ಹಳೆಯ ಮುನಿಸು ಮರೆತು ಮತ್ತೆ ಒಂದಾದ ದಂಪತಿಗಳು
1 min readಹಳೆಯ ಮುನಿಸು ಮರೆತು ಮತ್ತೆ ಒಂದಾದ ದಂಪತಿಗಳು
ಬಾಗೇಪಲ್ಲಿಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿಗಳು
ಕೌಟು0ಬುಕ ಸಮಸ್ಯೆಯಿಂದ ದಂಪತಿಗಳ ನಡುವೆ ಬಿರುಕು ಉಂಟಾಗಿ, ಬೇರೆ ಆಗಿದ್ದರು. ಲೋಕ ಅದಾಲತ್‌ನಲ್ಲಿ ಮತ್ತೆ ಆ ಜೋಡಿ ಒಂದಾದ ಘಟನೆ ಬಾಗೇಪಲ್ಲಿ ನ್ಯಾಯಾಲಯದಲ್ಲಿ ಇಂದು ನಡೆಯಿತು.
ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯಗಳಲ್ಲಿ ಇಂದು ನಡೆದ ರಾಷ್ಟಿಯ ಲೋಕ್ ಅದಾಲತ್‌ನಲ್ಲಿ ವೈವಾಹಿಕ ವಿವಾದಗಳಿಗೆ ಸಂಬ0ಧಿಸಿ ಕಾರಣಾಂತರಗಳಿ0ದ ದೂರವಾಗಿ, ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಗಳು ರಾಜೀ ಸಂಧಾನದ ಮೂಲಕ ಒಂದಾಗಿ ಪ್ರಕರಣ ಸುಖಾಂತ್ಯವಾಗಿದೆ. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾರತಿ ಅವರ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಸಂಬ0ಧಿಸಿ 2020ನೇ ಸಾಲಿನಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಹೆಸರು ಹೇಳಲು ಇಚ್ಚಿಸಿದ ದಂಪತಿಗಳು ಇದೀಗ ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆಯಿಂದ ಮನಸ್ತಾಪ ಮರೆತು ರಾಜಿಯಾಗಿ ಜೀವನದಲ್ಲಿ ಒಂದಾಗಿ ಬಾಳುತ್ತೇವೆ ಎಂದು ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಧನ್ಯವಾದ ಹೇಳಿ ಹೂವಿನ ಹಾರ ಬದಲಿಸಿ ಸಿಹಿ ತಿನ್ನಿಸುವ ಮೂಲಕ ಮತ್ತೆ ಒಂದಾದರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎ.ನಂಜು0ಡಪ್ಪ ಮಾತನಾಡಿ, ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದ್ದು, ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗ ಪಡೆಯುವಂತೆ ಕೋರಿದರು.
ರಾಷ್ಟಿಯ ಲೋಕ ಅದಾಲತ್‌ನಲ್ಲಿ ದಂಪತಿಗಳು ಒಂದಾದ ಪ್ರಕರಣಕ್ಕೆ ವಕೀಲರು, ಕಕ್ಷಿದಾರರು ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮವಾಗಿ ಸಹಕರಿಸಿದ್ದಾರೆ. ಲೋಕ್ ಅದಾಲತ್‌ನಲ್ಲಿ ಭಾಗಿಯಾದ ಸಾರ್ವಜನಿಕರಿಗೆ, ಕಕ್ಷಿದಾರರಿಗೆ, ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹಿರಿಯ ನ್ಯಾಯಾಧೀಶರಾದ ಭಾರತಿ ಅವರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಚಿನ್ನಸ್ವಾಮಿ, ನಾಗಭೂಷಣ, ಮುಸ್ತಾಕ್ ಅಹಮದ್, ಅಲ್ಲಾ ಬಕಾಷ್, ನರಸಿಂಹ ರೆಡ್ಡಿ ಇದ್ದರು.