ಗ್ರಾಪಂ ಪಿಡಿಒಗಳ ಕ್ರಮ ಖಂಡಿಸಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ
1 min readಗ್ರಾಪಂ ಪಿಡಿಒಗಳ ಕ್ರಮ ಖಂಡಿಸಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ
ಬಿಜೆಪಿ, ಜೆಡಿಎಸ್ ಮೇಲಿನ ದೌರ್ಜನ್ಯದ ವಿರುದ್ಧ ಖಂಡನೆ
ನೆಲಮ0ಗಲ ತಾಲೂಕಿನ 21 ಗ್ರಾಮ ಪಂಚಾಯ್ತಿಗಳ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌದರಿ ಆರೋಪಿಸಿದ್ದಾರೆ.
ನೆಲಮಂಗಲ ತಾಲೂಕಿನಲ್ ಪಿಡಿಒಗಳ ವಿರುದ್ಧ ನೆಲಮಂಗಲ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕೂಟ ಪ್ರತಿಭಟನೆ ನಡೆಸಿದರು. ನೆಲಮಂಗಲ ನಗರದ ಪ್ರವಾಸಿ ಮಂದಿರದಿ0ದ ಹೊರಟ ಪ್ರತಿಭಟನಾ ರ‍್ಯಾಲಿಯನ್ನು ನೆಲಮಂಗಲ ಟೌನ್ ಇನ್ಸ್ಪೆಕ್ಟರ್ ಶಶಿಧರ್ ನೇತೃತ್ರದಲ್ಲಿ ತಡೆಯಲು ಪ್ರಯತ್ನಿಸಿದರು, ಆದ್ರೆ ಪ್ರತಿಭಟನಾಕಾರರು ಬ್ಯಾರೀಕೇಡ್ ತಳ್ಳಿ ಮುನ್ನುಗ್ಗಿದರು. ಬಳಿಕ ತಾಲೂಕು ಪಂಚಾಯ್ತಿ ಕಚೇರಿ ಒಳಗೆ ಹೋಗದಂತೆ ಕಚೇರಿಗೆ ಬ್ಯಾರಿಕೆಡ್ ಅಳವಡಿಸಿದರು. ಆದರೂ ಬಿಡದ ಪ್ರತಿಭಟನಾಕಾರರು ಗೇಟ್ ತೆಗೆದು ಒಳ ನುಗ್ಗಿ ಪಿಡಿಒ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.
ಪ್ತತಿಭಟನೆಯಲ್ಲಿ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌದರಿ ಮಾತನಾಡಿ, ನನಗೇನು ನಾಯಿ ಕಡಿದು ಹುಚ್ಚು ಹಿಡಿದಿರಲಿಲ್ಲ. ಪ್ರತಿಭಟನೆ ಮಾಡೋಕೆ, ತಾಲೂಕಿನ 21 ಗ್ರಾಮ ಪಂಚಾಯ್ತಿಯಲ್ಲಿ ಜೆಡಿಎಸ್ ಬಿಜೆಪಿ ಬೆಂಬಲಿತ ಸದಸ್ಯರ ಮೇಲಿನ ದೌರ್ಜನ್ಯ ಖಂಡಿಸಬೇಕಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ನೀರಿನ ಸಂಪರ್ಕ ಕೊಡಿ ಅಂದ್ರೆ ಅಧಿಕಾರಿಗಳು ಶಾಸಕರನ್ನು ಕೇಳಿ ಅಂತಾ ಹೇಳ್ತಾರಂತೆ, 61 ಎಕರೆ ಜಮೀನು ಖಾತೆ ಮಾಡೋಕೆ ಅಧಿಕಾರಿಗಳು 1 ಕೋಟಿ ಲಂಚ ಪಡೆದಿದ್ದಾರೆ ಎನ್ನಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ತ್ಯಾಮಗೊಂಡ್ಲು ಪಿಡಿಒ ವಿರುದ್ಧ ಎಫ್‌ಐಆರ್ ದಾಖಲಾಗಿದೆ, ಅಧ್ಯಕ್ಷರೇ ದೂರು ಕೊಟ್ಟಿದ್ದಾರೆ. ಅಂತಹವರಿಗೆ ಮೂರು ಪಂಚಾಯ್ತಿ ಚಾರ್ಜ್ ಕೊಟ್ಟಿದ್ದಾರೆ. ತಾಲೂಕಿನಲ್ಲಿ ಪ್ರತಿಭಟನೆಯನ್ನು ಪ್ರವಾಸಿ ಮಂದಿರದಲ್ಲಿ ತಡೆಯುವ ಹುನ್ನಾರ ಮಾಡಲಾಗಿತ್ತು, ಆದರೆ ನಾವು ಯಾವುದಕ್ಕು ಜಗ್ಗುವುದಿಲ್ಲ ಕೂಡಲೇ ಸಮಸ್ಯೆ ಬಗೆಹರಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್ ಮಲ್ಲಯ್ಯ ಮಾತನಾಡಿ, ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ನಡೆದ ನಡಾವಳಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು, ನಮ್ಮ ಪಂಚಾಯ್ತಿ ಪಿಡಿಒಗೆ ಎರಡು ಪಂಚಾಯ್ತಿ, ಜನರು ತಿಂದು ಕುಡಿದ ತಟ್ಟೆ ಲೋಟ ತೊಳೆದು ನಾನು ಈ ಮಟ್ಟಕ್ಕೆ ಬಂದವನು, ನೆಲಮಂಗಲ ಕ್ಷೇತ್ರ ಸಾಮಾನ್ಯ ಕ್ಷೇತ್ರ ಆದ್ರೆ ನಾಳೆ ಚುನಾವಣೆಗೆ ನಿಂತು ಗೆಲ್ಲುತ್ತೇನೆ ಎಂದರು.
ಪ್ರತಿಭಟನೆ ಬಳಿಕ ಉಪ ತಹಸಿಲ್ದಾರ್ ಭಾಗ್ಯ ವೆಂಕಟರಮಣಪ್ಪ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಈ ಕೃಷ್ಣಪ್ಪ, ಮಾಜಿ ಶಾಸಕ ಎಂ.ವಿ ನಾಗರಾಜು, ರಾಜಮ್ಮ, ಮಂಜುಳಾ ಸುರೇಶ್, ಬೃಂಗೇಶ್, ಹ್ಯಾಡಾಳ್ ಹರ್ಷ ಇದ್ದರು.