ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷರಾಗಿರುವ ಬಷೀರಾ ರಿಜ್ವಾನ್ ವಿರುದ್ದ ೧೦ ಸದಸ್ಯರ ಪೈಕಿ ೯ ಸದಸ್ಯರು ಅವಿಶ್ವಾಸ ಮಂಡನೆಯ ಬಗ್ಗೆ ಮನವಿ ಪತ್ರ ನೀಡಿದ್ದು, ಅವರ ಮನವಿಯ ಮೇರೆಗೆ ಎಲ್ಲಾ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು, ನಂತರ ನಡೆದ ಸಭೆಯಲಿ ೧೦ ಸದಸ್ಯರ ಪೈಕಿ ೯ ಸದಸ್ಯರು ಹಾಜರಾಗಿದ್ದು, ಅಧ್ಯಕ್ಷೆ ಬಷೀರಾ ರಿಜ್ವಾನ್ ಗೈರು ಹಾಜರಾಗಿದ್ದು ್ಲ ಅಧ್ಯಕ್ಷರ ಸ್ಥಾನ ತೆರವು ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಅಶ್ವೀನ್ ತಿಳಿಸಿದರು. ಇನ್ನು ಈ ಸಮಯದಲ್ಲಿ ಪಟ್ಟಣ ಪಂಚಾಯತಿ ಸದಸ್ಯೆ ವೀಣಾನಿತೀನ್ ಮಾತನಾಡಿ ಅಧ್ಯಕ್ಷೆ ಬಷೀರಾ ರಿಜ್ವಾನ್ ಅಭಿವೃದ್ಧಿ ಕೆಲಸಗಳು ಮಾಡಲು ಸಹಕಾರ ನೀಡುತ್ತಿಲ್ಲ, ಪಟ್ಟಣದಲ್ಲಿ ಸ್ವಚ್ಚತೆ ಹಾಗೂ ಕಸವಿಲೇವಾರಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ಮಾಡುವಲ್ಲಿ ವಿಫಲರಾಗಿದ್ದು, ಜನ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದು ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು, ಆದರೆ ನಾವು ಅದನ್ನೆ ಮಾಡಲೂ ಆಗದಿದ್ದರೆ ಹೇಗೆ, ಆದ್ದರಿಂದ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡದಿರುವ ಅಧ್ಯಕ್ಷರ ವಿರುದ್ದ ನಾವೆಲ್ಲ ಸದಸ್ಯರು ಒಗ್ಗಟ್ಟಿನಿಂದ ಅವಿಶ್ವಾಸ ಮಂಡನೆ ಮಾಡಿದ್ದು ಅದರಂತೆ ಇಂದು ಉಪವಿಭಾಗಾಧಿಕಾರಿಗಳು ಸಭೆ ಕರೆದು ನಮ್ಮ ಎಲ್ಲಾ ಸದಸ್ಯರ ಹೇಳಿಕೆ ಪಡೆದು ಬಷೀರಾ ರಿಜ್ವಾನ್‌ರನ್ನು ಅಧ್ಯಕ್ಷೆ ಸ್ಥಾನದಿಂದ ತೆರವುಗೊಳಿಸಿದ್ದಾರೆಂದರು.
ಇನ್ನು ಈ ವೇಳೆ ತಹಶೀಲ್ದಾರ್ ಎನ್.ಮನೀಷಾ, ಪ್ರಭಾರಿ ಸಿಇಒ ಶ್ರೀನಿವಾಸ, ಉಪಾಧ್ಯಕ್ಷ ವಿಕಾಸ್, ಸದಸ್ಯರಾದ ರಾಜೇಶ್, ಮಂಜುಳ, ಬಷೀರ್, ಗಂಗರಾಜು, ಅನುಷಾ, ಇಸ್ಮಾಯಿಲ್ ಅಜಾದ್, ನಗೀನ್ ತಾಜ್ ಹಾಜರಿದ್ದರು.