ಹಾಲಿನ ದರ ಇಳಿಕೆ ವಿರೋಧಿಸಿ ರೈತಸಂಘದ ಪ್ರತಿಭಟ
1 min readಹಾಲಿನ ದರ ಇಳಿಕೆ ವಿರೋಧಿಸಿ ರೈತಸಂಘದ ಪ್ರತಿಭಟನೆ
ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಶಿಬಿರ ಕಚೇರಿ ಎದುರು ಧರಣಿ
ಹಾಲಿನ ದರ ಇಳಿಕೆ ಮಾಡಿರುವುದನ್ನು ಖಂಡಿಸಿ, ಲೀಟರ್ ಹಾಲಿಗೆ ಕನಿಷ್ಠ ಬೆಲೆ 50 ರೂ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುಡಿಬಂಡೆ ಹಾಲು ಶಿಬಿರ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಗುಡಿಬಂಡೆ ತಾಲೂಕು ಕಚೇರಿಯಿಂದ ಹಾಲು ಶಿಬಿರದ ಕಚೇರಿಯವರೆಗೆ ರ‍್ಯಾಲಿ ನಡೆಸಿ, ಶಿಬಿರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಹಾಲಿನ ದರ ೩೧ ರುಪಾಯಿಗೆ ಇಳಿಕೆ ಯಾಗಿದೆ, ಅದು ೫೦ ರೂಪಾಯಿಗೆ ಏರಿಸಬೇಕು, ರೈತರು ಹೈನುಗಾರಿಕೆಗಾಗಿ ಬಳಸುವ ಪೌಷ್ಟಿಕಾಂಶಗಳ ಬೆಲೆ ಏರಿಕೆಯಾಗಿದೆ. ಆದರೆ ಹಾಲಿನ ದರ ಇಳಿಕೆ ಮಾಡುತ್ತಿದ್ದರೆ ರೈತರು ಸಂಕಷ್ಟ ಎದುರುಸುತ್ತಿದ್ದಾರೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಜಿ¯್ಲೆಗೊಂದು ವಸತಿ ಶಾಲೆ ಪ್ರಾರಂಭ ಮಾಡಬೇಕು, ಆಗ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಆದಿ ನಾರಾಯಣಸ್ವಾಮಿ, ವೆಂಕಟರಾಜು, ಜಯರಾಮರೆಡ್ಡಿ, ರಾಜಪ್ಪ, ಸೀನಪ್ಪ ಇದ್ದರು.