ಬಡವರ ಬೆಳೆ ನಾಶಮಾಡಿದ ರಿಯಲ್ ಎಸ್ಟೇಟ್ ಉದ್ಯಮಿಗಳು
1 min readಬಡವರ ಬೆಳೆ ನಾಶಮಾಡಿದ ರಿಯಲ್ ಎಸ್ಟೇಟ್ ಉದ್ಯಮಿಗಳು
ಅಧಿಕಾರಿಗಳು ಮಾಡಿದ ತಪ್ಪಿಗೆ ರೈತನ ಬೆಳೆ ನಾಶ
ರೈತನಿಗೆ ಆದ ಬೆಳೆ ನಷ್ಟ ತುಂಬುವವರು ಯಾರು?
ಸರ್ವೇ ಅಧಿಕಾರಿಗಳು ಮಾಡಿದ ತಪ್ಪಿಗೆ ರೈತ ಬೆಳೆ ಕಳೆದುಕೊಂಡಿದ್ದಾನೆ. ಅಧಿಕಾರಿಗಳು ಮಡಾಇದ ಎಡವಟ್ಟಿನಿಂದ ರಿಯಲ್ ಎಸ್ಟೇಟ್ ದಂಡೆಕೋರರು ರೈತರ ಬೆಳೆ ನಾಶ ಮಾಡಿದ್ದು, ನಂತರ ಅಧಿಕಾರಿಗಳು ತಪ್ಪು ತಿದ್ದಿಕೊಂಡು ಜಮೀನು ವಾಪಸ್ ನೀಡಿದ್ದಾರೆ. ಆದರೆ ಬೆಳೆ ಕಳೆದುಕೊಂಡ ರೈತನಿಗೆ ಮಾತ್ರ ಆದ ನಷ್ಟ ತುಂಬಿಸಿಕೊಡುವವರೇ ಇಲ್ಲವಾಗಿದ್ದಾರೆ. ಹಾಗಾದರೆ ಏನು ಈ ಸಮಸ್ಯೆ ಅಂತೀರಾ, ನೀವೇ ನೋಡಿ.
ಗುಡಿಬಂಡೆ ತಾಲೂಕಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ಹಾವಳಿ ಹೆಚ್ಚಾಗಿದೆ, ಇವರಿಗೆ ಬಡವರು ಜಮೀನುಗಳು ಕಾಣಿಸಿದರೆ ಅಕ್ರಮ ಮಾಡುವುದೇ ಕೆಲಸವಾಗಿಸಿಕೊಂಡ0ತಿದೆ. ಗುಡಿಬಂಡೆ ತಾಲೂಕಿನ ಚೆಂಡೂರು ಗ್ರಾಮದ ರೈತ ಮಂಜುನಾಥ ರೆಡ್ಡಿ ಎಂಬುವರು ಪಕ್ಕದ ಊರಿನ ಕೊಂಡವಾಬನಹಳ್ಳಿ ಬಳಿ ಇರುವ ಜಮೀನಿನಲ್ಲಿ ರಾಗಿ ಬೆಳೆದಿದ್ದ. ಇನ್ನೇನು ರಾಗಿ ಬೆಳೆ ಕಟಾವು ಮಾಡಲು ಹೋಗುತ್ತಿರುವಾಗಲೇ ರಿಯಲ್ ಎಸ್ಟೇಟ್ ದಂಥಕೋರರು ಬಂದು ಜಮೀನು ತಮ್ಮದು ಅಂತಾ ಬೆಳೆ ನಾಶ ಮಾಡಿ, ಬೇಲಿ ಹಾಕಿದ್ದಾರೆ.
ರೈತ ಹಾಗೂ ಉದ್ಯಮಿಗಳ ನಡುವೆ ವಾಗ್ವಾದ ನಡೆದಿದೆ. ರೈತ ಗುಡಿಬಂಡೆ ತಾಲೂಕಿನ ಎಡಿಎಲ್‌ಆರ್ ಬಳಿ ವಿಚಾರಿಸಿದಾಗ ಭೂಮಿ ಸರ್ವೇ ಮಾಡಿದಾಗ ಅಧಿಕಾರಿಗಳೇ ತಪ್ಪು ಮಡಾಇರೋದು ಬೆಳಕಿಗೆ ಬಂದಿದೆ. ರೈತರು ಜಿಲ್ಲಾ ಕೇಂದ್ರದ ಡಿಡಿಎಲ್‌ಆರ್ ಬಳಿ ಹೋಗಿದ್ದಾರೆ, ಅನ್ಯಾಯ ಆಗಿದೆ ಜಮೀನು ಸರ್ವೇ ಮಾಡಿಸಿ ಕೊಡಿ ಅಂತಾ ಕೇಳಿಕೊಂಡಿದ್ದಾರೆ. ರೈತರ ಕಷ್ಟ ಕೇಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೋಡಿ ಸರ್ವೇ ಮಾಡಿದಾಗ ಎಲ್ಲಾ ಸರಿಯಾಗಿ ಬಂದಿದೆ.
ಇದರಿ0ದ ರೈತರ ಮುಖದಲ್ಲಿ ಸಂತೋಷ ಒಂದು ಕಡೆಯಾದರೆ, ಅಧಿಕಾರಿಗಳು ಮಾಡಿದ ತಪ್ಪಿಗೆ ಬೆಳೆ ನಷ್ಟ ಆಗಿದ್ದು ಮತ್ತೊಂದು ಕಡೆಯಾಗಿ ರೈತ ಕಣ್ಣೀರು ಹಾಕಿದ್ದಾರೆ. ಏನೇ ಆಗಲಿ ಎಲ್ಲಾ ಕಡೆ ಬಲಿಯಾಗುವುದು ರೈತರು ಮಾತ್ರ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಅಧಿಕಾರಿಗಳು ರೈತರ ಬದುಕು ನಾಶ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವವರೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವವರೇ ಇಲ್ಲವಾಗಿದ್ದಾರೆ.