ಕೋಮುಲ್ ಅಕ್ರಮಗಳ ವಿರುದ್ಧ ಶಾಸಕನ ಆಕ್ರೋಶ
1 min readಕೋಮುಲ್ ಅಕ್ರಮಗಳ ವಿರುದ್ಧ ಶಾಸಕನ ಆಕ್ರೋಶ
ಸ್ವಪಕ್ಷದ ಶಾಸಕನ ವಿರುದ್ಧವೇ ಬಂಡೆದ್ದ ಶಾಸಕ
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯಿಂದ ಆರೋಪ
ಕೋಲಾರ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಶಾಸಕರ ಸಹನಯೆ ಕಟ್ಟೆ ಹೊಡೆದಿದೆ. ಎಂವಿಕೆ ಡೇರಿ ಮತ್ತು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪಿಸಿದರು.
ಬಂಗಾರಪೇಟೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಎಂವಿಕೆ ಡೇರಿ ಗುತ್ತಿಗೆ ಆಗಿರುವುದು ಒಬ್ಬರಿಗೆ, ಕೆಲಸ ಮಾಡುತ್ತಿರುವುದು ಮತ್ತೊಬ್ಬರು, ಮೆಟರಿಯಲ್ ಸರಬರಾಜು ಮಾಡುತ್ತಿರುವವರು ಮತ್ತೆ ಯಾರು, ಇದರಲ್ಲಿ ಬಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ, ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಲಾಗುವುದು ಎನ್ನುವ ಮೂಲಕ ಸ್ವಪಕ್ಷದ ಎಂಎಲ್‌ಎ ವಿರುದ್ದವೇ ಗಂಭೀರ ಆರೋಪ ಮಾಡಿದ ಶಾಸಕ ಎಸ್.ಎನ್.ನಾರಾಯಸ್ವಾಮಿ. ಕೋಮುಲ್ ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಹಾಲಿ ಶಾಸಕ ಕೆ.ವೈ. ನಂಜೇಗೌಡ ವಿರುದ್ದ ತಿರುಗಿಬಿದ್ದಿದ್ದಾರೆ.
ಎಸ್.ಎನ್ ನಾರಾಯಣಸ್ವಾಮಿ ತಮ್ಮ ಪಕ್ಷದ ಶಾಸಕನ ಹೆಸರು ಹೇಳದೆ ಪರೋಕ್ಷವಾಗಿ ಅಕ್ರಮ ಕೂಟ ಎಂದು ಆರೋಪ ಮಾಡಿದ್ರು. ಕೋಲಾರ ಹಾಲು ಒಕ್ಕೂಟದ ಕ್ಷೇತ್ರ ವಿಂಗಡಣೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಒಕ್ಕೂಟದ ಎಂಡಿ ಅಕ್ರಮ ಕೂಟ ಕಟ್ಟಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಕ್ಷೇತ್ರದ ವಿಗಂಡಣೆ ಮಾಡಿ ಕೋಲಾರ ಜನತೆಗೆ ಮೋಸ ಮಾಡಿದ್ದಾರೆ. ಒಕ್ಕೂಟದಲ್ಲಿ ಯಾರು ಪ್ರಶ್ನೆ ಮಾಡುವವರು ಬರಬಾರದೆಂದು ಕಾನೂನು ಉಲ್ಲಂಘನೆ ಮಾಡಿದ್ದಾರೆ, ಒಕ್ಕೂಟದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದೆ. ಈ ಹಿಂದಿನ ಒಕ್ಕೂಟದ ಆಡಳಿತ ಮಂಡಳಿ ಸಾಕಷ್ಟು ಅವ್ಯವಹಾರ ನಡೆಸಿದೆ ಎಂದು ಆರೋಪಗಳ ಸರಮಾಲೆಯನ್ನೇ ಸುರಿಸಿದ್ದಾರೆ.
ಕ್ಷೇತ್ರ ವಿಂಗಡಣೆ ಮಾಡುವಾಗ ಎಲ್ಲಾ ಶಾಸಕರನ್ನು ಕರೆದು ಮಾತನಾಡಬೇಕು. ಕ್ಷೇತ್ರ ವಿಂಗಡಣೆ ಬಗ್ಗೆ ಸೂಚನೆ ಬಂದರೆ ಯಾರ ಗಮನಕ್ಕೂ ತರದೆ ಅಕ್ರಮ ಎಸಗಿದ್ದಾರೆ. ಈ ಅಕ್ರಮ ಕೂಟದಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದೆ, ಕ್ಷೇತ್ರ ವಿಂಗಡಣೆ ಬಗ್ಗೆ ಏಕೆ ಪ್ರಚಾರ ಮಾಡಿಲ್ಲ, ಯಾರ ಒತ್ತಡವಿತ್ತು ಎಂಬುವುದು ಎಂಡಿ ಅವರು ತಿಳಿಸಬೇಕಾಗಿದೆ. ಹಾಲು ಒಕ್ಕೂಟಕ್ಕೆ ಹೊಳಲಿ ಬಳಿ ೫೦ ಎಕರೆ ಭೂಮಿ ಮಂಜೂರು ಮಾಡಿರುವುದೇ ಅಕ್ರಮ, ಡಿಸಿಗೆ 10 ಎಕರೆ ಮಾತ್ರ ಮಂಜೂರು ಮಾಡಲು ಅಧಿಕಾರ ಇದೆ, ಡಿಸಿ ಅವರು ತಮ್ಮ ವ್ಯಾಪ್ತಿ ಮೀರಿ ಹಸುಗಳಿಗೆ ಮೇವು ಬೆಳೆಯುವುದಾಗಿ ಮತ್ತು ಫೀಡರ್ ಮಾಡುವುದಾಗಿ ಮಂಜೂರು ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಮೂಲ ಉದ್ದೇಶಕ್ಕೆ ಭೂಮಿ ಬಳಸದೆ ಕಮರ್ಷಿಯಲ್‌ಅಂದರೆ ಸೋಲಾರ್ ಪ್ಲಾಂಟ್ ಮಾಡಲು ಹೊರಟ್ಟಿದ್ದಾರೆ. ಕಂದಾಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮ ಪ್ರವೇಶ ಮಾಡಿದ್ದಾರೆ, ಇಂಧನ ಸಚಿವ ಜಾರ್ಜ್ ಅವರ ಗಮನಕ್ಕೆ ತಂದಿಲ್ಲ ಅವರು ಯಾವುದೇ ಮಂಜೂರಾತಿ ಕೊಟ್ಟಿಲ್ಲ ಹಾಗಾಗಿ ಈ ಎಲ್ಲಾ ವಿಚಾರಗಳನ್ನ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವೆ ಎಂದು ಹೇಳುವ ಮೂಲಕ ಸ್ವ ಪಕ್ಷದ ಶಾಸಕನ ವಿರುದ್ಧವೇ ಸಮರ ಸಾರಿದ್ದಾರೆ.