ನಂಜನಗೂಡಿನಲ್ಲಿ ಮಹಾ ಪರಿನಿರ್ವಾಣದಿನಾಚರಣೆ
1 min readನಂಜನಗೂಡಿನಲ್ಲಿ ಮಹಾ ಪರಿನಿರ್ವಾಣದಿನಾಚರಣೆ
ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನ ಅದ್ಧೂರಿ
ಅಂಬೇಡ್ಕರ್‌ಅವರ 68ನೇ ಮಹಾ ಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ನಂಜನಗೂಡು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ದರ್ಶನ್ ಧ್ರವನಾರಾಯಣ್ ಮಾಲಾರ್ಪಣೆ ಮಾಡಿ, ಪುಷ್ಪರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಬಾಬಾ ಸಾಹೇಬರು ದೇಶಕ್ಕೆ ಸಂವಿಧಾನವನ್ನು ನೀಡುವ ಮೂಲಕ ಸಮಾನತೆ ತಂದಿದ್ದಾರೆ ಎಂದರು.
ನಿರ0ತರ ಹೋರಾಟ ಮಾಡಿ ಸಮಾಜದಲ್ಲಿ ಬದಲಾವಣೆ ತಂದು ದಲಿತರು, ಹಿಂದುಳಿದ ವರ್ಗದವರು, ರೈತರು, ಕೂಲಿಕಾರ್ಮಿಕರು, ಮಹಿಳೆಯರಿಗೆ ಸಮಾನತೆಯ ಹಕ್ಕು ಮತ್ತು ಶಕ್ತಿಯನ್ನು ಕೊಟ್ಟಿದ್ದಾರೆ. ಅವರ ಸ್ಮರಣೆ ನಿರಂತರವಾಗಿರಬೇಕು ಅವರಿಂದ ನಾವು ನಮ್ಮ ತಂದೆಯವರು ಒಂದು ವೋಟಿನಿಂದ ಗೆದ್ದಿದ್ದರು. ಅದಕ್ಕೆ ಸಂವಿಧಾನ ಕಾರಣ. ನಾವು ಅತ್ಯಂತ ಕಿರಿಯ ವಯಸ್ಸಿನ ಶಾಸಕನಾಗಲು ಸಂವಿಧಾನ ಕಾರಣ ಎಂದರು.
ನಾವು ದಿನನಿತ್ಯ ಅಂಬೇಡ್ಕರ್ ಸ್ಮರಣೆ ಮಾಡಬೇಕಾಗಿದೆ. ಅವರು ಕಲಿಸಿದ ಜೀವನದ ಪಾಠ ಅವರು ನಡೆದು ಬಂದ ಹಾದಿ ಹೋರಾಟವನ್ನು ಮುಂದುವರಿಸಿಕೊ0ಡು ಹೋಗಬೇಕಾಗಿದೆ. ಅವರ ಚಿಂತನೆ ಹೋರಾಟ ತತ್ವ ಸಿದ್ಧಾಂತ ಸಂವಿಧಾನದ ಮೂಲಕ ಜೀವಂತವಾಗಿದೆ. ದೇಶದಲ್ಲಿ ಹಲವಾರು ಜಾತಿ, ಭಾಷೆ, ಪ್ರಾಂತ್ಯ, ಧರ್ಮಗಳು ಒಂದುಗೂಡಿಸಿ ಕೊಂಡು ಹೋಗುತ್ತಿರುವುದು ಅವರು ಕೊಟ್ಟ ಸಂವಿಧಾನ ಕಾರಣ ಎಂದು ಹೇಳಿದರು.
ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸರ್ಕಾರದ ಮೂಲಕ ಸಂವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳು, ತಿಳಿಸುವ ಕೆಲಸ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರ್, ತಾಲೂಕು ಪಂಚಾಯಿತಿ ಇಒ ಜರಾಲ್ಡ್ ರಾಜೇಶ್ ಇದ್ದರು.