ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಧಿವಶ

1 min read

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಧಿವಶ

ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್.ಎಂ. ಕೃಷ್ಣ

92 ವರ್ಷದ ಹಿರಿಯ ರಾಜಕೀಯ ಮುತ್ಸದಿ ನಿಧನ

ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಮಾಜಿ ರಾಜ್ಯಪಾಲರೂ ಆಗಿದ್ದ ಎಸ್.ಎಂ. ಕೃಷ್ಣ ಅವರು ವಿಧಿವಶರಾಗಿದ್ದಾರೆ. ೯೨ ವರ್ಷ ವಯಸ್ಸಿನ ಎಸ್.ಎಂ. ಕೃಷ್ಣ ಅವರು, ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಎಸ್.ಎಂ. ಕೃಷ್ಣ ಅವರು ವಿದೇಶದಲ್ಲಿ ವ್ಯಾಸಂಗ ಮಾಡಿದವರು. 1962ರಲ್ಲಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿ, ಮೊದಲ ಅವಧಿಯಲ್ಲಿಯೇ ಶಾಸಕರಾಗಿ ಆಯ್ಕೆಯಾದವರು. ನಂತರ ಕಾಂಗ್ರೆಸ್‌ಸೇರಿ, ಸಂಸದರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಶಾಸಕರಾಗಿ ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದವರು. 1999ರಿಂದ 2003ರವರೆಗೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಬೆಂಗಳೂರನ್ನು ವಿಶ್ವ ಭೂಪಟದಲ್ಲಿ ಕಾಣುವಂತೆ ಮಾಡಿದ ಕೀರ್ತಿ ಹೊಂದಿದ್ದಾರೆ.

ಎಸ್.ಎ0. ಕೃಷ್ಣ ಅವರು ಮುಖ್ಯಮಂತ್ರಿಯಾದ ಒಂದೇ ವರ್ಷದಲ್ಲಿ ವರ ನಟ ಡಾ. ರಾಜ್‌ಕುಮಾರ್ ಅವರ ಅಪಹರಣವಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಎಸ್.ಎಂ. ಕೃಷ್ಣ ಅವರು ಕೈಗೊಂಡ ತೀರ್ಮಾನಗಳು ಅಭಿನಂದನಾರ್ಹ. ತಮಿಳುನಾಡು ಮುಖ್ಯಮಂತ್ರಿಯೊ0ದಿಗೆ ಮಾತನಾಡಿ, ನಕ್ಕೀರನ್ ಪತ್ರಿಕೆ ಸಂಪಾದಕ ಗೋಪಾಲನ್ ಅವರೊಂದಿಗೆ ವೀರಪ್ಪನ್ ಭೇಟಿ ಸೇರಿದಂತೆ ಹಲವು ಮಹತ್ತರ ತೀರ್ಮಾನಗಕಳು ಇಂದಿಗೂ ಅನುಕರಣೀಯ.

ಇನ್ನು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ನಾಲ್ಕು ವರ್ಷಗಳ ಕಾಲವೂ ರಾಜ್ಯದಲ್ಲಿ ತೀವ್ರ ಬರ ಕಾಡಿತು. ಬರವನ್ನವು ಯಶಸ್ವಿಯಾಗಿ ನಿರ್ವಹಣೆ ಮಡಾಉವಲ್ಲಿಯೂ ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರ ನಿಲುವು ಪ್ರಶಂಸೆಗೆ ಒಳಗಾಗಿತ್ತು. ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರದಲ್ಲಿದ್ದಾಗ, ರಾಜ್ಯ ಕಾಂಗ್ರೆಸ್ ರಹೊಣೆ ಹೊತ್ತು ಅಧಿಕಾರಕ್ಕೆ ತರುವಲ್ಲಿಯೂ ಎಸ್.ಎಂ. ಕೃಷ್ಣ ಅವರ ಪಾತ್ರ ಮಹತ್ತರವಾದುದಾಗಿದೆ.

