ವಕ್ಫ್ ಮಂಡಳಿ ರದ್ದಾಗುವವರೆಗೂ ಹೋರಾಟ ನಿಲ್ಲಲ್ಲ
1 min readವಕ್ಫ್ ಮಂಡಳಿ ರದ್ದಾಗುವವರೆಗೂ ಹೋರಾಟ ನಿಲ್ಲಲ್ಲ
ವಿಧಾನ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ
ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ನಿಯೋಗ
ಬಾಂಗ್ಲಾ ದೇಶ ಹಾಗೂ ಪಾಕಿಸ್ತಾನದಲ್ಲಿ ಇಲ್ಲದ ವಕ್ಫ್ ಕಾಯಿದೆ ನಮ್ಮಲ್ಲಿ ಏಕೆ ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡಲೆ ವಕ್ಫ್ ಕಾಯಿದೆ, ವಕ್ ಬೋರ್ಡ್ ರದ್ದು ಮಾಡುವಂತೆ ಒತ್ತಾಯಿಸಿದರು.
ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೆಳ್ಳೂಟಿ ಗೇಟ್ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ನಿಯೋಗದೊಂದಿಗೆ ವಕ್ಫ್ ಆಸ್ತಿ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಭಾರತ ಸ್ವಾತಂತ್ರಕ್ಕೂ ಮೊದಲು ಇದ್ದ, ಇದೀಗ ದೇಶದ ಬಹು ಸಂಖ್ಯಾತ ಧರ್ಮದವರಿಗೆ ವಕ್ಫ್ ಬೋರ್ಡ್ ನಮಗೆ ಅಗತ್ಯವಿಲ್ಲ. ಕೂಡಲೆ ರದ್ದುಪಡಿಸಬೇಕೆಂದು ಆಗ್ರಹಿಸಿದರು.
1947ರಲ್ಲಿ ಸ್ವಾತಂತ್ರಾನ0ತರ ಹಿಂದೂಸ್ಥಾನ ಹಾಗು ಪಾಕಿಸ್ಥಾನಗಳಾಗಿ ದೇಶ ಇಬ್ಬಾಗವಾಗಿ, 1971ರಲ್ಲಿ ಬಾಂಗ್ಲಾದೇಶ ರೂಪುಗೊಂಡಿತು. ಸ್ವಾತಂತ್ರಕ್ಕೂ ಮೊದಲಿದ್ದ ವಕ್ಫ್ ಕಾಯಿದೆ ನಮ್ಮಲ್ಲಿ ಮಾತ್ರ ಮುಂದುವರೆದಿದೆ. ಬಾಂಗ್ಲಾದಲ್ಲಿಲ್ಲ. ಭಾರತದಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿದರು. ವಕ್ಫ್ ಕಾಯಿದೆ ರದ್ದುಪಡಿಸುವವರೆಗೆ ಬಿಜೆಪಿಯಿಂದ ನಿರಂತರ ಹೋರಾಟ ನಡೆಯುತ್ತಿರುತ್ತದೆ. ಈ ಕಾರಣಕ್ಕೆ ಮೂರು ತಂಡಗಳನ್ನು ರಚಿಸಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ವಕ್ಫ್ ಬೋರ್ಡ್ ನೋಟಿಸ್‌ನಿಂದ ಗೊಂದಲಕ್ಕೆ ಸಿಲುಕಿರುವವರ ಅಹವಾಲು ಸ್ವೀಕರಿಸಲಾಗುತ್ತಿದೆ ಎಂದರು.
ಈ ಸಂಬ0ಧ ಸದನದಲ್ಲಿ ಧ್ವನಿ ಎತ್ತುತ್ತೇವೆ, ವಕ್ಫ್ ಬೋರ್ಡ್ ರದ್ದಾಗುವವರೆಗೆ ವಿರಮಿಸುವ ಪ್ರಶ್ನೆಯೇ ಇಲ್ಲ. ಹೋರಾಟ ಬಿಡುವ ಪ್ರಶ್ನೆಯೂ ಇಲ್ಲ ಎಂದರು. ಬೆಳ್ಳೂಟಿ ಗೇಟ್‌ನಲ್ಲಿರುವ ಆಂಜನೇಯಸ್ವಾಮಿ ದೇವಾಲಯ ಪುರಾತನ ದೇವಾಲಯವಾಗಿದ್ದು, ಇದೀಗ ಏಕಾ ಏಕಿ ದೇವಾಲಯ ಜಾಗ ವಕ್ಫ್ಗೆ ಸೇರಿಸಿರುವುದು ಖಂಡನೀಯ. ವಿಶೇಷವೆಂದರೆ ಇಡೀ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಆದರೂ ಗ್ರಾಮದ ದೇವಾಲಯ ಜಾಗ ವಕ್ಫ್ಗೆ ಸೇರಿಸಿರುವುದು ಕಾಂಗ್ರೆಸ್ ಸರಕಾರದ ಓಲೈಕೆ ರಾಜಕಾರಣಕ್ಕೆ ನಿದರ್ಶನವಾಗಿದೆ ಎಂದು ಹರಿಹಾಯ್ದರು.
2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೆ ಈ ದೇವಾಲಯದ ಜಾಗ ಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಬಗ್ಗೆ ನಿಮ್ಮ ನಿಲುವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಪಹಣಿಯಲ್ಲಿ ವಕ್ ಹೆಸರು ನಮೂದಿಸಿರುವುದು ಅಧಿಕಾರಿಗಳು. ಯಾವುದೇ ಸರಕಾರದ ಅವಧಿಯಲ್ಲಿಯೇ ಆಗಲಿ ಈ ರೀತಿ ಆಗಿದ್ದನ್ನು ಸಹಿಸುವುದಿಲ್ಲ. ಈ ಅವಾಂತರ ಮಾಡಿದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಿ ಎಂದರು.
ಈ ವೇಳೆ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದು ಆಗಿರುವುದನ್ನು ಖಂಡಿಸಿ, ದೇವಾಲಯದ ಜಾಗದ ಪಹಣಿಯಲ್ಲಿನ ಹೆಸರು ರದ್ದು ಮಾಡಿಸುವಂತೆ ಆಗ್ರಹಿಸಿದರು. ಮಾಜಿ ಸಂಸದ ಎಸ್. ಮುನಿಸ್ವಾಮಿ, ವೈ.ಎ.ನಾರಾಯಣಸ್ವಾಮಿ, ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಆಂಜನೇಯಗೌಡ, ನಾರಾಯಣಸ್ವಾಮಿ, ಬೆಳ್ಳೂಟಿ ಮುನಿಕೆಂಪಣ್ಣ ಇದ್ದರು.