ಬಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ
1 min readಬಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕಾಂಗ್ರೆಸ್ ಬಾಂಗ್ರಾ ಕೃತ್ಯ ಖಂಡಿಸದೆ ಹಿಂತದುಗಕಳಿಗೆ ಮೋಸ ಮಾಡುತ್ತಿದೆ
ಬಾಂಗ್ಲದೇಶದ ಕೃತ್ಯ ನಿಜಕ್ಕೂ ನಾಗರೀಕ ಪ್ರಪಂಚ ತಲೆ ತಗ್ಗಿಸುವಂತೆ ಅಗಿದೆ, ಭಾರತದಿಂದ ಸಾಕಷ್ಟು ಸಾರಿ ಅರ್ಥಿಕ ಸಹಾಯ ಪಡೆದು ಇದೀಗ ಹಿಂದುಗಳ ಮೇಲೆ ದೌರ್ಜನ್ಯ, ದೇವಾಲಯಗಳ ಧ್ವಂಸ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಚಂದ್ರಶೇಖರ್ ಆರೋಪಿಸಿದರು.
ಗೌರಿಬಿದನೂರು ನಗರದ ಎಂ,ಜಿ ವೃತ್ತದಲ್ಲಿ ತಾಲ್ಲೂಕು ಬಿಜೆಪಿ, ಹಿಂದೂ ಜಾಗರಣ ವೇದಿಕೆ, ಬಜರಂಗ ದಳ ಸಹಯೋಗದಲ್ಲಿ ಬಂಗ್ಲಾದೇಶದ ಕೃತ್ಯ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಚಂದ್ರಶೇಖರ್, ಭಾರತ ಇದೀಗ ವಿಶ್ವಗುರು ಅಗಲು ಹೊರಟಿದೆ, ಹಿಂದು ಧರ್ಮ ಸನಾತಧರ್ಮವನ್ನು ಇಡೀ ವಿಶ್ವ ಮೆಚ್ಚಿದೆ. ನಮ್ಮ ನಡೆ ನುಡಿ ಸಂಪ್ರದಾಯಗಳ ಆಚರಣೆ ನಿಜಕ್ಕೂ ಎಲ್ಲ ದೇಶಗಳು ಕೊಂಡಾಡಿದೆ, ಅದರೆ ಪಕ್ಕದ ಬಂಗ್ಲಾದೇಶ ನಮ್ಮ ಹಿಂದುಗಳನ್ನು ಹೀನವಾಗಿ ನೋಡುವುದು ಅನ್ನ ನೀಡಿದ ಇಸ್ಕಾನ್ ದೇವಾಲಯಗಳನ್ನು ದ್ವಂಸ ಮಾಡುವುದು ನಮ್ಮ ದೇಶದ ವಸ್ತಗಳನ್ನು ಸುಡುವುದು ಈ ದೇಶದ ಹಿಂದೂಗಳು ಎಂದಿಗೂ ಕ್ಷೇಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶದ ಕಾಂಗ್ರೆಸ್ ಪ್ರಧಾನಿ ಮೋದಿ ಅವರ ಏಳಿಗೆ ಸಹಿಸದೆ,ಅವರು ದಲಿತ ವಿರೋಧಿ, ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಲೋಕಸಭೇ ಚುನಾವಣೆಯಲ್ಲಿ ಅಪಪ್ರಚಾರ ನಡೆಸಿದರು. ಅದರೆ ಹರಿಯಾಣದಲ್ಲಿ ಅದಕ್ಕೆ ತಕ್ಕ ಉತ್ತರ ಜನ ನೀಡಿ ಬಿಜೆಪಿ ದಲಿತ ಅದಿವಾಸಿಗಳ ಏಳಿಗೆ ಪಕ್ಷ ಎಂದು ಸಾಭಿತು ಪಡಿಸಿದೆ, ಇಡೀ ದೇಶವೇ ಬಂಗ್ಲಾ ಕೃತ್ಯಕ್ಕೆ ಧ್ವನಿ ಎತ್ತಿ ಪ್ರತಿಭೆಟನೆ ಮಾಡುತ್ತಿದೆ,ಆದರೆ ಸಿದ್ದರಾಮಯ್ಯ ಸರ್ಕಾರ ಕಿಂಚತ್ತೂ ವಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ದೇಶ ದ್ರೋಹಿಗಳ ಪ್ರಕರಣಗಳನ್ನ ಮುಚ್ಚಿ ಹಾಕಿ ಕುಮ್ಮಕ್ಕು ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಮನವಿಯನ್ನು ತಹಸೀಲ್ದಾರ್ ಮಹೇಶ್ ಪತ್ರಿ ಅವರಿಗೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆ ಮುಖಂಡರಾದ ಎನ್,ಎಂ, ರವಿನಾರಾಯಣರೆಡ್ಡಿ, ಡಾ,ಶಶಿಧರ್, ತಾಲ್ಲೂಕು ಅಧ್ಯಕ್ಷ ರಮೇಶ್ ರಾವ್, ನಗರಸಭೆ ಸದಸ್ಯ ಡಿಎನ್,ವೆಂಕಟರೆಡ್ಡಿ, ನರಸಿಂಹಮೂರ್ತಿ, ಎಚ್,ಆರ್, ಗೊವೀಂದರಾಜ್, ವಕೀಲ ರಂಗನಾಥ್, ಗಂಗಯ್ಯ ಇದ್ದರು.