ಇನ್ನು ಸೋಮನಹಳ್ಳಿ ಮಲ್ಲನಗೌಡ ಕೃಷ್ಣ ಈ ಹೆಸರು ಕರ್ನಾಟಕ ರಾಜಕೀಯ ಮಾತ್ರವಲ್ಲ, ಭಾರತದ ರಾಜಕಾರಣದಲ್ಲಿಯೇ ಸುವರ್ಣರದಲ್ಲಿ ಲಿಖಿತವಾದ ನಾಮಭಯವಾಗಿದೆ. ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ತಮ್ಮದೇ ಆದ ಛಾಪು ಮೂಡಿಸಿದ ಎಸ್.ಎಂ. ಕೃಷ್ಣ ಇನ್ನಿಲ್ಲ ಎಂಬುದು ದೇಶದ ರಾದಕಾರಣಕ್ಕೆ ತುಂಬಲಾರದ ನಷ್ಟವೇ ಆಗಿದೆ.

ಬೆಂಗಳೂರನ್ನು ವಿಶ್ವ ಭೂಪಟದಲ್ಲಿ ಗುರ್ತಿಸುವಂತೆ ಮಾಡಿದ ಖ್ಯಾತಿ ಇದೇ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ. ಬೆಂಗಳೂರಿಗೆ ಮೆಟ್ರೋ ತಂದವರು ಎಸ್.ಎಂ. ಕೃಷ್ಣ, ವಿಕಾಸ ಸೌಧ ನಿರ್ಮಾಣ ಮಾಡಿದವರು ಎಸ್.ಎಂ. ಕೃಷ್ಣ, 13 ಸಾವಿರ ಕೋಟಿ ಇದ್ದ ಕರ್ನಾಟಕದ ಬಜೆಟ್‌ನ್ನು 34ಸಾವಿರ ಕೋಟಿಗೆ ಏರಿಸಿದವರೂ ಎಸ್.ಎಂ. ಕೃಷ್ಣ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಬಾಗೇಪಲ್ಲಿ ಸಮೀಪದ ಪರಗೋಡು ಬಳಿ ಚಿತ್ರಾವತಿ ಬ್ಯಾರೇಜ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾದಾಗ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಪರಗೋಡು ರಿಜರ್ವಾಯರ್ ನಿರ್ಮಾಣ ವಿರೋಧಿಸಿ ಆಂಧ್ರದ ಸಚಿವರು ಪ್ರತಿಭಟನೆಗೆ ಮುಂದಾದ ವೇಳೆ ಸಮರ್ಥವಾಗಿ ನಿಯಿಸಿದ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚಿತ್ರಾವತಿ ಬಪ್ಯಾರೇಜ್ ನಿರ್ಮಾಣ ಮಾಡಿ, ಬಾಗೇಪಲ್ಲಿ ಪಟ್ಟಣಕ್ಕೆ ಇಂದು ಕುಡಿಯುವ ನೀರೊದಗಿಸಲು ಚಿತ್ರಾವತಿ ಬಪ್ಯಾರೇಜ್ ಸಹಕಾರಿಯಾಗಲು ಎಸ್.ಎಂ. ಕೃಷ್ಣ ಅವರೇ ಕಾರಣರಾಗಿದ್ದಾರೆ. 92 ವರ್ಷದ ಹಣ್ಣು ರಾಜಕಾರಣಿ ಎಸ್.ಎಂ. ಕೃಷ್ಣ ಅವರ ನಿಧನ ಇಡೀ ರಾಜ್ಯವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಪಸರಿಸುವಂತೆ ಮಾಡಿದ ಎಸ್.ಎಂ. ಕೃಷ್ಣ ಅವರು ಕರ್ನಾಟಕದ ರಾಜಕಾರಣದಲ್ಲಿ ಎಂದಿಗೂ ಮರೆಯಲಾರದ ಮಾಣಿಕ್ಯವಾಗಿದ್ದು, ಅವರ ನಿಧನ ಇಡೀ ಕರ್ನಾಟಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ ಎಂದರೆ ತಪ್ಪಾಗಲಾರದು. ಅವರ ಆತ್ಮಕ್ಕೆ ಶಾಸತಿ ಸಿಗಲಿ ಮತ್ತು ಅವರ ಅಗಲಿಕೆಯ ದುಃಖ ಧರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದೇವರು ಕರುಣಿಸಲಿ ಎಂದು ಸಿಟಿಇವಿ ನ್ಯೂಸ್ ಪ್ರಾರ್ಥಿಸುತ್ತದೆ.

 

 

 

About The Author

Leave a Reply

Your email address will not be published. Required fields are marked *