ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರೋಧಿಸಿ ಪಾದಯಾತ್ರೆ
1 min readಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರೋಧಿಸಿ ಪಾದಯಾತ್ರೆ
ಡಿ.೭ರಿಂದ ನಡೆಯಲಿರುವ ಬೃಹತ್ ಪ್ರತಿಭಟನೆ
ಗುಬ್ಬಿಯಿಂದ ಆರಂಭವಾಗಿ ತುಮಕೂರು ಡಿಸಿ ಕಚೇರಿ ಮುಂದೆ ಭರಣಿ
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು-ನಮ್ಮ ಹಕ್ಕು ಘೋಷಣೆಯೊಂದಿಗೆ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್‌ಡಿಎ ಮಿತ್ರ ಪಕ್ಷಗಳು ಮತ್ತು ಜಿ¯್ಲೆಯ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಲೊಳ್ಳಲಾಗಿದೆ.
ತುರುವೇಕೆರೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ಜಂಟಿ ಸುದ್ದಿಘೋಷ್ಠಿಯಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ತುಮಕೂರು ಜಿಲ್ಲೆ ಯಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಸಲಿರುವ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು-ನಮ್ಮ ಹಕ್ಕು ಘೋಷಣೆಯೊಂದಿಗೆ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿಸೆಂಬರ್ 7 ಮತ್ತು 8 ರಂದು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಡಿಸೆA0ಬರ್ 7ರ ಬೆಳಿಗ್ಗೆ 10.30ಕ್ಕೆ ಸಾಗರನಹಳ್ಳಿ ಗೇಟ್ ಗುಬ್ಬಿ ತಾಲ್ಲೂಕಿನಿಂದ ಪ್ರಾರಂಭವಾಗಲಿರುವ ಪಾದಯಾತ್ರೆ, ನಿಟ್ಟೂರು ಮಾರ್ಗವಾಗಿ ಬಂದು ಗುಬ್ಬಿ ಬಸ್ ನಿಲ್ದಾಣ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು. ನಂತರ ರಾಷ್ಟಿçಯ ಹೆದ್ದಾರಿ 206 ಮೂಲಕ ಕಳ್ಳಿಪಾಳ್ಯ ಗೇಟ್ ಬಳಿ ಇರುವ ಓಂ ಪ್ಯಾಲೇಸ್ ತಲುಪಿ, ರಾತ್ರಿ ವಾಸ್ತವ್ಯ ಮಾಡಲಾಗುವುದು. ಮರುದಿನ ಅಂದರೆ ಡಿಸೆಂಬರ್ 8ರ ಬೆಳಿಗ್ಗೆ 9 ಗಂಟೆಗೆ ಎರಡನೇ ದಿನದ ಪಾದಯಾತ್ರೆ ಪ್ರಾರಂಭವಾಗಿ, ತುಮಕೂರು ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ತಲುಪಿ, ಕಛೇರಿ ಮುಂಭಾಗದಲ್ಲಿ ಅನಿರ್ಧಿಷ್ಠ ಭರಣಿ ನಡೆಸಲಾಗುವುದು ಎಂದರು.
ಮಾಜಿ ಶಾಸಕ ಮಸಾಲ ಜಯರಾಮ್ ಮಾತನಾಡಿ, ಜಿಲ್ಲೆ ಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಈ ಯೋಜನೆಗೆ ನಮ್ಮ ವಿರೋಧವಿದ್ದು, ನೀರು ತೆಗೆದುಕೊಂಡು ಹೋಗಬೇಕಾದರೆ ರೈತರ ಹೆಣಗಳ ಮೇಲೆ ತೆಗೆದುಕೊಂಡು ಹೋಗಲಿ. ಯಡೆಯೂರಪ್ಪ ಅವರ ಅವಧಿಯಲ್ಲಿ 1500 ಕೋಟಿ ಅನುದಾನ ನಾಲೆಯ ಅಗಲೀಕರಣಕ್ಕೆ ನೀಡಿದ್ದರು. ನಾಲೆಯಲ್ಲಿ ೮೦೦ ಕ್ಯೂಸೆಕ್ಸ್ ಹರಿಯುವ ಜಾಗದಲ್ಲಿ 1800 ಕ್ಯೂಸೆಕ್ಸ್ ನೀರು ಹರಿಯುವಂತೆ ಮಾಡಲಾಗಿದೆ ಎಂದರು.
ಮಾಗಡಿ ಚನ್ನಪಟ್ಟಣ ಬಾಗಗಳಿಗೆ ಕುಡಿಯುವ ನೀರು ಕೊಡಲು ನಮ್ಮ ವಿರೋಧವಿಲ್ಲ, ತೆರೆದ ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲಿ, ಅದನ್ನು ಬಿಟ್ಟು ಹೆಚ್ಚು ವ್ಯಾಸ ಹೊಂದಿರುವ ಕೊಳವೆಗಳ ಮೂಲಕ ನೀರು ಕೊಂಡೊಯ್ಯುವುದಕ್ಕೆ ನಮ್ಮ ವಿರೋಧವಿದೆ. ನೈಸರ್ಗಿಕವಾಗಿ ನೀರು ಹರಿಸಿ ಕುಣಿಗಲ್‌ಗೆ ನೀರುಕೊಡಲು ನಮ್ಮ ವಿರೋಧವಿಲ್ಲ, ಕುಣಿಗಲ್ ತಾಲ್ಲೂಕಿಗೆ ಕುಡಿಯಲು ಮತ್ತು ವ್ಯವಸಾಯಕ್ಕೆ ನೀರಿನ ಕೊರತೆ ಇಲ್ಲ ಎಂದರು.
ಈ ಸರ್ಕಾರ ಯಾಕೆ ಹಠಕ್ಕೆ ಬಿದ್ದಿದೆ ಗೊತ್ತಿಲ್ಲ, ನಾವು ರಕ್ತ ಕೊಟ್ಟೆವು ಕೊಳವೆ ಮೂಲಕ ನೀರು ಕೊಡೆವು ಎಂದು ಹೇಳಿ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು, ಪಕ್ಷಾತೀತವಾಗಿ ರೈತರು, ಚುನಾಯಿತ ಪ್ರತಿನಿಧಿಗಳು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಮಾಡಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾದ್ಯಕ್ಷ ಕೆ.ವಿ ಮೃತ್ಯುಂಜಯ, ವಿಜಯೇಂದ್ರ ಮಾವಿನಕೆರೆ, ಯೋಗೀಶ್ ವೆಂಕಟಾಪುರ, ಕಾಳಂಜಿಹಳ್ಳಿ ಸೋಮಶೇಖರ್, ಡಿ.ಎಂ ಸುರೇಶ್, ತ್ಯಾಗರಾಜ್ ಇದ್ದರು.