ಸಿದ್ಧಗಂಗಾ ಶ್ರೀಗಳ ಪುತ್ಥಳಿ ವಿರೂಪಕ್ಕೆ ಖಂಡನೆ
1 min read
ಸಿದ್ಧಗಂಗಾ ಶ್ರೀಗಳ ಪುತ್ಥಳಿ ವಿರೂಪಕ್ಕೆ ಖಂಡನೆ
ಗೌರಿಬಿದನೂರಿನಲ್ಲಿ ಪ್ರತಿಭಟನೆ, ತಹಸೀಲ್ದಾರ್‌ಗೆ ಮನವಿ
ಬೆಂಗಳೂರು ಮಹಾನಗರದ ಶ್ರೀ ವೀರಭದ್ರ ನಗರದಲ್ಲಿ ತ್ರಿವಿಧ ದಾಸೋಹಿ, ನಡೆದಾಡುವ ದೇವರು ವಿಶ್ವರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಗಳ ಪುತ್ಥಳಿ ವಿರೂಪಗೊಳಿಸಿರುವುದನ್ನು ತಾಲೂಕು ವೀರಶೈವ ಸೇವಾ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಮಹಾಸಭೆ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಗೌರಿಬಿದನೂರು ತಹಸೀಲ್ದಾರ್‌ಗೆ ಮನವಿ ನೀಡಿದ ಗೌರಿಬಿದನೂರು ತಾಲೂಕು ವೀರಶೈವ ಸೇವಾ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡರು, ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಗೌರಿಬಿದನೂರು ತಾಲೂಕು ವೀರಶೈವ ಸೇವಾ ಸಮಿತಿ ಅಧ್ಯಕ್ಷ ತರಿದಾಳು ಚಿಕ್ಕಣ್ಣ ಮಾತನಾಡಿ, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ಅನ್ನದಾಸೋಹದ ಜೊತೆಗೆ ಅಕ್ಷರ ದಾಸೋಹವನ್ನು ನೀಡುವ ಮೂಲಕ ಎಲ್ಲ ವರ್ಗದವರ ಶ್ಯೆಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ ಎಂದರು.
ಅ0ತಹವರ ಪುತ್ಥಳಿಯನ್ನು ಕೆಲ ಕಿಡಿಗೇಡಿಳು ವಿರೂಪಗೊಳಿಸಿರುವುದು ಅಕ್ಷಮ್ಯ ಅಪರಾದವಾಗಿದೆ, ಕೂಡಲೇ ಸರಕಾರ ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು, ವಿರೂಪಗೊಂಡಿರುವ ಪುತ್ಥಳಿಯನ್ನು ಪುನರ್ ಸ್ಥಾಪಿಸಬೇಕು ಎಂದು ಅಗ್ರಹಿಸಿದರು. ತಾಲೂಕು ಉಪ ತಹಸೀಲ್ದಾರ್ ಅಶಾ ಅವರಿಗೆ ಮನವಿ ಸಲ್ಲಿಸಿದರು. ವೀರಶೈವ ಸೇವಾ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್,ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬೋರ್ವೆಲ್ ಮಹೇಂದ್ರ, ಮಾಜಿ ಅದ್ಯಕ್ಷ ನಟರಾಜ್, ಕಾರ್ಯದರ್ಶಿ ಎನ್.ಆಕ್.ರವಿಕುಮಾರ್, ಖಜಾಂಚಿ ಆರ್. ಮಂಜುನಾಥ್ ಇದ್ದರು.