ಪುಷ್ಪ 2 ಸಿನಿಮಾ ಗೆ ಚಿಕ್ಕಬಳ್ಳಾಪುರ ದಲ್ಲಿ ಭರ್ಜರಿ ರೆಸ್ಪಾನ್ಸ್
1 min readಪುಷ್ಪ 2 ಸಿನಿಮಾ ಗೆ ಚಿಕ್ಕಬಳ್ಳಾಪುರ ದಲ್ಲಿ ಭರ್ಜರಿ ರೆಸ್ಪಾನ್ಸ್
ಬಹುನಿರೀಕ್ಷಿತ ಫ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ
ತೀವ್ರ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಂದೇ ಬಂದಿದೆ. ಪುಷ್ಪ ಚಿತ್ರ ನೋಡಿ, ಭಾಗ ೨ಕ್ಕೆ ಕಾಯುತ್ತಿದ್ದ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ, ವಿಶ್ವದಾದ್ಯಂತ ಪುಷ್ಪ2 ಚಿತ್ರ ಬಿಡುಗಡೆಯಾಗಿದ್ದು, ಚಿಕ್ಕಬಳ್ಳಾಪುರದಲ್ಲಿಯೂ ಧರ್ಜರಿ ರೆಸ್ಪಾನ್ಸ್ ದೊರೆತಿದೆ.
ಹೌದು, ಪುಷ್ಪ 1ರಲ್ಲಿಯೇ ಅಭಿಮಾನಿಗಳ ಕುತೂಹಲ ಮುಗಿಲು ಮುಟ್ಟಿತ್ತು. ಪುಷ್ಪ ಅಂದ್ರೆ ಫ್ಲವರ್ ಅಲ್ಲ ಫೈಯರ್ ಎಂಬ ಡೈಲಾಗ್ ಸಿಕ್ಕಾಪಟ್ಟೆ ಫೆÃಮಸ್ ಆಗಿತ್ತು. ಹಾಗಾಗಿಯೇ ಎರಡನೇ ಭಾಗ ಯಾವಾಗ ಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇಂದು ಪುಷ್ಪ2 ಬಿಡುಗಡೆಯಾಗಿದ್ದು, ಸಿನಿಮಾಗೆ ಚಿಕ್ಕಬಳ್ಳಾಪುರದಲ್ಲಿ ಉಥ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪುಷ್ಪ2 ಚಿತ್ರ ಅಲ್ಲು ಅರ್ಜುನ್, ರಶ್ಮೀಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾವಾಗಿದೆ. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರಗಳಿಗೆ ಮುಗಿ ಬಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರ ಮಂದಿರದಲ್ಲಿ ಜನಸಾಗರವೇ ನೆರೆದಿತ್ತು. ಚಿತ್ರ ಪ್ರದರ್ಶನಕತ್ಕೂ ಮೊದಲು ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಅಲ್ಲದೆ ನಟ ಅಲ್ಲು ಅರ್ಜುನ್ ಕಟೌಟ್‌ಗೆ ಬೃಹತ್ ಹಾರ ಹಾಕಿ ಸಂಭ್ರಮಿಸಿದರು.