ಕೆಲಸ ಮಾಡುವ ಕಾರ್ಮಿಕರು ಕುಟುಂಬ ಸದಸ್ಯರಿದ್ದಂತೆ
1 min readಕೆಲಸ ಮಾಡುವ ಕಾರ್ಮಿಕರು ಕುಟುಂಬ ಸದಸ್ಯರಿದ್ದಂತೆ
ಕಾರ್ಮಿಕರ ಪ್ರೋತ್ಸಾಹಕ್ಕೆ ಪ್ರಥಮ ಬಹುಮಾನ ೧.೨೫ ಲಕ್ಷ ಮೌಲ್ಯದ ಬೈಕ್
ದೊಡ್ಡಬಳ್ಳಾಪುರ ತಾಲೂಕಿನ ಪರ್ಲ್ ಗ್ಲೋಬಲ್ ಕಾರ್ಖಾನೆ ತನ್ನ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ ಶೇ.೧೦೦ ರಷ್ಟು ಹಾಜರಾತಿ ಪಡೆಯುವಲ್ಲಿ ಯಶಸ್ವೀಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಪರ್ಲ್ ಗ್ಲೋಬಲ್ ಕಾರ್ಖಾನೆ ತನ್ನ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ ಶೇ.೧೦೦ ರಷ್ಟು ಹಾಜರಾತಿ ಪಡೆಯುವಲ್ಲಿ ಯಶಸ್ವೀಯಾಗಿದೆ. ಹಾಜರಾತಿ ಮತ್ತು ಹೊರಗುಳಿಯುವಿಕೆ ನಿಯಂತ್ರಿಸಲು ಅಕ್ಟೋಬರ್ ೫ ರಿಂದ ಡಿಸೆಂಬರ್ ೭ರವೆರೆಗೆ ಪೂರ್ಣ ಹಾಜರಾತಿ ಪಡೆದ ಕಾರ್ಮಿಕರಿಗೆ ರೇಷನ್ ಕಿಟ್ ನೀಡಿ ಪ್ರೋತ್ಸಹಿಸಿದ್ದಾರೆ. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಿನವರೆಗೆ ರಜೆ ಪಡೆಯದೆ ಸಂಪೂರ್ಣ ಹಾಜರಾತಿ ಹೊಂದಿರುವ ಕಾರ್ಮಿಕರಿಗೆ ಲಕ್ಕಿ ಡ್ರಾ ಮೂಲಕ ಪ್ರಥಮ ಬಹುಮಾನವಾಗಿ ೧.೨೫ ಲಕ್ಷ ಮೌಲ್ಯದ ಬೈಕ್, ದ್ವಿತೀಯ ಬಹುಮಾನವಾಗಿ ೨೫ ಸಾವಿರ ಮೌಲ್ಯದ ೩ ಗ್ರಾಂ ಚಿನ್ನ, ತೃತೀಯ ಬಹುಮಾನವಾಗಿ ೧೦ ಸಾವಿರ ರೂಪಾಯಿ ಮೌಲ್ಯದ ೧೦೦ಗ್ರಾಂ ಬೆಳ್ಳಿ ನೀಡಲಾಯಿತು.
ಲಕ್ಕಿ ಡ್ರಾ ಮೂಲಕ ಪ್ರಥಮ ಬಹುಮಾನವನ್ನು ಕಾರ್ಖಾನೆಯ ಪ್ರಿಯಾಂಕ ಪಡೆದರೆ, ದ್ವಿತೀಯ ಬಹುಮಾನವನ್ನು ವಿನೋದ್, ತೃತೀಯ ಬಹುಮಾನವನ್ನು ಭಾರತಿ ಪಡೆದಿz್ದÁರೆ. ಈ ಕುರಿತು ಸಂಸ್ಥೆಯ ಉಪಾಧ್ಯಕ್ಷ ಉದಯ್ ಶೆಟ್ಟಿ ಮಾತನಾಡಿ, ಕಾರ್ಮಿಕರು ನಮ್ಮ ಕುಟುಂಬಸ್ಥರಿದ್ದAತೆ, ನಾವೆಲ್ಲರೂ ಒಂದೇ ಕುಟುಂಬ ಈ ರೀತಿಯ ಪ್ರೋತ್ಸಾಹ ನೀಡಿ ಕಾರ್ಮಿಕರಲ್ಲಿ ಹೆಚ್ಚಿನ ಹಾಜರಾತಿ ಪಡೆಯುವ ಜೊತೆಗೆ ನಮ್ಮಲ್ಲಿ ಕರ್ತವ್ಯ ಸಲ್ಲಿಸಲು ಮತ್ತಷ್ಟು ಹುಮ್ಮಸ್ಸು ದೊರೆತಂತಾಗುತ್ತದೆ, ನಮ್ಮಲ್ಲಿ ಸುಮಾರು ೨೫೦೦ಕ್ಕೂ ಅಧಿಕ ಉದ್ಯೋಗಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇಂದು ೪೦೦ಕ್ಕೂ ಅಧಿಕ ಉದ್ಯೋಗಿಗಳು ಶೇ.೧೦೦ ರಷ್ಟು ಹಾಜರಾತಿ ಪಡೆಡಿದ್ದಾರೆ ಎಂದರು.
ಮುAದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಸಂಸ್ಥೆಯಿAದ ಹಾಜರಾತಿ ಹೆಚ್ಚಿಸುವ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು. ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಅಥಾವು¯್ಲÁ ಖಾನ್ ಮಾತನಾಡಿ, ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಅನುಕೂಲದ ಜೊತೆಗೆ ಹಾಜರಾತಿ ಹೆಚ್ಚಿಸಲು ಉತ್ತಮ ಸಹಕಾರಿಯಾಗಿದೆ, ಕಾರ್ಖಾನೆಯಲ್ಲಿ ನಿಷ್ಠೆಯಿಂದ ರಜಾ ಪಡೆಯದೆ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಇಂದು ಪ್ರೋತ್ಸಾಹ ನೀಡಿದ್ದೇವೆ, ಮುಂದೆ ಮತ್ತಷ್ಟು ಉತ್ತಮ ಕಾರ್ಯಕ್ರಮ ಮಾಡಿ, ಉದ್ಯೋಗಿಗಳನ್ನು ಶೇ.೧೦೦ ರಷ್ಟು ಹಾಜರಾತಿ ಪಡೆಯುವಲ್ಲಿ ಪ್ರೋತ್ಸಾಹಿಸಲಾಗುವುದು ಎಂದರು.