ಗೌರಿಬಿದನೂರಿನಲ್ಲಿ ವಿಜೃಂಭಣೆಯ ಹನುಮಜಯಂತಿ
1 min readಗೌರಿಬಿದನೂರಿನಲ್ಲಿ ವಿಜೃಂಭಣೆಯ ಹನುಮಜಯಂತಿ
ನದಿ ದಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ರಥೋತ್ಸವ
ಗೌರಿಬಿದನೂರು ನಗರದ ನದಿ ದಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀ ಸೀತಾರಾಮ ಭ್ರಹ್ಮರಥೋತ್ಸವ ವಿಜೃಂಭಣೆಯಿ0ದ ನೆರವೇರಿತು.
ರಥೋತ್ಸವಕ್ಕೆ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ, ಪೂರ್ವಜರು ಸಮಾಜದ ಶಾಂತಿ ಸೌಹಾರ್ಧತೆಯ ಹಿತದೃಷ್ಟಿಯಿಂದ ಹಾಗೂ ಊರು ಸುಭಿವಾಗಿರಲು ರಥೋತ್ಸವಗಳು ಹಾಗೂ ಜಾತ್ರೆಗಳನ್ನು ಹಮ್ಮಿಕೊಂಡು ಬಂದಿದ್ದಾರೆ, ಅದನ್ನು ನಾವು ಮುಂದುವರಿಸಿಕೊ0ಡು ಹೋಗುವ ಮೂಲಕ ಸಮಾಜದ ಅಧ್ಯುದಯಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಇತಿಹಾಸ ಪ್ರಸಿದ್ದ ನದಿದಡದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ಇದಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಇಲ್ಲಿನ ಆಂಜನೇಯ ಈಡೇರಿಸಿಕೊಂಡು ಬರುತ್ತಿರುವ ಬಗ್ಗೆ ಭಕ್ತರಲ್ಲಿ ಅಪಾರ ನಂಬಿಕೆಯಿದೆ, ಇದರಿಂದ ಉತ್ತರ ಪಿನಾಕಿನಿ ನದಿ ದಡದಲ್ಲಿನ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ , ಭಕ್ತಾಧಿಗಳು ಶ್ರದ್ಧಾ-ಭಕ್ತಿಯಿಂದ ಸ್ವಾಮಿಯ ಸೇವೆ ಮಾಡುವ ಮೂಲಕ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಿದರು.
ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತಾಧಿಗಳು ಜೈ ಶ್ರೀರಾಮ್ ಎಂಬ ಘೋಷಣೆ ಮುಗಿಲು ಮುಟ್ಟಿತ್ತು, ಭಕ್ತರು ಬಾಳೆಹಣ್ಣು ಭವನವನ್ನು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡಿದರು. ದೇವಾಲಯ ಸಮಿತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದಲ್ಲಿ ನಗರಸಭೆ ಅಧ್ಯಕ್ಷ ಲಕ್ಷೀನಾರಾಯಣಪ್ಪ, ಹೆಚ್.ಎನ್. ಪ್ರಕಾಶರೆಡ್ಡಿ, ಕೆ. ಜಯಪಾಲರೆಡ್ಡಿ, ದೇವಾಲಯ ಸಮಿತಿ ಅಧ್ಯಕ್ಷ ಎಸ್.ರಮೇಶ್ ಇದ್ದರು.