ಮಕ್ಕಳು ಆಡುವಾಗ ಅಪಾಯ ಎದುರಾದರೆ ಹೊಣೆ ಯಾರು?
1 min readಶಾಲಾ ಕಾಂಪೌ0ಡ್‌ನಲ್ಲಿಯೇ ಕಾಯುತ್ತಿದೆ ಅಪಾಯ
ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ ಅಧಿಕಾರಿಗಳು
ಮಕ್ಕಳು ಆಡುವಾಗ ಅಪಾಯ ಎದುರಾದರೆ ಹೊಣೆ ಯಾರು?
ನಿರ್ಲಕ್ಷ ಅಧಿಕಾರಿಗಳ ವಿರುದ್ಧ ಶಾಲಾ ಶಿಕ್ಷಕರಿಂದ ಆಕ್ರೋಶ
ಅದು ಬಡವರ ಮಕ್ಕಳೇ ವ್ಯಾಸಂಗ ಮಾಡೋ ಸರ್ಕಾರಿ ಶಾಲೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯೋ ಪರಿಸ್ಥಿತಿ ಇರೋ ಈ ಸಂದರ್ಭದಲ್ಲಿ ಅಲ್ಲಿ ಟ್ರಾನ್ಸ್ಫಾರ್ಮರ್ ಕಾಂಪೌ0ಡ್‌ಗೆ ಹೊಂದಿಕೊ0ಡೇ ಇದೆ. ಪರಿಸ್ಥಿತಿ ಹೀಗಿದ್ದರೂ ಅದನ್ನು ಬದಲಿಸುವ ಕನಿಷ್ಠ ಪ್ರಯತ್ನವನ್ನು ಸಂಬ0ಧಿಸಿದ ಅಧಿಕಾರಿಗಳು ಮಾಡದಿರೋದು ಶಾಲಾ ಶಿಕ್ಷಕರ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗಾದರೆ ಯಾವುದು ಆ ಶಾಲೆ, ಏನು ಅಲ್ಲಿನ ಸಮಸ್ಯೆ ನೋಡೋಣ ಬನ್ನಿ.
ವೀಕ್ಷಕರೇ, ನೀವು ನೋಡುತ್ತಿದ್ದೀರಲ್ಲ, ಇದು ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಸರ್ಕಾರಿ ಶಾಲೆ. ಇದೇ ಶಾಲೆಯ ಕಾಂಪೌ0ಡ್‌ಗೆ ಹೊಂದಿಕೊ0ಡೇ ಇದೆ ಟ್ರಾನ್ರ್ಮರ್. ಇಲ್ಲಿರೋ ಟ್ರಾನ್ಸ್ಫಾರ್ಮರ್ ಮೊದಲಿಂದ ಇರೋದಲ್ಲ. ಬದಲಿಗೆ ಇತ್ತೀಚಿಗೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದವರು ರಾಷ್ಟಿಯ ಹೆದ್ದಾರಿ 234ನ್ನು ಅಭಿವೃದ್ಧಿ ಪಡಿಸಲು ಕಾಮಗಾರಿ ಆರಂಭಿಸಿದರಲ್ಲ, ಆಗ ಎಲ್ಲೋ ಇದ್ದ ಟ್ರಾನ್ಸ್ಫಾರ್ಮರ್ ತಂದು ಇಲ್ಲಿ ಹಾಕಿದ್ದಾರೆ. ಇಲ್ಲಿ ಮಕ್ಕಳು ಆಡುತ್ತಿರುತ್ತಾರೆ, ಮಕ್ಕಳಿಗೆ ಇದು ಅಪಾಯ ಹಾಗಾಗಿ ಇಲ್ಲಿ ಟ್ರಾನ್ಸ್ಫಾರ್ಮರ್ ಬೇಡ ಎಂದು ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಎಷ್ಟೇ ವಿರೋಧ ಮಾಡಿದರೂ ಕ್ಯಾರೇ ಎನ್ನದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿಯೇ ಟ್ರಾನ್ಸಾಫಾರ್ಮರ್ ಅಳವಡಿಸಿದ್ದು, ಇದು ಮಕ್ಕಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಪ್ರತಿನಿತ್ಯ ಶಾಲಾ ಅವಧಿಯಲ್ಲಿಯೇ ಮಕ್ಕಳಿಗೆ ದೈಹಿಕ ಶಿಕ್ಷಣ ತರಗತಿಗಳು, ಆಟಗಳು