ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ 10 ಪ್ರತಿಜ್ಞೆ: ಜನತೆಗೆ ಪ್ರಧಾನಿ ಮೋದಿ ಕರೆ
1 min read
1 year ago
”ದಸರಾ ಉತ್ಸವ ಕೇವಲ ರಾವಣನ ಪ್ರತಿಕೃತಿ ದಹನ ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ಜಾತೀಯತೆ ಮತ್ತು ಪ್ರಾದೇಶಿಕತೆ ಹೆಸರಿನಲ್ಲಿ ಭಾರತ ಮಾತೆಯನ್ನು ವಿಭಜಿಸುವ ಶಕ್ತಿಗಳನ್ನು ನಾಶಮಾಡಬೇಕು,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರೆ ನೀಡಿದರು.
ದಿಲ್ಲಿಯ ದ್ವಾರಕ ಪ್ರದೇಶದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆಗೆ ವಿಜಯದಶಮಿ ಮತ್ತು ನವರಾತ್ರಿಯ ಶುಭಾಶಯ ತಿಳಿಸಿದರು. ಇದು ಕೆಟ್ಟದ್ದರ ಮೇಲೆ ಒಳಿತಿನ ದಿಗ್ವಿಜಯ, ಅಹಂಕಾರದ ಎದುರು ವಿನಮ್ರತೆ ಹಾಗೂ ಕೋಪದ ಎದುರು ಸಹನೆಯ ವಿಜಯದ ಸಂಕೇತ. ಇದು ನಮ್ಮ ಶಪಥಗಳನ್ನು ನವೀಕರಿಸುವ ದಿನ ಕೂಡ ಹೌದು ಎಂದು ಹೇಳಿದರು.
ಪ್ರಧಾನಿ ಕರೆ ನೀಡಿದ ಹತ್ತು ಪ್ರತಿಜ್ಞೆಗಳು
ಭವಿಷ್ಯದ ಪೀಳಿಗೆಗಾಗಿ ನೀರನ್ನು ಉಳಿಸುವುದು
ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಬಳಸಲು ಜನರನ್ನು ಪ್ರೇರೇಪಿಸುವುದು
ಹಳ್ಳಿಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಬಗ್ಗೆ ಎಲ್ಲರನ್ನೂ ಜಾಗೃತಗೊಳಿಸಬೇಕು
ಸರಕು ಸೇವೆಗಳ ಉತ್ಪಾದನೆ ಸೇರಿದಂತೆ ಎಲ್ಲವೂ ದೇಶೀಯವಾಗಿರಲಿ
ಗುಣಮಟ್ಟದ ಕೆಲಸ ಮಾಡುವುದು, ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದು
ಮೊದಲು ನಮ್ಮ ಸ್ವಂತ ದೇಶದಲ್ಲಿ ಪ್ರಯಾಣಿಸುವುದು ಮತ್ತು ನಂತರ ವಿಶ್ವಾದ್ಯಂತ ಪ್ರಯಾಣಿಸುವುದು
ನೈಸರ್ಗಿಕ ಕೃಷಿಯ ಬಗ್ಗೆ ರೈತರಿಗೆ ಶಿಕ್ಷಣ ನೀಡುವುದು
ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಬಳಸುವುದು
ವೈಯಕ್ತಿಕ ಫಿಟ್‌ನೆಸ್ ಬಗ್ಗೆ ಗಮನ ಹರಿಸುವುದು
ಕನಿಷ್ಠ ಒಂದು ಬಡ ಕುಟುಂಬದ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸುವುದು