ಮೈಸೂರಿನ ಟೌನ್ ಹಾಲ್ ನಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದÀಲ್ಲಿ ಪ್ರೊಫೆಸರ್ ಕೆಎಸ್ ಭಗವಾನ್ ವಕ್ಕಲಿಗರ ಜನಾಂಗವನ್ನು ಸಂಸ್ಕೃತಿ ಹೀನರು ಎಂದು ನಿಂದಿಸಿರುತ್ತಾರೆ ಎಂದು ಮಾಲೂರು ಪಟ್ಟಣದ ಮುಖ್ಯ ರಸ್ತೆಯ ಕೆಂಪೇಗೌಡ ವೃತ್ತದಲ್ಲಿ ಜಮಾಯಿಸಿದ ಒಕ್ಕಲಿಗರ ಸಮುದಾಯದವರು ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿಯನ್ನು ತಾಲೂಕು ಕಚೇರಿಯವರೆಗೂ ನಡೆಸಿದರು. ನಂತರ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಪ್ರೊಫೆಸರ್ ಕೆಎಸ್ ಭಗವಾನ್ ಅವರು ಒಕ್ಕಲಿಗ ಸಮುದಾಯದವರನ್ನು ನಿಂದಿಸಿರುವುದನ್ನು ಖಂಡಿಸಿ ದಿಕ್ಕಾರಗಳನ್ನು ಕೂಗಿದರು.
ಅವರ ಮಾತುಗಳು ಸಹಸ್ರಾರು ವಕ್ಕಲಿಗರ ಮನಸ್ಸನ್ನು ನೋಯಿಸಿರುತ್ತದೆ, ಅವರ ಮಾತು ಸಮಾಜದಲ್ಲಿ ಶಾಂತಿ, ನೆಮ್ಮದಿಯನ್ನು ಕದಡಿಸಿದೆ. ಸಮಾಜದಲ್ಲಿ , ಸಾರ್ವಜನಿಕ ಸಭೆಯಲ್ಲಿ ಬೇಜವಬ್ದಾರಿಯಾಗಿ ಮತನಾಡುತ್ತ ಜಾತಿ ನಿಂದನೆ ಮಾಡಿರುತ್ತಾರೆ. ಒಕ್ಕಲಿಗ ಸಮುದಾಯದವರ ತೇಜೋವಧೆ ಮಾಡಿರುತ್ತಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿಯ ಶಿರಸ್ತೆದಾರ್ ಧರ್ಮೇಂದ್ರಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಕ್ಕಲಿಗರ ವಿದ್ಯಾ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಎಂ ರಾಮೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಂತ್ ಕುಮಾರ್, ಖಜಾಂಚಿ ಮುನಿಯಪ್ಪ, ಒಕ್ಕಲಿಗ ಸಮುದಾಯದ ಅನೇಕ ಮುಖಂಡರುಗಳು ಭಾಗವಹಿಸಿದ್ದರು