ಘರ್ಷಣೆಗೆ ಕಾರಣವಾದ ಅರಣ್ಯ ಭೂಮಿ ಒತ್ತುವರಿ ತೆರುವು ವಿವಾದ
1 min readಘರ್ಷಣೆಗೆ ಕಾರಣವಾದ ಅರಣ್ಯ ಭೂಮಿ ಒತ್ತುವರಿ ತೆರುವು ವಿವಾದ
ರಮೇಶ್ ಕುಮಾರ್ ಬೆಂಬಲಿಗರು, ರೈತಸಂಘದ ನಡುವೆ ಜಟಾಪಟಿ
ಶ್ರೀನಿವಾಸಪುರ ತಾಲೂಕು ಕಚೇರಿ ಮುಂದೆ ಘರ್ಷಣೆ
ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಪ್ರಧಾವಿ ನಾಯಕ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಇಂದು ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ರೈತಸಂಘದ ಕಾರ್ಯಕರ್ತರ ಮೇಲೆ ರಮೇಶ್ ಕುಮಾರ್ ಬೆಂಬಲಿಗರು ಹಲ್ಲೆ ಮಾಡಿ ಹೈಡ್ರಾಮ ಸೃಷ್ಟಿಸಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕು ಕಚೇರಿ ಬಳಿ ಜಮಾಯಿಸಿರುವ ಜನರು, ತಾಲ್ಲೂಕು ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿದ್ದ ರೈತ ಸಂಘದ ಕಾರ್ಯಕರ್ತರು ಹಾಗೂ ರಮೇಶ್ ಕುಮಾರ್ ಬೆಂಬಲಿಗರ ನಡುವೆ ನಡೆಯುತ್ತಿರುವ ಮಾತಿನ ಚಕಮಕಿ, ತಳ್ಳಾಟ ನೂಕಾಟ, ನೂರಾರು ಜನರ ಮಧ್ಯ ಸಿಲುಕಿರುವ ರೈತಸಂಘದ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಹಲ್ಲೆ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲಾ ಶ್ರೀನಿವಾಸಪುರ ತಾಲ್ಲೂಕು ಕಚೇರಿ ಎದುರು.
ಸಾವಿರಾರು ಎಕರೆ ರೈತರ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ತೆರವು ಮಾಡಿದೆ. ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಜಿಂಕಲಗು0ಟ ಅರಣ್ಯ ಪ್ರದೇಶದ ಹೊಸಹುಡ್ಯ ಸರ್ವೆ ನಂ-1 ಮತ್ತು 2 ರಲ್ಲಿ ಸುಮಾರು 122 ಎಕರೆ ಅರಣ್ಯ ಭೂಮಿಯನ್ನು ಏಳು ಜನ ಒತ್ತುವರಿ ಮಾಡಿದ್ದು, ಆ ಪೈಕಿ 64 ಎಕರೆ ಭೂಮಿಯನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒತ್ತುವರಿ ಮಾಡಿದ್ದಾರೆ ಅನ್ನೋ ಆರೋಪ ಇದೆ. ಈ ಸಂಬ0ಧ ಕೇಂದ್ರ ಅರಣ್ಯ ಇಲಾಖೆ ಯಿಂದಲೇ ಒಂದು ತಿಂಗಳ ಒಳಗಾಗಿ ಜಂಟಿ ಸರ್ವೆ ಮಾಡಿ ಒತ್ತುವರಿ ಆಗಿದ್ದಲ್ಲಿ ತೆರವು ಮಾಡುವಂತೆ ಸೂಚನೆ ನೀಡಲಾಗಿದೆ.
ಆದರೆ ರಮೇಶ್ ಕುಮಾರ್ ಪ್ರಭಾವ ಬಳಸಿ ನವೆಂಬರ್ 6 ರಂದು ನಿಗದಿ ಮಾಡಿದ್ದ ಜಂಟಿ ಸರ್ವೆ ಮುಂದೂಡುವ0ತೆ ಮಾಡಿದ್ದಾರೆ. ಹಾಗಾಗಿ ಕೂಡಲೇ ರಮೇಶ್ ಕುಮಾರ್ ಅವರಿಂದ ಒತ್ತುವರಿ ಆಗಿದೆ ಎನ್ನಲಾಗಿರುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ಕೆಲ ದಿನಗಳಿಂದ ಕೋಲಾರ ರೈತ ಸಂಘದ ಕಾರ್ಯಕರ್ತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಶ್ರೀನಿವಾಸಪುರ ತಾಲ್ಲೂಕು ಕಚೇರಿ ಎದುರಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಲು ರೈತರು ಮುಂದಾಗಿದ್ದರು. ಈವೇಳೆ ಪ್ರತಿಭಟನಾನಿರತರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಪೋಟೋ ಹಿಡಿದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಈವೇಳೆ ಅಲ್ಲಿದ್ದ ನೂರಾರು ರಮೇಶ್ ಕುಮಾರ್ ಬೆಂಬಲಿಗರು ಪ್ರತಿಭಟನಾ ನಿರತರನ್ನು ಪ್ರಶ್ನಿಸಿ ರಮೇಶ್ ಕುಮಾರ್ ಪೋಟೋ ಯಾಕೆ ಹಿಡಿದಿದ್ದೀರಿ, ಅವರೊಬ್ಬರೇ ಒತ್ತುವರಿ ಮಾಡಿದ್ದಾರಾ, ಒತ್ತುವರಿ ಮಾಡಿರುವವರ ಎಲ್ಲರ ಪೋಟೋಗಳನ್ನು ಹಾಕಿಕೊಳ್ಳಿ ಎಂದು ಮಾತಿಗೆ ಮಾತು ಶುರುವಾಗಿ, ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಪೊಲೀಸರ ಎದುರೇ ತಳ್ಳಾಟ ನೂಕಾಟ ನಡೆಯಿತು, ಅಲ್ಲದೆ ಅರೆಬೆತ್ತಲೆಯಲ್ಲಿದ್ದ ರೈತ ಸಂಘದ ಕಾರ್ಯಕರ್ತರ ಮೇಲೆ ಜಮಾಯಿಸಿದ್ದ ರಮೇಶ್ ಕುಮಾರ್ ಬೆಂಬಲಿಗರು ಹಲ್ಲೆ ಮಾಡಿದರು. ಈವೇಳೆ ಪೊಲೀಸರು ಪ್ರತಿಭಟನಾನಿರತರನ್ನು ಅಲ್ಲಿಂದ ಹೊರಗೆ ಕರೆತಂದು ಕಳಿಸಿದ್ದಾರೆ. ಹಲ್ಲೆಗೊಳಗಾದ ಪ್ರತಿಭಟನಾಕಾರರು ಕೋಲಾರ ಎಸ್ಪಿ ಕಚೇರಿಗೆ ಭೇಟಿ ನೀಡಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ರಮೇಶ್ ಕುಮಾರ್ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದವರನ್ನು ಸುತ್ತುವರೆದು ಹಲ್ಲೆ ಮಾಡಿದ್ದಾರೆ, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನಂತರ ರಮೇಶ್ ಕುಮಾರ್ ಬೆಂಬಲಿಗರು ರೈತ ಸಂಘದ ಮುಖಂಡರ ವಿರುದ್ದ ಘೋಷಣೆ ಕೂಗಿದ್ದಾರೆ, ಅಲ್ಲದೆ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ, ಒಂದುವೇಳೆ ಒತ್ತುವರಿಯಾಗಿದ್ದರೆ ಅದನ್ನು ತೆರವು ಮಾಡಿ ಎಂದು ರಮೇಶ್ ಕುಮಾರ್ ಅವರೇ ಬರೆದುಕೊಟ್ಟಿದ್ದಾರೆ. ಹೀಗಿದ್ದರು ಅವರು ರಮೇಶ್ ಕುಮಾರ್ ಅವರ ವಿರೋಧಿ ಬಣದ ಕೆಲವರ ಕುಮ್ಮಕ್ಕಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ರಮೇಶ್ ಕುಮಾರ್ ಬೆಂಬಲಿಗರು ಆರೋಪಿಸಿದ್ದಾರೆ.
ಅಲ್ಲದೆ ಪ್ರತಿಭಟನೆ ಮಾಡಲು ಅನುಮತಿ ಪಡೆದಿಲ್ಲ, ನಾವು ಕಚೇರಿಯಲ್ಲಿ ಇಂದು ಬಗರ್ ಹುಕ್ಕುಂ ಸಂಬ0ದ ಸಭೆ ಕರೆದಿದ್ದೇವು. ಈವೇಳೆ ಕೆಲಸಕ್ಕೂ ತೊಂದರೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ರಮೇಶ್ ಕುಮಾರ್ ಬೆಂಬಲಿಗ ಬಾಬು ಎಂಬಾತ ರಮೇಶ್ ಕುಮಾರ್ ಪೋಟೋ ಹಾಕಿಕೊಂಡು ಪ್ರತಿಭಟನೆ ಮಾಡದಂತೆ ಕೇಳಿದಾಗ ರೈತ ಸಂಘದ ಮುಖಂಡರು ಅವಾಚ್ಯಶಬ್ದಗಳಿಂದ ನಿಂಧಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಮೂರು ದಶಕಗಳಿಂದ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕರಣ ಸಾಕಷ್ಟು ವಿವಾದದ ಕೇಂದ್ರವಾಗಿದ್ದು, ಕೂಡಲೇ ಅರಣ್ಯ ಇಲಾಖೆ ಹಾಗೂ ಸರ್ಕಾರ ಒತ್ತುವರಿ ಆಗಿದ್ಯಾ ಇಲ್ಲವಾ ಅನ್ನೋದನ್ನ ಪರಿಶೀಲಿಸಿ ತೆರವು ಮಾಡಬೇಕಿದೆ. ಇಲ್ಲವಾದಲ್ಲಿ ಇದು ಜಿ¯್ಲÉಯಲ್ಲಿ ಹಲವು ಸಂಘರ್ಷಕ್ಕೆ ಕಾರಣವಾಗೋದರಲ್ಲಿ ಅನುಮಾನವಿಲ್ಲ.