ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕ ಅಂಬೇಡ್ಕರ್
1 min readಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕ ಅಂಬೇಡ್ಕರ್
ಗೌರಿಬಿದನೂರಿನಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ
ಭರತ ಕಂಡ ಅತ್ಯಂತ ಶ್ರೇಷ್ಠ ನಾಯಕರಲ್ಲಿ ಅಂಬೇಡ್ಕರ್ ಒಬ್ಬರಾಗಿದ್ದಾರೆ, ಅವರ ತತ್ವ ಸಿದ್ದಾ0ತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ದೇಶ ಮತ್ತು ಬದುಕು ಹಸನಾಗಲು ಸಾಧ್ಯ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.
ಗೌರಿಬಿದನೂರು ನಗರ ಹೊರವಲಯದ ಸಮಾನತಾ ಅವರಣದಲ್ಲಿ ಇಂದು ಅಂಬೇಡ್ಕರ್ ೬೮ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಪುಪ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಪುಟ್ಟಸ್ವಾಮಿಗೌಡ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರ ಧ್ವನಿ ಎತ್ತುವ ಮೂಲಕ ಸಮಾತೆಯಿಂದ ಬದುಕು ಸಾಗಿಸಲು ಅಂಬೇಡ್ಕರ್ ಅವರ ಚಿಂಸಹಕಾರಿಯಾಗಿದೆ. ಅಂದಿನ ಮನು ಧರ್ಮದಲ್ಲಿನ ಕೆಲ ಪದ್ದತಿಗಳನ್ನು ತೊಡೆದು ಹಾಕಲು ಮನುಧರ್ಮ ವಿದ್ವಾಂಸರಿಗೆ ಮನ ಪರಿವರ್ತನೆ ಮಾಡುವ ಮೂಲಕ ಸಮಾಜದ ಏಕತೆಗೆ ನಾಂದಿ ಹಾಡಿದರು ಎಂದರು.
ಅAಬೇಡ್ಕರ್ ಅವರು ರಾಷ್ಟಿಯ ಪ್ರಜ್ಞೆ, ವಾಸ್ತವವಾಗಿ ಅಂಬೇಡ್ಕರ್ ಅವರೊಳಗಿನ ಐಕ್ಯತೆ, ರಾಷ್ಟ ಪ್ರೇಮದ ಜಾಗೃತ ಜ್ಯೋತಿ ಅಗಿತ್ತು, ಅಂಬೇಡ್ಕರ್ ಅವರು ಸಂವಿಧಾನದ ಶಿಲ್ಪಿ, ನಿಯಮಗಳ ಅನುಷ್ಠಾನಕಾರ, ಸಮಾನತೆಯ ಹರಿಹಾರ, ಮೀಸಲಾತಿ ನೀಡಿಕೆಯ ಮಹಾತಪಸ್ವಿಯಾಗಿದ್ದ ಅವರು ಹಿಂದೂ ಧರ್ಮದ ಕೆಲ ನೂನ್ಯತೆಗಳನ್ನು ಸಹಿಸದೆ ಪ್ರಪಂಚದ ಅತ್ಯಂತ ಶೇಷ್ಠ ಧರ್ಮವಾದ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದರು ಎಂದರು.
ಅAಬೇಡ್ಕರ್ ಬಾಲ್ಯದಿಂದಲೂ ಅನುಭವಿಸದ ಕಷ್ಟ, ಅಸ್ಪಶ್ಯತೆಯಿಂದ ಹೊರಗೆ ಬರಲು ಪ್ರತಿಯೊಬ್ಬರೂ ಶೈಕ್ಷೆಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಪ್ರತಿಪಾದಿಸಿದ ಅವರು ದೇಶಕ್ಕೆ ಸಮಾನತೆಯ ಸಂವಿಧಾನ ನೀಡುವ ಮೂಲಕ ಸಮ ಸಮಾಜಕ್ಕೆ ಶ್ರಮಿಸಿದ್ದರು ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪಗೌಡ ಮಾತನಾಡಿ, ಅಂಬೇಡ್ಕರ್ ಅವರ ಮಾತುಗಳಲ್ಲಿ ದಿಟ್ಟತೆಯಿತ್ತು , ಖಚಿತತೆಯಿತ್ತು, ನನ್ನ ಜನರು ಎಲ್ಲ ಸಂಕೋಲೆಗಳಿ0ದ ಬಿಡುಗಡೆ ಪಡೆದು ಎಲ್ಲರಂತೆ ಸಮಾಜದ ಮುಖ್ಯವಾಹಿನಿಯ ಪ್ರಜೆಗಳಾಗಬೇಕು ಎಂದು ತಮ್ಮ ಜೀವನವನ್ನೇ ಎಲ್ಲ ವರ್ಗದ ಜನರಿಗೆ ದಾರೆ ಎರೆದರು ಎಂದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಆಶಾ, ನಗರಸಭೆ ಅಧ್ಯಕ್ಷ ಲಕ್ಷಿನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಸದಸ್ಯರಾದ ಪದ್ಮಮ್ಮ, ರಾಜ್ಕುಮಾರ್, ಮಂಜುಳ, ಪೌರಾಯುಕ್ತೆ ಡಿ.ಎಂ.ಗೀತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನರೆಡ್ಡಿ ಇದ್ದರು.