ನಿವೇಶನಗಳಿಗೆ ಒತ್ತಾಯಿಸಿ ಮಂಜೂರಾದ ಜಾಗದಲ್ಲಿಯೇ ಪ್ರತಿಭಟನೆ
1 min readನಿವೇಶನಗಳಿಗೆ ಒತ್ತಾಯಿಸಿ ಮಂಜೂರಾದ ಜಾಗದಲ್ಲಿಯೇ ಪ್ರತಿಭಟನೆ
ತಾಪಂ ಇಒ ಮನವೊಲಿಕೆಗೂ ಜಗ್ಗದ ಪ್ರತಿಭಟನಾಕಾರರು
ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಮಂಜೂರಾದ ಜಮೀನಿನಲ್ಲೆ ನಿವೇಶನ ನೀಡುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳು ಅಂಬೇಡ್ಕರ್ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದರು.
ನಿವೇಶನ ಹಂಚಿಕೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ದಲಿತ ಮುಖಂಡ ಆರ್. ಕದಿರಪ್ಪ ಮಾತನಾಡಿ, ಕಡೇಹಳ್ಳಿ ಮುಖ್ಯರಸ್ತೆ ಅಗಲೀಕರಣದ ವೇಳೆ ಅನೇಕರು ಮನೆ ಕಳೆದುಕೊಂಡಿದ್ದರು. ಅವರ ಪೈಕಿ ಹೆಚ್ಚು ದಲಿತರೇ ಇದ್ದಾರೆ. ಬಳಿಕ ಮನೆ ಕಳೆದುಕೊಂಡವರಿಗಾಗಿ ಕಡೇಹಳ್ಳಿ ಸ.ನಂ. 131 ರಲ್ಲಿ 2 ಎಕರೆ 15 ಗುಂಟೆ ಜಮೀನಿನಲ್ಲಿ ನಿವೇಶನ ನೀಡಲು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರು. ಆದರೆ ಈ ಜಾಗದಲ್ಲಿ ಓಬನ್ನಗಾರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ನಮೂನೆ ೫೭ ರಲ್ಲಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬ0ಧ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಜೊತೆಗೆ ಈ ಜಾಗವನ್ನು ಅತಿಕ್ರಮಣ ಮಾಡಬಾರದೆಂದು ನಾಮಫಲಕ ಅಳವಡಿಸಿದ್ದಾರೆ. ಆದರೂ ಓಬನ್ನಗಾರಹಳ್ಳಿಯ ವ್ಯಕ್ತಿ ಉಳುಮೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ತಾಪಂ ಮಾಜಿ ಸದಸ್ಯ ಹಂಪಸ0ದ್ರ ಆದಿನಾರಾಯಣಪ್ಪ ಮಾತನಾಡಿ, ಕಡೇಹಳ್ಳಿ ಮುಖ್ಯರಸ್ತೆ ಅಗಲೀಕರಣ ಮಾಡಿದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಜಾಗ ಮಂಜೂರು ಮಾಡಿದ್ದಾರೆ. ಆದರೆ ಈವರೆಗೂ ಅಧಿಕಾರಿಗಳು ಮನೆ ಕಳೆದುಕೊಂಡವರಿಗೆ ನಿವೇಶನ ನೀಡಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಹೇಳುತ್ತಾರೆ. ಯಾರು ಅತಿಕ್ರಮಣ ಮಾಡಬಾರದೆಂದು ತಹಸೀಲ್ದಾರರು ನಾಮಫಲಕ ಹಾಕುತ್ತಾರೆ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶ ಮಾಡಿ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಗುಡುಬಂಡೆ ತಾಲೂಕು ಪಂಚಾಯತಿ ಇಒ ನಾಗಮಣಿ ಲಾಭನುಭವಗಳ ಮನವೊಳಿಸಲು ಪ್ರಯತ್ನ ಪಟ್ಟರು. ಸಾಧ್ಯವಾಗದ ಕಾರಣ ನಿರ್ಗಮಿಸಿದರು. ಗುಡಿಬಂಡೆ ಪೊಲೀಸರು ಸ್ಥಳಿದಲ್ಲಿದ್ದರು.