆಯದಿನ ಕಡಲೆಕಾಯಿ ಪರಿಷೆ ನಡೆಸುವುದು ರೂಡಿ. ಇಂತಹ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿರುವುದು ಭಗವಂತನ ಆಶೀರ್ವಾದವೆಂದೇ ಭಾವಿಸುತ್ತೇನೆ ಎಂದರು.

ನಗರದ 31ನೇ ವಾರ್ಡ್ ಇಂದಿರಾನಗರದಲ್ಲಿರುವ ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ 23ನೇ ವರ್ಷದ ಹನುಮ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು. ಇಲ್ಲಿನ ನಗರಸಭೆ ಸದಸ್ಯ ಬುಜ್ಜಿ ರಾಜಶೇಖರ್ ಮಾತನಾಡಿ, ವಾರ್ಡಿನಲ್ಲಿರುವ ದೇವಾಲಯದಲ್ಲಿ ಕಳೆದ 23 ವರ್ಷಗಳಿಂದ ಹನುಮಜಯಂತಿ ನಡೆಸಿಕೊಂಡು ಬಂದಿದ್ದೇವೆ. ಒಂದೊ0ದು ವರ್ಷ ಒಂದೊ0ದು ಅಲಂಕಾರ ಮಾಡಿದಂತೆ ಈ ವರ್ಷ ದಾಳಿಂಬೆ ಮತ್ತು ದಾಕ್ಷಿಯಿಂದ ದೇವಾಲಯವನ್ನು ಅಲಂಕಾರ ಮಾಡಿ ಹನುಮಜಯಂತಿ ಆಚರಿಸಲಾಯಿತು ಎಂದರು.

ಒ0ದು ವಾರ ದೀಪಾಲಂಕಾರ, ಪುಷ್ಪಾಲಂಕಾರ ಏರ್ಪಡಿಸಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ತೀರ್ಥಪ್ರಸಾದ ಸಹಿತ ಅನ್ನದಾನ ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ವಾರ್ಡ್ ಸದಸ್ಯೆ ಜಯಲಕ್ಷ್ಮೀ ರಾಜಶೇಖರ್ ಸಹಕಾರವಿದೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *