ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಉದ್ಘಾಟನೆಯಿಲ್ಲ

1 min read

ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಉದ್ಘಾಟನೆಯಿಲ್ಲ

ಅನಿಲ ಚಿತಾಗಾರಕ್ಕೆ ಮೋಕ್ಷ ನೀಡದ ಆಡಳಿತಕ್ಕೆ ಜನರ ಶಾಪ

ನಿರ್ವಹಣೆ ಮಾಡಲೂ ಮುಂದಾಗದೆ ನಗರಸಭೆ ವೈಪಲ್ಯ

ಅನಿಲ ಚಿತಾಗಾರ ಆರಂಭ ಯಾವಾಗ ಎಂಬ ಪ್ರಶ್ನೆಗೆ ಉತ್ತರವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರವಾಗಿ 16 ವರ್ಷಗಳೇ ಪೂರೈಸಿದೆ. ಆದರೆ ಜಿಲ್ಲಾಕೇಂದ್ರಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪಡೆಯುವಲ್ಲಿ ವಿಫಲವಾಗಿದ್ದು, ಸಮರ್ಪಕ ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಇನ್ನು ಸ್ಮಶಾನಗಳು ತುಂಬಿ ಶವ ಸಂಸ್ಕಾರ ಮಾಡಲೂ ಸಾಧ್ಯವಾಗದ ಸ್ಥಿತಿ ಎದುರಾಗಿದ್ದು, ಪರ್ಯಾಯವಾಗಿ ಶವ ಸಂಸ್ಕಾರಕ್ಕೆ ಮಾರ್ಗ ಹುಡುಕುವಲ್ಲಿ ಜಿಲ್ಲಾಡಳಿತ, ನಗರಸಭೆ ವಿಫಲವಾಗಿವೆ.

ಹೌದು ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರವಾಗಿ ಒಂದೂವರೆ ದಶಕ ಪೂರ್ಣಗೊಂಡಿದೆ. ಆದರೆ ಮೃತಪಟ್ಟವರನ್ನು ನೆಮ್ಮದಿಯಾಗಿ ಮಣ್ಣು ಮಾಡಲು ಒಂದು ಸ್ಮಶಾನವೂ ಸರಿಯಾಗಿಲ್ಲದ ಸ್ಥತಿಇ ಈ ಜಿಲ್ಲಾ ಕೇಂದ್ರದಲ್ಲಿದೆ. ಇನ್ನು ಅನಿಲ ಚಿತಾಗಾರವನ್ನು ಈ ಹಿಂದೆ ಶಾಸಕರಾಗಿದ್ದ ಡಾ.ಕೆ. ಸುಧಾಕರ್ ಅವರ ಅವಧಿಯಲ್ಲಿ ಮಂಜೂರು ಮಾಡಿಸಿ, ನಿರ್ಮಾಣ ಪೂರ್ಣಗೊಂಡು ಎರಡು ವರ್ಷಗಳೇ ಕಳೆದರೂ ಅದನ್ನು ಚಾಲನೆ ಮಾಡಲು ಮಾತ್ರ ನಮ್ಮ ಆಡಳಿತ ಮುಂದಾಗದಿರುವುದು ಆಡಳಿತಕ್ಕೆ ಹಿಡಿದ ಕನ್ನಡಿಯಾಗಕಿದೆ.

ಚಿಕ್ಕಬಳ್ಳಾಪುರ ನಗರ ಹೊರವಲಯದ ಬಿಬಿ ರಸ್ತೆಗೆ ಹೊಂದಿಕೊ0ಡ0ತೆ ಇರುವ ಸ್ಮಶಾನದಲ್ಲಿ ನಿರ್ಮಿಸಿರುವ ಅನಿಲ ಚಿತಾಗಾರ ಕಾಮಗಾರಿ 2022ರ ಡಿಸೆಂಬರ್‌ನಲ್ಲಿಯೇ ಪೂರ್ಣಗೊಂಡಿದೆ. ಆದರೆ ಇಂದಿಗೂ ಈ ಚಿತಾಗಾರ ಉದ್ಘಾಟನೆ ಕಂಡಿಲ್ಲ. ೨2 ಕೋಟಿ ವೆಚ್ಚದಲ್ಲಿ 2020ರ ಜೂನ್‌ನಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅನಿಲ ಚಿತಾಗಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಎರಡು ವರ್ಷಗಳ ನಂತರ ಕಾಮಗಾರಿ ಪೂರ್ಣವೂ ಆಗಿದ್ದು, ಅದು ಇನ್ನೂ ಆರಂಭವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಳೆದ ಡಿಸೆಂಬರ್‌ನಲ್ಲಿಯೇ ಚಿತಾಗಾರಕ್ಕೆ ಯಂತ್ರೋಪಕರಣಗಳನ್ನು ಅಳವಡಿಸಲಾಗಿತ್ತು. ಶೀಘ್ರದಲ್ಲಿಯೇ ಚಿತಾಗಾರ ಬಳಕೆಗೆ ಮುಕ್ತವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಕಾಮಗಾರಿ ಪೂರ್ಣವಾಗಿ ಇಷ್ಟು ದಿನವಾದರೂ ಚಿತಾಗಾರದ ಬಾಗಿಲು ಮಾತ್ರ ಈವರೆಗೂ ತೆರೆದಿಲ್ಲ. ನಗರದಲ್ಲಿ ಈವರೆಗೂ ವಿದ್ಯುತ್ ಚಿತಾಗಾರ ಇರಲಿಲ್ಲ. ಆಯಾ ಸಮುದಾಯಗಳವರು ಅವರವರಿಗೆ ಮೀಸಲಾದ ಸ್ಮಶಾನಗಳಲ್ಲಿ ಮೃತರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದರು. ಶವ ಸುಡಲು ಸೌದೆ ಹುಡುಕುವುದು ಇಲ್ಲವೆ ಜಾಗ ಹುಡುಕುವುದೇ ಪ್ರಮುಖ ಸವಾಲಾಗಿತ್ತು. ನಗರದ ಬಹಳಷ್ಟು ಸ್ಮಶಾನಗಳಲ್ಲಿ ಜಾಗದ ಕೊರತೆ ಎದ್ದು ಕಾಣುತ್ತಿದೆ. ಕೋವಿಡ್ ಸಂದರ್ಭದಲ್ಲಿ ಶವಗಳ ಸಂಸ್ಕಾರಕ್ಕೆ ಬಹಳಷ್ಟು ತ್ರಾಸವಾಯಿತು.

