ನಂಜನಗೂಡಿನಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ
1 min readನಂಜನಗೂಡಿನಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ
ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಸಿಎಂ ತವರು ಜಿಲ್ಲೆಯ ಗೀಕಹಳ್ಳಿ ಗ್ರಾಮದಲ್ಲಿ ಕೋಮು ಸಂಘರ್ಷ
ಮುಖ್ಯಮ0ತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಕೋಮು ಸಂಘರ್ಷ ಭಗಿಲೆದ್ದಿದೆ. ತಡರಾತ್ರಿ ನಡೆದಿರುವ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನಂಜನಗೂಡು ತಾಲೂಕಿನ ಗೀಕಳ್ಳಿಯಲ್ಲಿ ಕೋಮ ಸಂಘರ್ಷ ನಡೆದಿದೆ.
ಅನ್ಯ ಕೋಮಿನ ಯುವತಿಯನ್ನು ವಿವಾಹವಾದ ಹಳೆಯ ದ್ವೇಷಕ್ಕೆ ಸಂಬ0ಧಿಸಿ ನಂಜನಗೂಡು ತಾಲೂಕಿನ ಗೀಕಹಳ್ಳಿಯಲ್ಲಿ ಕೋಮು ಸಂಘರ್ಷ ಭುಗಿಲೆದ್ದಿದೆ. ಗೀಕಳ್ಳಿ ಗ್ರಾಮದ ಆಕಾಶ್ ಎಂಬಾತ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹತ್ತಾರು ಜನರಿದ್ದ ಅನ್ಯ ಕೋಮಿನ ಗುಂಪು ಏಕಾ ಏಕಿ ಹಲ್ಲೆ ಮಾಡಿದೆ ಎನ್ನಲಾಗಿದೆ. ಯುವಕನ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕಂಡು ಬಿಡಿಸಲು ತೆರಳಿದ ಇಬ್ಬರು ಯುವಕರ ಮೇಲೆಯೂ ಮನ ಬಂದ0ತೆ ಅನ್ಯ ಕೋಮಿನ ಯುವಕರ ಗುಂಪು ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ.
ಹಲ್ಲೆಗೊಳಗಾಗಿ, ಗಾಯಗೊಂಡು ನಂಜನಗೂಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಯುವಕರು ಗೀಕಳ್ಳಿ ಗ್ರಾಮದ ಆಕಾಶ್, ನಿತಿನ್ ಮತ್ತು ಸಂತೋಷ್ ಎಂದು ತಿಳಿದುಬಂದಿದೆ. ಘಟನೆ ವಿಚಾರ ತಿಳಿದು ನಂಜನಗೂಡಿನ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಮಂಜುಶAಕರಪುರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲಾ ಮೈಸೂರಿನ ನಂಜನಗೂಡು ತಾಲೂಕಿನ ಗೀಕಳ್ಳಿಯಲ್ಲಿ ನಡೆದಿರುವ ಎರಡು ಕೋಮುಗಳ ನಡುವಿನ ಸಂಘರ್ಷವನ್ನು ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.
ಹಿಂದುಳಿದವರ ಏಳಿಗೆಗಾಗಿ ಶ್ರಮಿಸುತ್ತೇನೆ, ಅವರ ಬದುಕನ್ನು ಹಸನು ಮಾಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಈ ರೀತಿ ಸಂಘರ್ಷಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಮಂಜುಶ0ಕರಪುರ, ಕಾರ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ , ಬೊಕ್ಕಹಳ್ಳಿ ಮಹದೇವಸ್ವಾಮಿ , ಸರಗೂರು ಮರಿಸ್ವಾಮಿ ಮುಂತಾದವರು ಗಾಯಗೊಂಡ ಯುವಕರಿಗೆ ಸಾಂತ್ವನ ಹೇಳಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.