ರಾಜ್ಯದ ಅಪಾರ್ಟ್‌ಮೆಂಟ್‌ಗಳಲ್ಲಿ ಸೌಲಭ್ಯ ನೀಡದ, ನಿರ್ವಹಣೆಯೂ ಮಾಡದ ಬಿಲ್ಡರ್ಸ್‌ಗಳಿಗೆ ಬಿಸಿ ಮುಟ್ಟಿಸಿದ ಪ್ರಾಧಿಕಾರ
1 min read
1 year ago
ನಿಯಮದಂತೆ ಅಪಾರ್ಟ್‌ಮೆಂಟ್‌ಗೆ ಅಗತ್ಯ ಮೂಲ ಸೌಲಭ್ಯ ಒದಗಿಸದೆ, ಅದನ್ನು ಸರಿಯಾಗಿ ನಿರ್ವಹಣೆಯನ್ನೂ ಮಾಡದೆ ಅಲ್ಲಿನ ನಿವಾಸಿಗಳಿಗೆ ಸೇವೆ ನೀಡದ ಬಿಲ್ಡರ್‌ಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಬಿಸಿ ಮುಟ್ಟಿಸಿದೆ. ಇದೇ ಮೊದಲ ಬಾರಿಗೆ ‘ಕೆ-ರೇರಾ’ ಅಪಾರ್ಟ್‌ಮೆಂಟ್ ನಿರ್ವಹಣೆಗೆ ಮೀಸಲಿಟ್ಟಿದ್ದ 62.26 ಲಕ್ಷ ರೂ. ಪೂರ್ಣ ನಿಧಿಯನ್ನು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್ (ಆರ್‌ಡಬ್ಲ್ಯುಎ)ಗೆ ಹಸ್ತಾಂತರ ಮಾಡಲು ಆದೇಶಿಸಿದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಈ ಆದೇಶ ಇತರೆ ಬಿಲ್ಡರ್‌ಗಳಿಗೆ ಎಚ್ಚರಿಕೆಯ ಪಾಠವಾಗಿದೆ.