ಗಡಿದಂ ಪುಣ್ಯಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ
1 min readಗಡಿದಂ ಪುಣ್ಯಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ
ನವ ದಂಪತಿಗಳಿಗೆ ಸೀಮೆಹಸು ನೀಡಿದ ಶಾಸಕ ಸುಬ್ಬಾರೆಡ್ಡಿ
ಬಾಗೇಪಲ್ಲಿ ಪಟ್ಟಣಕ್ಕೆ ಸುಪದ ಗಡಿದಂ ಶ್ರೀ ಲಕ್ಷಿವೆಂಕಟಮಣಸ್ವಾಮಿ ಸನ್ನಿಧಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಮ್ಮಿಕೊಂಡಿದ್ದ 22ನೇ ವರ್ಷದ ಉಚಿತ ಸಾಮೂಕ ವಿವಾಹ ಮಹೋತ್ಸವ ವೈಭವನದಿಂದ ನೆರವೇರಿತು. ಒಟ್ಟು 106 ನವಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಾಮೂಕ ವಿವಾಹದ ಹಿನ್ನಲೆಯಲ್ಲಿ ಗಡಿದಂ ಲಕ್ಷಿವೆಂಕಟರಮಣಸ್ವಾಮಿ ದೇವಾಲಯವನ್ನು ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಮುಖ್ಯ ದ್ವಾರದಿಂದ ವಿವಾಹ ವೇದಿಕೆಯವರೆಗೆ ಆಗಮಿಸುವ ದಾರಿ ನೂತನವಾಗಿ ಶೃಂಗಾರ ಮಾಡಲಾಗಿತ್ತು. ವೇದಿಕೆಯ ಪ್ರವೇಶ ದ್ವಾರ ನೋಡುವುದೇ ಆನಂದ ಎನ್ನುವ ರೀತಿಯಲ್ಲಿ ರೂಪಿಸಲಾಗಿತ್ತು. ಸುಮಾರು 10 ಸಾವಿರ ಜನರು ಒಮ್ಮೆಲೇ ಆಸೀನವಾಗುವಂತೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ದೂರ ಕುಳಿತಿರುವವರಿಗೆ ಕಾಣುವ ದೃಷ್ಟಿಯಿಂದ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ತಿರುಪತಿ ತಿರುಮಲ ದೇವಾಲಯದ ಮಾದರಿಯಲ್ಲಿಯೇ ಪ್ರಧಾನ ವೇದಿಕೆ ಸಿದ್ದಪಡಿಸಲಾಗಿತ್ತು. ಅದೇ ವೇದಿಕೆಯಲ್ಲಿ ಕಲ್ಯಾಣೋತ್ಸವವೂ ನಡೆಯಿತು.
ಉಚಿತ ಸಾಮೂಹಿಕ ವಿವಾಹಗಳಲ್ಲಿ ಇದೇ ಮೊದಲ ಬಾರಿಗೆ ನವ ದಂಪತಿಗಳೊ0ದಿಗೆ ಅವರ ಪೋಷಕರು ಅಕ್ಕ-ಪಕ್ಕದಲ್ಲಿ ಕುಳಿತು ತಮ್ಮ ಮಕ್ಕಳ ಮದುವೆ ಕಣ್ತುಂಬಿಕೊ0ಡರು. ಪ್ರತಿ ಜೋಡಿಗೂ ಪ್ರತ್ಯೇಕವಾಗಿ ಪುರೋಹಿತರನ್ನು ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ನೇತೃತ್ವದಲ್ಲಿ ಕಲ್ಯಾಣೋತ್ಸವ ಹಾಗು ವಿವಾಹ ಮಹೋತ್ಸವದ ಧಾರ್ಮಿಕ ಕಾರ್ಯಗಳು ಶಾಸ್ತೊಕ್ತವಾಗಿ ಯಶಸ್ವಿಯಾಗಿ ನೆರವೇರಿದವು.
ಪ್ರತಿ ವರ್ಷದ ಸಂಪ್ರದಾಯದ0ತೆ ಈ ವರ್ಷವೂ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾದ ನವದಂಪತಿಗಳಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ದಂಪತಿಗಳು ಸೀಮೆ ಹಸುವೊಂದನ್ನು ಕೊಡುಗೆಯಾಗಿ ನೀಡಿ ಶುಭಕೋರಿದರು. ನೂತನ ದಂಪತಿಗಳು ಶಾಸಕ ದಂಪತಿಗಳ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಣ್ತುಂಬಿಕೊಳ್ಳಲು ಗಡಿದಂ ಕ್ಷೇತ್ರಕ್ಕೆ ಜನಸಾಗರವೇ ಹರಿದುಬಂದಿತ್ತು. ಲಭ್ಯ ಮಾಹಿತಿಯಂತೆ 20 ಸಾವಿರಕ್ಕೂ ಹೆಚ್ಚಿನ ಜನರು ಸಾಮೂಕ ವಿವಾಹಗಳಿಗೆ ಸಾಕ್ಷಿಯಾದರು.
ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಜನರಿಗೆ ಕುಳಿತು ಭೋಜನ ಸವಿಯುವ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ನೂಕು-ನುಗ್ಗಲಿಗೆ ಅವಕಾಶವಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಜನ ಸಾಗರ ಹರಿದುಬಂದ ಕಾರಣ ಗಡಿದಂ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಸ್ವಲ್ಪಮಟ್ಟಿನ ತೊಂದರೆಯಾದರೂ ಪೊಲೀಸರ ಅಗತ್ಯ ಕ್ರಮಗಳಿಂದ ತೀವ್ರರೂಪ ಪಡೆಯ್ಳಲಿಲ್ಲ.
ಪ್ರತಿ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು. ವಿಶೇಷವಾಗಿ ವಿಐಪಿಗಳು ಆಗಮಿಸಿದಾಗ, ಹೊರಟಾಗ ಗದ್ದಲ,ಆತುರ, ತರಾತುರಿ ಕಂಡು ಬರುತ್ತಿತ್ತು. ಈ ಬಾರಿ ಕಾರ್ಯಕ್ರಮಕ್ಕೆ ಯಾವುದೇ ಗಣ್ಯರನ್ನು ಕರೆಯದ ಕಾರಣ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಹಾಗು ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭಗೊ0ಡು ಮುಕ್ತಾಯಗೊಂಡಿತು. ಭಾಷಣಗಳ ಅಬ್ಬರವೂ ಇರಲಿಲ್ಲ.