ನಡೆಸುವುದು ಸಾಮಾನ್ಯ. ಹೀಗೆ ಆಟ ಆಡಲು ಹೊರಗೆ ಬರುವ ಮಕ್ಕಳನ್ನು ಟ್ರಾನ್ಸ್ಫಾರ್ಮರ್ ಬಳಿ ಸುಳಿಯದಂತೆ ತಡೆಯುವುದೇ ಶಾಲಾ ಶಿಕ್ಷಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಿಸಿದೆ. ಹಾಗಾಗಿಯೇ ಹಲವು ಬಾರಿ ಈ ಟ್ರಾನ್ಸ್ಫಾರ್ಮರ್ ಬದಲಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಇತ್ತ ಗಮನವೇ ಹರಿಸಿಲ್ಲವಂತೆ. ಹಾಗಂತೆ ಶಾಲೆಯ ಮುಖ್ಯಶಿಕ್ಷಕಿಯವರೇ ಹೇಳಿದ್ದಾರೆ ಕೇಳಿ.
ಕೇಳಿದ್ರಲ್ಲ, ತಿಪ್ಪೇನಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಗಾಯಿತ್ರಿ ಅವರ ಮಾತುಗಳನ್ನ. ಅಲ್ಲಿ ಟ್ರಾನ್ರ್ಮರ್ ಇರೋದರಿಂದ ಇಲ್ಲಿ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಆತಂಕ ಕಾಡುತ್ತಿದೆ. ಅದನ್ನು ಶಾಲಾ ಸಮೀಪದಿಂದ ತೆರುವುಗೊಳಿಸಲು ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ಗಮನವೇ ಹರಿಸಿಲ್ಲವಂತೆ. ಈಗಲಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಿ, ಟ್ರಾನ್ಸ್ಫಾರ್ಮರ್ ಭೀತಿಯನ್ನು ದೂರ ಮಾಡುವಂತೆ ಅವರು ಮನವಿ ಮಡಿದ್ದಾರೆ.
ಇನ್ನು ಸರ್ಕಾರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಹೆದ್ದಾರಿ ಪ್ರಾಧಿಕಾರದವರು ಶಾಲಾ ಮಕ್ಕಳಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಮನವಿ ಮಾಡಿದರೂ ಗಮನ ಹರಿಸಿಲ್ಲ. ಮಕ್ಕಳು ಆಟವಾಡುವಾಗ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿರುವ ವೆಂಕಟೇಶ್, ಗುತ್ತಿಗೆದಾರನಿಗೆ ಎಷ್ಟು ಬಾರಿ ಹೇಳಿದರೂ ಗಮನವೇ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ ಇದೀಗ ಬಯಲಾಗುತ್ತಿದ್ದು, ಇಲ್ಲಿನ ಶಾಲೆಯ ಸಮಸ್ಯೆಗೆ ಕೂಡಲೇ ಪರಿಹಾರ ನೀಡದಿದ್ದರೆ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆಯನ್ನು ತಿಪ್ಪೇನಹಳ್ಳಿ ಗ್ರಾಮಸ್ಥರು ನೀಡಿದ್ದಾರೆ. ಅಲ್ಲದೆ ಶಾಲಾ ಮಕ್ಕಳಿಗೆ ಅಥವಾ ಇತರರಿಗೆ ಇಲ್ಲಿ ಯಾವುದೇ ರೀತಿಯ ಅಪಾಯ ಎದುರಾದರೆ ಅದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.