ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಮುಂದುವರಿದ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ

1 min read

ಮುಂದುವರಿದ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ

ಚಿಕ್ಕಬಳ್ಳಾಪುರದಲ್ಲಿ ಒಡೆದ ಜಕ್ಕಲ ಮಡಗು ಪೈಪ್‌ಲೈನ್

ಅಪಾರ ಪ್ರಮಾಣದ ನೀರು ರಸ್ತೆ ಪಾಲು

ಜೀವಜಲ ಪೋಲಾಗುವುದಕ್ಕೆ ಸಾರ್ವಜನಿಕರ ಆಕ್ರೋಶ

 

ಈ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ ಪಾರವೇ ಇಲ್ಲವಾಗಿದೆ. ಕಳೆದ ನಾಲ್ಕು ತಿಂಗಳಿನಿ0ದ ತಿಪ್ಪೇನಹಳ್ಳಿ ಬಳಿ ಜಕ್ಕಲಮಡಗು ಪೈಪ್‌ಲೈನ್ ಒಡೆದು ಅದಕ್ಕೆ ತ್ಯಾಜ್ಯ ನೀರು ಸೇರುತ್ತಿದ್ದರೂ ದುರಸ್ತಿ ಮಾಡಲು ಮುಂದಾಗದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ಜಕ್ಕಲಮಡಗು ಜಲಾಶಯದ ನೀರು ಸರಬರಾಜು ಮಾಡುವ ಪೈಪ್‌ಲೈನ್ ಒಡೆದಿದ್ದಾರೆ.

ಹೌದು, ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮಗೆ ಇಷ್ಟ ಬಂದ ರೀತಿಯಲ್ಲಿ ಹೆದ್ದಾರಿ ಕಾಮಗಾರಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ಅವರು ನಡೆದುಕೊಳ್ಳುತ್ತಿದ್ದು, ಅವರ ನಿರ್ಲಕ್ಷಕ್ಕೆ ಒಂದು ಕಡೆ ಕುಡಿಯೋ ನೀರಿಗೆ ತ್ಯಾಜ್ಯ ಸೇರುತ್ತಿದ್ದರೆ, ಮತ್ತೊಂದು ಕಡೆ ಅಪಾರ ಪ್ರಮಾಣದ ಜೀವ ಜಲ ಪೋಲಾಗುತ್ತಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಹೆದ್ದಾರಿ ಪ್ರಾಧಿಕಾರಕ್ಕೆ ಶಾಪ ಹಾಕುತ್ತಿದ್ದಾರೆ.

ರಾಷ್ಟಿಯ ಹೆದ್ದಾರಿ ೨೩೪ರ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ಹಲವು ತಿಂಗಳುಗಳೇ ಕಳೆದಿದ್ದು, ಈಗಲೇ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಆದರೆ ಹೆದ್ದಾರಿ ಗುತ್ತಿಗೆದಾರರು ಮಾಡುತ್ತಿರುವ ಅವಾಂತರಗಳಿಗೆ ಮಾತ್ರ ತಡೆಯೇ ಇಲ್ಲವಾಗಿದೆ. ತಿಪ್ಪೇನಹಳ್ಳಿ ಸರ್ಕಾರಿ ಶಾಲೆ ಕಾಂಪೌAಡ್‌ಗೆ ಹೊಂದಿಕೊ0ಡ0ತೆ ಟ್ರಾನ್ರ್ಮರ್ ಹಾಕಿ ಮಕ್ಕಳನ್ನು ಆತಂಕಕ್ಕೆ ದೂಡಿರುವ ಗುತ್ತಿಗೆದಾರರು ಅದನ್ನು ತೆರುವುಗೊಳಿಸಲು ಮುಂದಾಗಿಲ್ಲ.

ಅದೇ ತಿಪ್ಪೇನಹಳ್ಳಿಯ ಬಳಿ ಹೆದ್ದಾರಿ ಕಾಮಗಾರಿ ವೇಳೆ ಜಕ್ಕಲಮಡಗು ಜಲಾಶಯದ ಪೈಪ್‌ಲೈನ್ ಒಡೆದು ನೀರು ಪೋಲಾಗಿದ್ದು, ಚಿಕ್ಕಬಳ್ಳಾಪುರದ ನಾಗರಿಕರು ಕುಡಿಯುವ ನೀರಿಗೆ ತ್ಯಾಜ್ಯ ಸೇರುತ್ತಿದೆ. ಹಾಗೆ ತ್ಯಾಜ್ ಮಿಶ್ರಿತ ನೀರನ್ನೇ ಚಿಕ್ಕಬಳ್ಳಾಪುರದ ಜನತೆ ಕುಡಿಯುವಂತಾಗಿದೆ. ಇದರ ಬೆನ್ನಲ್ಲಿಯೇ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ದರ್ಗಾ ಮೊಹಲ್ಲಾ ಮುಂಭಾಗದಲ್ಲಿ ಜಕ್ಕಲ ಮಡಗು ಜಲಾಶಯದ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕಾಮಗಾರಿ ವೇಳೆ ಒಡೆದಿದ್ದಾರೆ.

