ಅನಾದಿ ಕಾಲದಿಂದಲೂ ಹರಕು ಬಟ್ಟೆ, ಮುರುಕು ರೊಟ್ಟಿ
1 min readಅನಾದಿ ಕಾಲದಿಂದಲೂ ಹರಕು ಬಟ್ಟೆ, ಮುರುಕು ರೊಟ್ಟಿ
ಶತಮಾನ ಕಳೆದರೂ ಬದಲಾಗದ ನಿರ್ಗತಿಕರ ಬದುಕು
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಲೂ ವಂಚಿತರಾದ ನಿರ್ಗತಿಕರು
ನಂಜನಗೂಡಿನ ನಗರಸಭೆ ಅಧಿಕಾರಿಗಳ ನಿರ್ಲಕ್ಷö್ಯ
ಪ್ರತಿದಿನ ನಂಜು0ಡನ ಮುಡಿಗೆ ತುಳಸಿ ನೀಡುವವರ ಬದುಕು ಮೂರಾಬಟ್ಟೆ
ನಂಜನಗೂಡು ನಗರಸಭಾ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಗ್ಯಾರಂಟಿ ಯೋಜನೆಗಳಿಂದ ನಿರ್ಗತಿಕರು ವಂಚಿತರಾಗಿದದಾರೆ. ಧಾರ್ಮಿಕ ಪುಣ್ಯಕ್ಷೇತ್ರ ನಂಜು0ಡೇಶ್ವರನ ಸನಿಹದಲ್ಲಿಯೇ ತಲೆಮಾರುಗಳಿಂದ ವಾಸಿಸುತ್ತಿರುವ ನಿರ್ಗತಿಕ ಕುಟುಂಬಗಳು ಇಂದು ನಿರ್ಗತಿಕರಾಗಿಯೇ ಜೀವಿಸುವಂತಾಗಿದೆ.
ತಮ್ಮ ಪೂರ್ವಿಕರ ಕಾಲದಿಂದಲೂ ನಂಜು0ಡೇಶ್ವರನಿಗೆ ಪ್ರಿಯವಾದ ತುಳಸಿಹಾರ ತಯಾರಿಕೆಯೇ ಇವರ ಕಾಯಕ. ಸ್ವಂತ ಸೂರಿಲ್ಲ, ದಾಖಲಾತಿ ಇದ್ದರೂ ಸರ್ಕಾರದ ಗ್ಯಾರಂಟಿ ಯೋಜನೆ ದೊರೆಯುತ್ತಿಲ್ಲ. ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಹೀನಾಯ ಪರಿಸ್ಥಿತಿ ಜೀವನ ದೂಡುತ್ತಿರುವ ಆರು ಕುಟುಂಬಗಳ 30 ಕ್ಕೂ ಹೆಚ್ಚು ಮಂದಿಯ ಕರುಣಾಜನಕ ಸ್ಥಿತಿಯೇ ಈ ಸ್ಟೋರಿ.
ನಂಜನಗೂಡು ಪಟ್ಟಣದ ಹಳ್ಳದ ಕೇರಿಯ ಮುಖ್ಯರಸ್ತೆ ಬದಿ ವಾಸವಿರೋ ಈ ಕುಟುಂಬಗಳು, ಇವರು ವಾಸವಿರೋ ನಿವೇಶನ ಇವರದಲ್ಲ, ಬಯಲು ಶೌಚ ಮುಕ್ತ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೀವ್ರ ಕಸರತ್ತು ನಡೆಸುತ್ತಿದ್ದರೆ ಇವರಿಗೆ ಒಂದು ಪುಟ್ಟ ಶೌಚಾಲಯವೂ ಇಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದು ಬೆಟ್ಟದಷ್ಟು ಭರವಸೆಗಳನ್ನು ತುಂಬುತ್ತಾರೆ .
ಈವರೆಗೂ ಸೌಲಭ್ಯಗಳು ಮಾತ್ರ ದೊರೆತಿಲ್ಲ. ನಮಗೂ ಕೇಳಿ ಕೇಳಿ ಸಾಕಾಗಿದೆ ಯಾರೊಬ್ಬರೂ ನಮಗೆ ಸಹಾಯ ಮಾಡಿಲ್ಲ ಅಂತ ನೊಂದು ಆಕ್ರೋಶ ವ್ಯಕ್ತಪಡಿಸುತತಾರೆ ಈ ನಿರ್ಗತಿಕರು. ಇನ್ನಾದರೂ ಆಡಳಿತ ಎಚ್ಚೆತ್ತು ಇವರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುವರೆ ಎಂಬುದನ್ನು ಕಾದು ನೋಡಬೇಕಿದೆ.