120 ಅಡಿ ಎತ್ತರದ ಚಿಮಣಿ ಸೇರಿದಂತೆ ಅಗತ್ಯ ಯಂತ್ರಗಳನ್ನು ಚಿತಾಗಾರಕ್ಕೆ ಜೋಡಿಸಲಾಗಿದೆ. ಅನಿಲ ಚಿತಾಗಾರ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿ ಅಗತ್ಯವಿದೆ. ಚಿಕ್ಕಬಳ್ಳಾಪುರ ನಗರದ ನಕ್ಕಲಕುಂಟೆ, ಮಂಚನಬಲೆ ರಸ್ತೆ, ಮೈಲಪ್ಪನಹಳ್ಳಿ ರಸ್ತೆ, ಹಳೇ ಆರ್‌ಟಿಒ ಕಚೇರಿ ಬಳಿ, ಪ್ರಶಾಂತ ನಗರದ ದರ್ಗಾಬಳಿ ಮುಸ್ಲಿಮರ ಖಬರಸ್ತಾ ನದಲ್ಲಿ ಶವಸಂಸ್ಕಾರಗಳು ನಡೆಯುತ್ತವೆ. ಮಂಚನಬಲೆಯ ಸ್ಮಶಾನ ಕಸದ ಕೂಪ ಎನ್ನುವಂತಿದೆ. ಉಳಿದ ಕಡೆಗಳಲ್ಲಿಯೂ ಹೇಳಿಕೊಳ್ಳುವ ವ್ಯವಸ್ಥೆಗಳು ಇಲ್ಲವಾಗಿದೆ.

ಬಹಳಷ್ಟು ಸ್ಮಶಾನಗಳು ಪೊದೆಗಳಿಂದ ತುಂಬಿವೆ. ಸಂಬ0ಧಿಸಿದ ಸ್ಥಳೀಯ ಆಡಳಿತ ಸ್ಮಶಾನಗಳಿಗೆ ಸೌಲಭ್ಯ ಕಲ್ಪಿಸಿಲ್ಲ ಎನ್ನುವ ದೂರು ನಾಗರಿಕರಿಂದ ನಿರಂತರವಾಗಿ ವ್ಯಕ್ತವಾಗುತ್ತಲೇ ಇದೆ. ಅನಿಲ ಚಿತಾಗಾರ ಬಳಕೆಗೆ ಮುಕ್ತವಾದರೆ ಸ್ಮಶಾನಗಳ ಮೇಲಿನ ಅವಲಂಬನೆ ಸ್ವಲ್ಪ ಮಟ್ಟಿಗೆ ತಗ್ಗಲಿದೆ. ಸಿದ್ಧವಾಗಿರುವ ಚಿತಾಗಾರದ ಉದ್ಘಾಟನೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ಸಾರ್ವಜನಿಕರ ಆಗ್ರಹ ಮುಟ್ಟಿಲ್ಲ, ಮುಟ್ಟಿದರೂ ಅದನ್ನು ಕಾರ್ಯಗತ ಮಾಡಲು ಮೀನಮೇಶ ಎಣಿಸುತ್ತಿರುವ ಹಿಂದಿನ ಕಾರಣವಾದರೂ ಏನು ಎಂಬುದಕ್ಕೆ ಅವರೇ ಉತ್ತರಿಸಿದ್ದರು

About The Author

Leave a Reply

Your email address will not be published. Required fields are marked *