ಐಎಫ್‌ಬಿ ವಾಷಿಂಗ್ ಮಷೀನ್ ಕಂಪನಿ ಹೆಸರಲ್ಲಿ ಮೋಸ
1 min read
ಐಎಫ್‌ಬಿ ವಾಷಿಂಗ್ ಮಷೀನ್ ಕಂಪನಿ ಹೆಸರಲ್ಲಿ ಮೋಸ
ಚಿಕ್ಕಬಳ್ಳಾಪುರದಲ್ಲಿ ಮೂವರು ಆರೋಪಿಗಳ ಬಂಧನ
ಐಎಫ್‌ಬಿ ಕಂಪನಿ ಸರ್ವಿಸ್ ಏಜೆಂಟ್ ಎಂದು ಹೇಳಿಕೊಂಡು ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಮೂವರನ್ನು ವಿವೇಕಾನಂದ ಎಂಟರ್‌ಪ್ರೆಸಸ್ ಮಾಲೀಕ ಚರಣ್ ಎಂಬಾತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ಇಂದು ನಡೆದಿದೆ.
ಐಎಫ್‌ಬಿ ವಾಷಿಂಗ್ ಮಷೀನ್ ಅಧಿಕೃತ ಸೇವಾದಾರರಾದ ವಿವೇಕಾನಂದ ಎಂಟರ್ ಪ್ರೆಸಸ್ ಚರಣ್ ಅವರಿಗೆ ಗ್ರಾಹಕರಿಂದ ಪದೇ ಪದೇ ದೂರುಗಳು ಬರುತ್ತಿದ್ದವು ಎನ್ನಲಾಗಿದೆ. ಇದರ ಜಾಡು ಹಿಡಿದು ಬೆನ್ನು ಹತ್ತಿದ ಚರಣ್ ನಕಲಿ ಕಂಪನಿ ಹೆಸರಲ್ಲಿ ನಕಲಿ ವಸ್ತುಗಳನ್ನು ಯಂತ್ರಕ್ಕೆ ಅಳವಡಿಸಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾದೀಮರನ್ನು ಮಾಲು ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಯ್ಯಪ್ಪ ಕಂಪನಿಯ ಸರ್ವಿಸ್ ಏಜೆಂಟ್ಸ್ ಎಂದು ಗ್ರಾಹಕರನ್ನು ನಂಬಿಸಿ, ಕ್ಲೀನಿಂಗ್ ಪೌಡರ್ ಬದಲಿಗೆ ಉಪ್ಪನ್ನ ತುಂಬಿಸಿ ಹಣ ಮಾಡುತ್ತಿದ್ದರು. ಅಯ್ಯಪ್ಪ ಕಂಪನಿಯ ಫಿಲ್ಟರ್ ಒಂದಕ್ಕೆ ೨,೫೬೦ ರೂಪಾಯಿ ಇದ್ದರೆ, ಈ ಖದೀಮರು ಲೋಕಲ್ ವಸ್ತುಗಳನ್ನು ಹಾಕಿ ಹಣ ಮಾಡುತ್ತಿದ್ದರು. ಪದೇ ಪದೇ ಕಂಪನಿಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ವಂಕೆಯಲ್ಲಿ ಡ್ರಾಪ್ ಮಾಡಿ ಮಂಡ್ಯ ಶ್ರೀರಂಗಪಟ್ಟಣ ತುರುವೇಕೆರೆ ಮೂಲದ ಅರ್ಜುನ್, ದರ್ಶನ್, ಮಂಜುನಾಥ್ ಎಂಬವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿವೇಕಾನಂದ ಎಂಟರ್ ಪ್ರೆÊಸಸ್ ಮಾಲೀಕ ಚರಣ್ ಹೇಳುವಂತೆ ಜಿಲ್ಲೆಯಲ್ಲಿ ಖದಿಮರ ತಂಡ ೪೦೦ ರಿಂದ ೫೦೦ ಮಂದಿಗೆ ಈ ರೀತಿ ಟೋಪಿ ಹಾಕಿದ್ದು, ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಇವರ ಮೇಲೆ ಶಿಸ್ತು ಕ್ರಮ ಜರುಗಿಸಿ ಪೊಲೀಸರ ಶೈಲಿಯಲ್ಲಿ ಬಾಯಿ ಬಿಡಿಸಿದರೆ ಈ ಹಗರಣ ಇನ್ನಷ್ಟು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.