ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ
1 min readಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ
ಕೊಲೆ ಮಾಡಿದ ನಂತರ ಪೊಲೀಸರಿಗೆ ಶರಣಾದ ಪತಿ
ಸಾಂಸಾರಿಕ ಕಲಹದಿಂದಾಗಿ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಪತಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಹೆಬ್ಬಾಳು ಲಕ್ಷ್ಮೀಕಾಂತ ನಗರದ ನಿವಾಸಿ ಮನು ಎಂಬುವರ ಪತ್ನಿ ಶ್ರುತಿ (28) ಕೊಲೆಯಾದ
ಮಹಿಳೆಯಾಗಿದ್ದು, ಕೊಲೆ ಮಾಡಿದ ಪತಿ ಮನು. ಐದು ವರ್ಷಗಳ ಹಿಂದೆ ಮೈಸೂರಿನ ಅಗ್ರಹಾರ ಸರ್ಕಲ್ ಬಳಿಯ ನಿವಾಸಿ ಶೃತಿ ಅವರನ್ನು, ಟೈಲ್ಸ್ ಅಂಗಡಿಯೊAದ ರಲ್ಲಿ ಕೆಲಸ ಮಾಡುತ್ತಿದ್ದ ಮನು ಮದುವೆಯಾಗಿದ್ದ. ನಂತರ ಸಾಂಸಾರಿಕ ಕಲಹಗಳಿಂದಾಗಿ ಕುಟುಂಬದಲ್ಲಿ ಒಡಕು ಉಂಟಾಗಿತ್ತು. ಹಿರಿಯರು ಹಲವು ಬಾರಿ ಬುದ್ಧಿವಾದ ಹೇಳಿ ಇಬ್ಬರನ್ನು ಒಂದು ಗೂಡಿಸಿದ್ದರು. ಆದರೂ ಆತ ತನ್ನ ಚಾಳಿ ಬಿಡದೆ ಪತ್ನಿಯನ್ನು ಪೀಡಿಸತೊಡಗಿದ್ದ ಎಂದು ಕುಟುಂಬದವರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮಂಗಳವಾರ ರಾತ್ರಿ ಎಂದಿನ0ತೆ ಊಟ ಮಾಡಿ ಮಲಗಿದ್ದ ಶೃತಿಯನ್ನು ಇಂದು ಮುಂಜಾನೆ ಚಾಕುವಿನಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಪ್ರಕರಣ ದಾಖಲಿಸಿದ ಠಾಣಾ ಇನ್ಸ್ಪೆಕ್ಟರ್ , ಸಿಬ್ಬಂದಿಯೊAದಿಗೆ ಘಟನಾ ಸ್ಥಳಕ್ಕೆ ಭಾವಿಸಿ, ಮಹಜರು ನಡೆಸಿದರು. ನಂತರ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿ, ಮರಣೋ ತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಿದರು.
ಈ ಸಂಬ0ಧ ಪ್ರಕರಣ ದಾಖಲಿಸಿಕೊಂಡಿರುವ ಇನ್ಸ್ಪೆಕ್ಟರ್ ಶರಣಾದ ಪತಿ ಮನುವನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ನ್ಯಾಯಾಲ ಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟಾರೆ ಪ್ರೀತಿಸಿ ಮದುವೆಯಾಗಿ ಬಾಳಿ ಬದುಕಬೇಕಿದ್ದ ಜೋಡಿ ಈ ರೀತಿಯಾಗಿರುವುದು ದುರಂತವೇ ಸರಿ.