ಕಾನೂನಿನ ಭಯ ಇಲ್ಲದೆ ವರ್ತಿಸುತ್ತಿರುವ ಪುಂಡರ ಗುಂಪು
1 min readಕಾನೂನಿನ ಭಯ ಇಲ್ಲದೆ ವರ್ತಿಸುತ್ತಿರುವ ಪುಂಡರ ಗುಂಪು
ಹಾಡ ಹಗಲಿನಲ್ಲೇ ಮಟ್ಟು ತೋರಿಸಿ ರಾಬರಿ ಮಾಡಿದ ಖದೀಮರು
ಸಾರ್ವಜನಿಕರಿಗೂ ಮಚ್ಚು ತೋರಿಸಿ ಬೆದರಿಸಿ ಪರಾರಿ
ಹಾಡಹಗಲೇ ಮಚ್ಚು ಹಿಡಿದು ಯುವಕರು ರಾಬರಿಗೆ ಇಳಿದಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಜನರು ಹೊರಗೆ ಸಂಚರಿಸಲೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಪುಂಡರು ಪೊಲೀಸರ ಭಯ ಇಲ್ಲದೆ ವರ್ತಿಸುತ್ತಿದ್ದು, ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಮುಂದೆ ಇದು ತೀವ್ರ ರೂಪ ತಾಳುವ ಆತಂಕವನ್ನು ಪ್ರವಂತರು ವ್ಯಕ್ತಪಡಿಸಿದ್ದಾರೆ.
ಹಗಲಿನಲ್ಲಿಯೇ ಪುಂಡರ ಗುಂಪು ಮಾರಕಾಸ್ತçಗಳನ್ನು ಹಿಡಿದು ದರೋಡೆಗೆ ಇಳಿದಿರುವ ಪ್ರಕ ಣ ಇದೀಗ ಬೆಳಕಿಗೆ ಬಂದಿದ್ದು, ಚಿಕ್ಕಬಳ್ಳಾಪುರದ ಜನತೆ ಬೆಚ್ಚಿ ಬೀಳುವಂತಾಗಿದೆ. ಮಚ್ಚು ತೋರಿಸಿ ಬೆದರಿಸಿ ಯುವಕನ ಬಳಿ ದರೋಡೆ ಮಾಡಲಾಗಿದ್ದು, ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮತ್ತೊಬ್ಬ ಯುವಂಕನಿ0ದ ರಾಬರಿ ಮಾಡಿರುವುದಾಗಿ ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಕುಡುವತಿ-ಹುರಳಗುರ್ಕಿ ಮಾರ್ಗದ ಬಳಿ ಈ ದರೋಡೆ ಪ್ರಕರಣ ನಡೆದಿದ್ದು, ರಾಬರಿ ಮಾಡಿ ಮುದ್ದೇನಹಳ್ಳಿ ಸತ್ಯಸಾಯಿ ಆಸ್ಪತ್ರೆ ಗೇಟ್ ಬಳಿ ಕಳ್ಳರು ಬಂದಿರುವುದು ಬಹಿರಂಗವಾಗಿದೆ. ಮುದ್ದೇನಹಳ್ಳಿಯ ನಂದಿನಿ ಬೂತ್ ಬಳಿ ಬೈಕ್ ನಿಲ್ಲಿಸಿ ಟೀ ಕುಡಿದಿರುವ ದರೋಡೆಕೋರರು ನಂತರ ಮುಂದೆ ಸಾಗಿದ್ದಾರೆ.
ರಾಬರಿ ಮಾಡಿದ್ದ ವಿಡಿಯೋ ರೆಕಾರ್ಡ್ ಮಾಡಿ ಪಕ್ಕದಲ್ಲಿಯೇ ಇದ್ದ ತೋಟದ ಮನೆಯವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ರಾಬರಿ ಮಾಡಿದವರನ್ನ ಕಂಡು ಹಿಡಿಯಲು ಸಾರ್ವಜನಿಕರು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ದರೋಡೆಕೋರರು ಸಾರ್ವಜನಿಕರಿಗೆ ಮಚ್ಚು ತೋರಿಸಿ, ಬೆದರಿಸಿ ಕಳ್ಳರು ಪರಾರಿಯಾಗಿದ್ದಾರೆ. ಈ ಘಟನೆ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.