ಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್

ಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ

ಬಾಗೇಪಲ್ಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಸಂಭ್ರಮ

December 26, 2024

Ctv News Kannada

Chikkaballapura

ಬೀದರ್ನಲ್ಲಿ ನಮ್ಮ ಭೂಮಿ ನಮ್ಮಹಕ್ಕು ಆಂದೋಲನಕ್ಕೆ ಚಾಲನೆ

1 min read

ಬೀದರ್‌ನಲ್ಲಿ ವಕ್ಫ್ ವಿರುದ್ದ ಬಿಜೆಪಿ ರಣಕಹಳೆ

ಬೀದರ್ನಲ್ಲಿ ನಮ್ಮ ಭೂಮಿ ನಮ್ಮಹಕ್ಕು ಆಂದೋಲನಕ್ಕೆ ಚಾಲನೆ

ವಕ್ಫ್ ಮಂಡಳಿ ಕಿತಾಪತಿ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಹಮ್ಮಿಕೊಂಡ ನಮ್ಮ ಭೂಮಿ-ನಮ್ಮ ಹಕ್ಕು ಆಂದೋಲನಕ್ಕೆ ಬಸವನಾಡು ಬೀದರಿನಿಂದ ಚಾಲನೆ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಪಡೆ ರಣಕಹಳೆ ಮೊಳಗಿಸಿದೆ.

ಬೀದರ್ ನಗರದ ಪ್ರಮುಖ ವ್ಯಾಪಾರಿ ಕೇಂದ್ರ ಗಾಂಧಿಗ0ಜ್ ಬಸವೇಶ್ವರ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪೂಜೆ ಸಲ್ಲಿಸುವ ಮೂಲಕ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟಕ್ಕೆ ಚಾಲನೆ ನೀಡಿದರು. ಬಳಿಕ ದೇವಸ್ಥಾನದ ಪಕ್ಕದಲ್ಲೆ ರೈತರ, ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕ ಸಮಾವೇಶ ಉದ್ದೆಸಿಸಿ ಮಾತನಾಡಿದ ವಿಜಯೇಂದ್ರ ಸೇರಿದಂತೆ ಬಿಜೆಪಿ ಪ್ರಮುಖರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜೀವ ಹೋದರೂ ಚಿಂತೆಯಿಲ್ಲ, ವಕ್ಫ್ ಮಂಡಳಿಗೆ ಒಂದಿ0ಚೂ ಜಾಗ ಬಿಡೋದಿಲ್ಲ ಅಂತ ಗರ್ಜಿಸಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ರೈತ ವಿರೋಧಿ ನೀತಿ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಬಿ.ವೈ. ವಿಜಯೇಂದ್ರ ಗುಡುಗಿದರು. ಬಳಿಕ ಗಾಂಧಿಗ0ಜ್‌ದಿ0ದ ಜಿಲ್ಲಾಧಿಕಾರಿ ಕಚೆರಿ ವರೆಗೆ ಎತ್ತಿನಗಾಡಿಯಲ್ಲಿ ಬಂದ ಬಿ ವೈ ವಿಜಯೇಂದ್ರ ಸೆರಿದಂತೆ ಬಿಜೆಪಿ ನಾಯಕರು ಸಹಸ್ರಾರು ಕಾರ್ಯಕರ್ತರೋಂದಿಗೆ ಪ್ರತಿಭಟನೆ ಮೆರವಣಿಗೆ ಮೂಲಕ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೋಗಿದರು.

ವಕ್ಫ್ ಮಂಡಳಿ ಹೆಸರು ರೈತರ ಪಹಣಿಯಿಂದ ಮಠ ಮಂದಿರ ಹಾಗೂ ಸಾರ್ವಜನಿಕ ಆಸ್ತಿಯಿಂದ ತೆಗೆದು ಹಾಕುವಂತೆ ಜಿಲ್ಲಾಧಿಕಾರಿಗೆ ಮನವಿ ಸಲಿಸಿದ್ರು. ಈ ಸಂಧರ್ಭದಲ್ಲಿ ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಡಾ. ಸಿದ್ದು ಪಾಟೀಲ್, ಬಸವರಾಜ ಮತ್ತಿಮಡು, ಮಾರುತಿರಾವ ಮುಳೆ, ಮಾಜಿ ಸಚಿವ ಭಗವಂತ ಖೂಬಾ, ಶ್ರೀರಾಮುಲು, ಡಾ.ಅಶ್ವತ್ಥನಾರಾಯಣ, ಮುರುಗೇಶ ನಿರಾಣಿ, ರೇಣುಕಾಚಾರ್ಯ, ಬೈರತಿ ಬಸವರಾಜ, ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಇದ್ದರು.

About The Author

Leave a Reply

Your email address will not be published. Required fields are marked *