ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ
1 min readದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ
ಅಂತರಾಜ್ಯ ಕಳ್ಳರ ಮೂವರ ಬಂಧನ
33 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೈಚಳಕ ತೋರಿಸಿದ್ದ ಗ್ಯಾಂಗ್
ಆ ಗ್ಯಾಂಗ್ ಸಿಕ್ಕ ಸಿಕ್ಕಕಡೆ ಮಹಿಳೆಯರನ್ನೆ ಟಾರ್ಗೆಟ್ ಮಾಡ್ತಿದ್ರು. ಒಂದು ಕಡೆ ಕಳ್ಳತನ ಮಾಡಿ ಮತ್ತೊಂದುಕಡೆ ತೆರಳುವಾಗ ಸಿಕ್ಕ ಸಿಕ್ಕ ಮಹಿಳೆಯರ ಸರಗಳ್ಳತನ ಮಾಡಿ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಿದ್ರು. ಇಂತಹ ಖತರ್ನಾಕ್ ಅಂತಾರಾಜ್ಯ ಕಳ್ಳರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಪೋಟೊದಲ್ಲಿ ಕಾಣಿಸ್ತಿರೋ ಈ ಖದೀಮರ ಹೆಸರು ಸೈಯದ್ ರಿಯಾನ್, ಶಿವಕುಮಾರ್ ಮತ್ತು ಅಪ್ಪು. ಸುಮಾರು 33 ಪ್ರಕರಣಗಳಲ್ಲಿ ಬೇಕಾಗಿದ್ದ ಖದೀಮರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸೆಪ್ಟೆಂಬರ್ 19 ರಂದು ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಬಳಿ ಬೆಳಗ್ಗೆ ಮಹಿಳೆ ವಾಕಿಂಗ್ ಮಾಡುವ ವೇಳೆ ಕತ್ತಿನಲ್ಲಿದ್ದ 70 ಗ್ರಾಂ ಸರಗಳ್ಳತನ ಮಾಡಿ ಆರೋಪಿಗಳು ಎಸ್ಕೆಪ್ ಆಗಿದ್ದರು.
ಅಲ್ಲದೆ ಮುಂದೆ ರಾಜ್ಯ ಹೆದ್ದಾರಿಯಲ್ಲಿ ಯಾರು ಸಿಕ್ತಾರೋ ಅಂತಹ ಮಹಿಳೆಯರ ಸರಗಳ್ಳತನ ಮಾಡಿ ಆಂಧ್ರಕ್ಕೆ ಎಸ್ಕೆಪ್ ಆಗಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ನಿರಂತರ ತನಿಖೆ ನಡೆಸಿ ಮೂವರು ಖತರ್ನಾಕ್ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮೂವರಲ್ಲಿ ಶಿವಕುಮಾರ್ ಎಂಬಾತ ಕಿಂಗ್‌ಪಿನ್ ಆಗಿದ್ದು, ಮಾಸ್ಟರ್ ಇನ್ ನೆಟ್ಯ ಅಡ್ಮಿನಿಸ್ಟೆಶನ್ ವ್ಯಾಸಾಂಗ ಮಾಡ್ತಿದ್ದ. ಹುಡುಗರ ಮೂಲಕ ಕಳ್ಳತನವನ್ನ ಶಿವಕುಮಾರ್ ಮಾಡಿಸುತ್ತಿದ್ದ. ಒಟ್ಟು 33 ಪೋಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಖದೀಮರು ಕೈಚಳಕ ತೋರಿಸಿದ್ದಾರೆ. ಜೊತೆಗೆ ಕಳ್ಳತನ ಮಾಡುವ ವೇಳೆ ಈ ಆರೋಪಿಗಳು ಓರ್ವ ಮಹಿಳೆಯನ್ನು ಆಂಧ್ರಪ್ರದೇಶದಲ್ಲಿ ಕೊಲೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಮೈಸೂರಿನಲ್ಲು ಒಂದೇ ದಿನ ಮೂರು ಸರಕಳ್ಳತನ ಮಾಡಿದ್ದು, ಪೊಲೀಸರ ಕಣ್ತಪ್ಪಿಸಲು ದೊಡ್ಡಬಳ್ಳಾಪುರ ಮಾರ್ಗವಾಗಿ ಆಂಧ್ರಕ್ಕೆ ಹೋಗುವ ವೇಳೆ ಮಹಿಳೆಯ ಸರ ಕದ್ದು ಈ ಖದೀಮರು ಎಸ್ಕೆಪ್ ಆಗಿದ್ದರು. ಸರಗಳ್ಳತನ ಪ್ರಕರಣ ಬೆನ್ನತ್ತಿ ಖತರ್ನಾಕ್ ಕಳ್ಳರನ್ನ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೇ 33 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಆರೋಪಿಗಳು ಇದೀಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಅಥಿತಿಗಳಾಗಿದ್ದಾರೆ. ಬಂಧಿತರಿ0ದ ಚಿನ್ನದ ಸರ ವಶಕ್ಕೆ ಪಡೆಯಲಾಗಿದ್ದು, ಚಿನ್ನ ಕಳೆದುಕೊಂಡ ಮಹಿಳೆಗೆ ವಾಪಸ್ ನೀಡಲಾಗಿದೆ. ಜೊತೆಗೆ ಹಲವು ಪ್ರಕರಣಗಳಲ್ಲಿ ಕದ್ದಿದ್ದ ಚಿನ್ನವನ್ನ ಆರೋಪಿಗಳಿಂದ ಪೊಲೀಸರು ರಿಕವರಿ ಮಾಡುವ ಕೆಲಸ ಮಾಡ್ತಿದ್ದಾರೆ.