ಬುಡ ಬುಡಿಕೆ ವೇಷದಲ್ಲಿ ಬಂದು ಹಾಡಹಗಲೆ ದರೋಡೆ
1 min readಬುಡ ಬುಡಿಕೆ ವೇಷದಲ್ಲಿ ಬಂದು ಹಾಡಹಗಲೆ ದರೋಡೆ
ಮನೆಯಲ್ಲಿದ್ದ ಮಹಿಳೆಯ ಪ್ರಜ್ನೆ ತಪ್ಪಿಸಿ ಹಣ, ಚಿನ್ನಾಭರಣ ಲೂಟಿ
ಒಂದೇ ಗ್ರಾಮದ ನಾಲ್ಕೆದು ಮನೆಗಳ ದೋಚಿ ಎಸ್ಕೇಪ್
ದುಷ್ಕರ್ಮಿಗಳ ಕೈ ಚಳಕಕ್ಕೆ ಗ್ರಾಮಸ್ಥರ ಆತಂಕ
ಆ ಗ್ರಾಮದಲ್ಲಿ ಬೆಳಗ್ಗೆ ತೋಟಗಳಿಗೆ ತೆರಳಿ ಕೆಲಸ ಮುಗಿಸಿಕೊಂಡು ಆಗಷ್ಟೆ ಮನೆಗೆ ವಾಪಸ್ಸಾಗಿದ್ರು. ಇದೇ ವೇಳೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಬುಡಬುಡಿಕೆ ವೇಷಧಾರಿಗಳು ನಿಮ್ಮ ಮನೆಗಳಲ್ಲಿ ದೋಷವಿದೆ, ಗಂಡಾ0ತರವಿದೆ ಅಂತಾ ಹೇಳಿದ್ದಾರೆ. ಮನೆಯಲ್ಲಿದ್ದ ಮಹಿಳೆಯರನ್ನ ಯಾಮಾರಿಸಿದ ಬುಡಬುಡಿಕೆ ವೇಷಧಾರಿಗಳು ಬ್ಲಾಕ್ ಮ್ಯಾಜಿಕ್ ಮಾಡಿ ಹಣ ಚಿನ್ನಾಭರಣ ದೋಚಿ ಎಸ್ಕೆಪ್ ಆಗಿದ್ದಾರೆ.
ಹಾಡ ಹಗಲೇ ಮನೆಗಳಿಗೆ ಭೇಟಿ ನೀಡಿ, ಭೀಕ್ಷೆ ಬೇಡುತ್ತಿರೋ ಬುಡಬುಡಿಕೆ ವೇಷಧಾರಿಗಳು, ಇತ್ತ ಬುಡಬಡಿಕೆಯವರ ಮೋಸಕ್ಕೆ ಒಳಗಾಗಿ ಚಿನ್ನಾಭರಣ ಕಳೆದುಕೊಂಡು ಕಂಗಲಾಗಿರೋ ಮಹಿಳೆರು, ಬುಡಬುಡಿಕೆ ವೇಷಧಾರಿಗಳ ಖತರ್ನಾಕ್ ದರೋಡೆಗೆ ಬೆಚ್ಚಿಬಿದದಿರೋ ಗ್ರಾಮಸ್ಥರು. ಬಡುಬುಡಿಕೆ ವೇಷ ಧರಿಸಿಕೊಂಡು ಮನೆಗಳಲ್ಲಿ ಮಹಿಳೆಯರ ಪ್ರಜ್ನೆ ತಪ್ಪಿಸಿ, ಹಣ ಚಿನ್ನಾಭರಣ ದೋಚಿ ಎಸ್ಕೆಪ್ ಆಗಿರೋ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮುನಿರಾಜು ಸೇರಿದಂತೆ ಹಲವರ ಮನೆಯಲ್ಲಿ ಬುಡಬುಡಿಕೆ ವೇಷಧಾರಿಗಳು ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಮುನಿರಾಜು ಮನೆಗೆ ಬಂದ ಬುಡಬಡಿಕೆಯವರು ಮನೆಯಲ್ಲಿದ್ದ ಮಹಿಳೆಗೆ ನಿಮ್ಮ ಮನೆಯವರಿಗೆ ಅಪಘಾತವಾಗುತ್ತೆ, ಕಷ್ಟಗಳು ಬರುತ್ತೆ, ಪರಿಹಾರ ಮಾಡ್ತೀವಿ ಅಂತ ಬೂಟಾಟಿಕೆ ಮಾಡಿ ಮಹಿಳೆಗೆ ಮಂಕು ಬೂದಿ ಎರಚಿದ್ದಾರೆ.
ಮೊದಲು ನಿಮ್ಮ ಮನೆಗೆ ಪರಿಹಾರ ಕೊಡ್ತೇನೆ ಎಂದ ಬುಡಬುಡಿಕೆ ವೇಷಧಾರಿಗಳು ನೂರು ರೂಪಾಯಿ ಹಣ ನೀಡಿದ್ರೆ ಕಷ್ಟ ಪರಿಹಾರ ಮಾಡಿಕೊಡ್ತೀವಿ ಅಂತ ಮಹಿಳೆಗೆ ಯಾಮಾರಿಸಿಸದ್ದಾರೆ. ನಂತರ ಮುಖದ ಮೇಲೆ ಮಂತ್ರದ0ತಹ ನೀರು ಚಿಮ್ಮಿ ಚಿನ್ನದ ಉಂಗುರ, ಕಿವಿ ಓಲೆ ಸೇರಿದಂತೆ ನಗದು ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಅಲ್ಲದೆ ಗ್ರಾಮದ ಮೂರ್ನಾಲ್ಕು ಮನೆಗಳಿಗೆ ತೆರಳಿರೋ ಬುಡಬುಡಿಕೆಯವರು ಇದೇ ರೀತಿ ಮಂಕು ಬೂದಿ ಎರಚಿ ಐದು ಸಾವಿರದಂತೆ ಹಣ ಪೀಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬುಡು ಬುಡಿಕೆ ವೇಷದಲ್ಲಿ ಬಂದಿದ್ದ ಇಬ್ಬರು ಅಪರಿಚಿತರಿಂದ ಈ ಕೃತ್ಯ ಎಸಗಿದ್ದು, ಬುಡು ಬುಡಿಕೆಯವರ ಕೃತ್ಯದಿಂದ ಗ್ರಾಮದ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ಅಪರಿಚಿತ ಬುಡ ಬುಡಿಕೆಯವರ ವಿರುದ್ದ ವಿಶ್ವನಾಥಪುರ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.
ಬುಡಬುಡಿಕೆಯವರಂತೆ ವೇಷ ಬದಲಿಸಿಕೊಂಡು ಖದೀಮರು ಮನೆಗಳನ್ನ ದರೋಡೆ ಮಾಡಲು ಹೊರಟಿದ್ದು, ಗ್ರಾಮಸ್ಥರನ್ನ ಬೆಚ್ಚಿ ಬಿಳಿಸಿದೆ. ಈ ಸಂಬ0ಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದೇನೇ ಇರಲಿ ಈ ಸ್ಟೋರಿ ನೋಡಿದ ಮಲೆ ನೀವು ಒಮ್ಮೆ ಗ್ರಾಮಗಳಲ್ಲಿ ಇಂತವರ ಬಗ್ಗೆ ಎಚ್ಚರಿಕೆಯಿಂದ ಇದ್ದರೆ ಒಳಿತು.