ಮತದಾರರ ಪಟ್ಟಿ ಪರಿಷ್ಕರಿಸಲು ರೈತರ ಒತ್ತಾಯ
1 min readಮತದಾರರ ಪಟ್ಟಿ ಪರಿಷ್ಕರಿಸಲು ರೈತರ ಒತ್ತಾಯ
2009ರ ಮತದಾರರ ಪಟ್ಟಿಯಂತೆ ಚುನಾವಣೆಗೆ ವಿರೋಧ
ಗೌರಿಬಿದನೂರು ತಾಲೂಕಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಕೃಷಿಕ ಸಮಾಜದ ಮತದಾರರಿದ್ದು, 2009 ರಲ್ಲಿ ಮಾಡಿದ ಮತದಾರರ ಪಟ್ಟಿ ಅನ್ವಯ ಚುನಾವಣೆ ನಡಿಸುವುದು ಅನ್ಯಾಯ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಲಕ್ಷಿನಾರಾಯಣ್ ಆರೋಪಿಸಿದರು.
ಗೌರಿಬಿದನೂರು ನಗರದ ಕೃಷಿ ಇಲಾಖೆ ಮುಂದೆ ತಾಲೂಕು ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಲಕ್ಷಿನಾರಾಯಣ್, ತಾಲೂಕಿನಲ್ಲಿ ಸಣ್ಣ ಪುಟ್ಟ ರೈತರು ಈಗಾಗಲೇ ಕೃಷಿ ಬಿಡುತ್ತಿದ್ದಾರೆ. ಸರ್ಕಾರಗಳ ನೀತಿಯಿಂದ ದೇಶದ ಬೆನ್ನಲುಬಾದ ರೈತರು ಇಂದು ಸಮಾಜದಿಂದ ಮೂಲೆಗುಂಪಾಗುತ್ತಿದ್ದಾರೆ. ಈಗ ತಾಲೂಕಿನಲ್ಲಿ ೪೦ ಸಾವಿರಕ್ಕೂ ಹೆಚ್ಚು ಕೃಷಿಕ ಸಮಾಜಕ್ಕೆ ಸದಸ್ಯತ್ವ ಹೊಂದಲು ಅರ್ಹರಾಗಿರುವ ರೈತರಿದ್ದಾರೆ. ಆದರೆ 2009 ರ ಮತದಾರರ ಪಟ್ಟಿ ಅನ್ವಯ ಕೆವಲ 468 ಮಂದಿ ಮತದಾರರೊಂದಿಗೆ ಚುನಾವಣೆ ನಡಿಸುವುದು ಸರಿಯಲ್ಲ ಎಂದು ಹೇಳಿದರು.
ಕೇವಲ 100 ರೂಗಳ ಷೇರು ಕಟ್ಟಿ ಮತದಾರರಾಗಿದ್ದಾರೆ. ಇಂದು ಒಂದು ಸಾವಿರ ರೂಗಳನ್ನು ಷೇರು ಮೊತ್ತವಾಗಿ ಪಾವತಿ ಮಾಡಲು 40 ಸಾವಿರಕ್ಕೂ ಹೆಚ್ಚು ರೈತರು ಸಿದ್ದರಾಗಿದ್ದಾರೆ. ರೈತ ಸಂಘದ ತಾಲೂಕ ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಹೊಸ ಮತದಾರರ ನೋಂದಣಿಗೆ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಯಲ್ಲಿ ಮುದ್ದು ರಂಗಪ್ಪ, ಸನತ್ ಕುಮಾರ್, ಬಾಬು, ಮುನಿವೆಂಕಟಪ್ಪ, ನಂಜಿರೆಡ್ಡಿ ಇದ್ದರು.