ಜಾಗೃತಿ ಸಮಾವೇಶಕ್ಕೆ ಅನುಮತಿ ನಿರಾಕರಣೆ
1 min readಜಾಗೃತಿ ಸಮಾವೇಶಕ್ಕೆ ಅನುಮತಿ ನಿರಾಕರಣೆ
ಜಿಲ್ಲಾಡಳಿತ ನಡೆಗೆ ಹಿಂದು ಕಾರ್ಯಕರ್ತರ ತೀವ್ರ ಆಕ್ರೋಶ
ಏಕಾ ಏಕಿ ಕಾರ್ಯಕ್ರಮ ರದ್ದು ಮಾಡಿರುವುದಕ್ಕೆ ವಿರೋಧ
ಹಿಂದು ಫೈರ್ ಬ್ರಾಟ್‌ಗಳಿ0ದ ಬೀದರ್‌ನಲ್ಲಿ ಇಂದು ನಡೆಯಬೇಕಿದ್ದ ಹಿಂದು ಜಾಗೃತಿ ಸಮಾವೇಶಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇದರಿಂದ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ದ ಹಿಂದುಮುಖ0ಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಜಿ¯್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಅನುಮತಿ ನಿರಾಕರಣೆ ಎನ್ನುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜ್ಯದ ಮುಕುಟ ಬೀದರನಲ್ಲಿ ಹಿಂದು ರಾಷ್ಟಿಯ ಜಾಗರಣ ಸಮಿತಿಯಿಂದ ಇಂದು ಹಮ್ಮಿಕೊಂಡಿದ್ದ ಬೃಹತ್ ಹಿಂದು ಸಮಾವೇಶಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕ್ಕಿದೆ. ಸರ್ಕಾರ ಮತ್ತು ಜಿಲ್ಲಾಡಳಿತದ ನಡೆಗೆ ಹಿಂದು ಮುಖಂಡರು ಕಾರ್ಯಕ್ರಮದ ಆಯೋಜಕರು ರೊಚ್ಚಿಗೆದಿದ್ದಾರೆ. ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಬೇಕಿದ್ದ ಹಿಂದು ಫೈರ್ ಬ್ರಾ0ಡ್ ಎಂದೆ ಖ್ಯಾತಿಪಡೆದ ತೆಲಂಗಣಾದ ಹೈದ್ರಾಬಾದ್‌ನ ಮಾಧವಿ ಲತಾ, ರಾಜಸ್ಥಾನದ ಕಾಜೋಲ್ ಹಿಂದುಸ್ತಾನಿ ಹಾಗೂ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಬೀದರ್ ಜಿಲ್ಲೆ ಪ್ರವೇಶಕ್ಕೂ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ ಗಿರೀಶ್ ದಿಲೀಪ್ ಬದೋಲೆ ಆದೇಶ ಹೊರಡಿಸಿದ್ದಾರೆ,
ಈ ಹಿಂದು ಮುಖಂಡರ ಜಿಲ್ಲಾ ಪ್ರವೇಶ ಹಾಗೂ ಕಾರ್ಯಕ್ರಮದಲ್ಲಿ ಭಾಷಣ ಮಾಡುವದರಿಂದ ಜಿಲ್ಲೆಯಲ್ಲಿ ದ್ವೇಷದ ಭಾವನೆ, ಅಶಾಂತಿ, ಘರ್ಷಣೆ, ಗಲಧಗೆ ಪ್ರಚೋದನೆ ಜೋತೆಗೆ ಶಾಂತಿ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎನ್ನುತ್ತಿದ್ದಾರೆ ಎಸ್ಪಿ ಪ್ರದೀಪ್ ಗುಟ್ಟಿ.
ಜಿಲ್ಲಾಡಳಿತ ನಡೆಗೆ ಹಿಂದು ಮುಖಂಡರು ವ್ಯಾಪಕವಾಗಿ ಖಂಡಿಸುತ್ತಿದ್ದಾರೆ, ವಾರದ ಹಿಂದೆ ಕಾರ್ಯಕ್ರಮ ನಿಗಧಿಯಾಗಿದೆ ಎಲ್ಲವೂ ಸಿದ್ಥತೆ ಮಾಡಿಕೊಂಡ ಬಳಿಕ ಏಕಾ ಏಕೀ ಹೀಗೆ ನಿಷೇಧ ಹೇರುವದು ಸಮಾವೇಶ ನಡೆಯುವ ಸ್ಥಳದಲ್ಲಿ 144 ಕಲಂ ಜಾರಿ ಮಾಡುವದು ಯಾವ ನ್ಯಾಯ, ಅಧಿಕಾರಿಗಳು ಸರ್ಕಾರ ದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ, ನಾವು ಕಾನೂನ ಹೋರಾಟ ಮಾಡುವ ಸ್ಥಳದಲ್ಲಿ ಈಗಿರುವ ಹಿಂದು ಮುಖ್ಯ ಭಾಷಣಕಾರರನ್ನ ಕರೆಸುವ ಮೂಲಕ ಬೃಹತ ಸಮಾವೇಶ ಮಾಡೇ ಮಾಡುತ್ತೆವೆ ಎನ್ನುತ್ತಿದ್ದಾರೆ, ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಹಾಗೂ ಸೋಮಶೇಖರ ಪಾಟೀಲ್.
ಈ ಸರ್ಕಾರ ಹಿಂದು ವಿರೋದಿ ಸರ್ಕಾರವಾಗಿದ್ದು, ಹಿಂದು ಹೋರಾಟಗಾರರಿಗೆ ಜಿಲ್ಲಾ ಪ್ರವೇಶಕ್ಕೆ ಬ್ರೇಕ್ ಹ್ಹಾಕ್ಕಿದ್ದಾರೆ, ಪ್ರಮೋದ್ ಮುತ್ತಾಲಿಕ್, ಕಾಜೋಲ್ ಹಿಂದುಸ್ತಾನಿ, ಮಾಧವಿ ಲತಾರವರ ಭಾಷಣ ಕೆಳಬೇಕೆಂದು ಜಿಲ್ಲೆಯ ಯುವಶಕ್ತಿಗಳು ಜಿಲ್ಲೆಯ ಜನರು ಎದುರು ನೋಡುತ್ತಿರುವಾಗ ಏಕಾ ಏಕೀ ಅಧಿಕಾರಿಗಳ ಮೂಲಕ ಸರ್ಕಾರ ಇಂತಹ ಕೃತ್ಯ ಮಾಡುತ್ತಿರುವದು ಖಂಡನಿಯಾಗಿದೆ ಎಂದು ಆರೋಪ ಪ್ರಮೋದ್ ಮುತ್ತಾಲಿಕ್ ಸೇರಿದಂತೆ ಜಿಲ್ಲೆಯ ಹಿಂದು ಮುಖಂಡರು ಖಂಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಹಿಂದು ಮುಖಂಡರು ವರ್ಸಸ್ ಜಿಲ್ಲಾಡಳಿತ ವಾದ ಪ್ರತಿವಾದ ಹೋರಾಟ ಮುಂದೆ ಯಾವ ಸ್ವರೂಪ ಪಡೆದುಕೊಳುತ್ತೋ ಕಾದು ನೋಡಬೇಕಿದೆ.