ಇದರಿಂದ ನೀರು ರಸ್ತೆಗೆ ಹರಿದು ಅಪಾರ ಪ್ರಮಾಣದಲ್ಲಿ ಪೋಲಾಗುತ್ತಿದ್ದು, ಎಂಜಿ ರಸ್ತೆಯಲ್ಲಿ ವಾಹನ ಸಂಚಾರ ಮಾಡಲೂ ಕಷ್ಟವಾಗುವ ರೀತಿಯಲ್ಲಿ ನೀರು ಪೋಲಾಗುತ್ತಿದೆ. ಮೊದಲೇ ಪೈಪ್ ಲೈನ್ ಸ್ಥಳಾಂತರ ಮಾಡಿ, ನಂತರ ರಸ್ತೆ ಕಾಮಗಾರಿ ಕೈಗೊಳ್ಳಬೇಕಿದ್ದ ಹೆದ್ದಾರಿ ಪ್ರಾಧಿಕಾರದವರು ನಿರ್ಲಕ್ಷ ಮಾಡಿ ಕಾಮಗದಾರಿ ಆರಂಭಿಸಿರುವುದೇ ಈ ಅವಾಂತರಗಳಿಗೆ ಕಾರಣ ಎಂದು ನಗರಸಭೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ವಿದ್ಯುತ್ ಕಂಬಗಳು ಮತ್ತು ಚರಂಡಿ ಕಾಮಗಾರಿಯನ್ನೂ ತಮಗೆ ಇಷ್ಟ ಬಂದ ರೀತಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರರು ನಡೆಸುತ್ತಿದ್ದು, ನೇರ ಸಾಲಿನಲ್ಲಿ ಇರಬೇಕಾದ ಚರಂಡಿ ಮತ್ತು ವಿದ್ಯುತ್ ಕಂಬಗಳು ಹಿಂದೆ ಮುಂದೆ ಹಾಕಲಾಗಿದೆ. ಇದರ ಹಿಂದಿನ ರಹಸ್ಯದ ಬಗ್ಗೆಯೂ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಅವಾಂತರಗಳ ನಡುವೆಯೇ ಮತ್ತೆ ಜಕ್ಕಲಮಡಗು ಪೈಪ್‌ಲೈನ್ ಒಡೆಯುವ ಮೂಲಕ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರ್ಲಕ್ಷ ಮುಂದುವರಿಸಿದ್ದು, ಕೂಡಲೇ ಪೈಪ್‌ಲೈನ್ ಸ್ಥಳಾಂತರ ಮಾಡಿ, ನಂತರ ಕಾಮಗಾರಿ ಆರಂಭಿಸುವAತೆ ನಗರಸಭೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇನ್ನು ಯುಜಿಡಿ ಪೈಪ್‌ಲೈನ್ ಕೂಡಾ ಇದೇ ಎಂಜಿ ರಸ್ತೆಯ ಮಧ್ಯದಲ್ಲಿ ಹಾದುಹೋಗಿದ್ದು, ಮ್ಯಾನ್‌ಹೋಲ್‌ಗಳನ್ನೂ ನಿರಮಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರರ ನಿರ್ಲಕ್ಷಕ್ಕೆ ಯುಜಿಡಿ ಪೈಪ್‌ಲೈನ್ ಕೂಡಾ ಒಡೆಯುವ ಆತಂಕ ಇದ್ದು, ಕೂಡಲೇ ಜಕ್ಕಲಮಡಗು ಪೈಪ್‌ಲೈನ್ ಮತ್ತು ಯುಜಿಡಿ ಪೈಪ್‌ಲೈನ್ ಸ್ಥಳಾಂತರ ಮಾಡಿ, ನಂತರ ಹೆದ್ದಾರಿ ಕಾಮಗಾರಿ ಆರಂಭಿಸುವAತೆ ನಗರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಗರಸಭೆ ಸೂಚನೆ ಮೇರೆಗೆ ಪೈಪ್‌ಲೈನ್ ಮತ್ತು ಯುಜಿಡಿ ಪೈಪ್‌ಲೈನ್ ಸ್ಥಳಾಂತರ ಮಾಡಿ, ನಂತರ ಕಾಮಗಾರಿ ಆರಂಭಿಸಲಿದ್ದಾರೆಯೇ ಇಲ್ಲವೇ ಇದೇ ರೀತಿಯ ನಿರ್ಲಕ್ಷ ಮುಂದುವರಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

 

About The Author

Leave a Reply

Your email address will not be published. Required fields are marked *