ಹನುಮ ಜಯಂತಿ ಹಿನ್ನೆಲೆ ದೇವಾಲಯ ಅಲಂಕಾರ
1 min readಹನುಮ ಜಯಂತಿ ಹಿನ್ನೆಲೆ ದೇವಾಲಯ ಅಲಂಕಾರ
ಬಾಗೇಪಲ್ಲಿ ಬಯಲಾಂಜನೇಯ ಸ್ವಾಮಿಗೆ ವಿಶೇಷ ಪೂಜೆ
ಶುಕ್ರವಾರ ಹನುಮ ಜಯಂತಿ ಹಿನ್ನೆಲೆ ಬಾಗೇಪಲ್ಲಿ ಪಟ್ಟಣದ ಬಯಲಾಂಜನೇಯ ಸ್ವಾಮಿ ದೇವಾಲಯ ಸೇರಿ ತಾಲೂಕಿನ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವರಿಗೆ ವಿಶೇಷ ತುಳಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಹನುಮಜಯಂತಿ ಹಿನ್ನೆಲೆಯಲ್ಲಿ ಬಾಗೇಪಲ್ಲಿ ತಾಲೂಕಿನ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಅರ್ಚಕ ಶೇಷು ಅವರ ನೇತೃತ್ವದಲ್ಲಿ ಬಯಲಾಂಜನೇಯ ಸ್ವಾಮಿಗೆ ಮುಂಜಾನೆಯಿ0ದ ಮುಸ್ಸಂಜೆಯವರೆಗೂ ವಿಶೇಷ ಪೂಜೆಗಳು ಜರುಗಿದವು. ಈ ವೇಳೆ ಮಾತನಾಡಿದ ಅರ್ಚಕ ಶೇಷು, ಆಂಜನೇಯ ಸೀತಾ ದೇವಿಯನ್ನು ಕಾಣುವವರೆಗೂ ಆಹಾರ ಸೇವಿಸದೇ ವ್ರತ ಆಚರಿಸುತ್ತಾನೆ. ನಂತರ ಸೀತಾದೇವಿಯನ್ನು ನೋಡಿ, ಅಲ್ಲಿನ ವನದಲ್ಲಿದ್ದ ಫಲಗಳನ್ನು ಸೇವಿಸುತ್ತಾನೆ. ಈ ಕಾಲದಲ್ಲಿ ನಡೆಸುವ ಪೂಜೆಗಳಿಂದ ಮೋಕ್ಷ ಸಿಗುತ್ತದೆ ಎಂದರು.
ಇತ್ತೀಚಿಗಷ್ಟೇ ಹನುಮ ಜಯಂತಿ ಆಚರಣೆ ಮಾಡಲಾಗಿದ್ದು, ವಾಯು ದೇವರಿಗೆ ಇರುವ ಹನುಮದ್ ವ್ರತ ವನ್ನು ಆಚರಣೆ ಮಾಡುವುದು ಪುಣ್ಯದ ಕೆಲಸ ಆಗಿದೆ. ವಾಯು ದೇವರಿಗೆ ಶ್ರಮ ಎಂಬುದೇ ಇಲ್ಲ. ಸಂಜೀವಿನಿ ಪರ್ವತವನ್ನೇ ಎತ್ತುಕೊಂಡು ದೇವರಿಗೆ ಆಯಾಸ ಎಂಬುದೇ ಕಂಡು ಬಂದಿಲ್ಲವ0ತೆ. ಅದರ ನಿಮಿತ್ತ ಹನುಮ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ದೇವರು ನಮ್ಮ ದೇಶದಲ್ಲಿ ರೈತರು ಹಾಗೂ ಸೈನಿಕರಿಗೆ ಆಯುಷ್ಯ ಆರೋಗ್ಯವನ್ನು ನೀಡಲಿ, ದೇವರ ಕೃಪೆ ಇರಲಿ ಎಂದು ತಿಳಿಸಿದರು.
ಈ ಬಗ್ಗೆ ಪುರಸಭೆ ಮಾಜಿ ಅಧ್ಯಕ್ಷ ನರಸಿಂಹಾನಾಯ್ಡು ಮಾತನಾಡಿ, ಹನುಮಾನ್ ದೇವರು ನಾಡಿನ ಎಲ್ಲರಿಗೆ ಒಳಿತು ಮಾಡಲಿ, ಕಾಲಕಾಲಕ್ಕೆ ಉತ್ತಮ ಮಳೆ, ಬೆಳೆಗಳಾಗಿ ರೈತಾಪಿ ಜನರ ಜೀವನ ಸುಧಾರಣೆಯಾಗಲಿ ದೇಶದಲ್ಲಿರುವ ಎಲ್ಲಾ ಜನರು ಉತ್ತಮ ಆರೋಗ್ಯದಿಂದ ಜೀವಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.